ಬೆಂಗಳೂರು: ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಜಿಯೋಮಾರ್ಟ್ ಪ್ರಸ್ತುತಿಯೊಂದಿಗೆ 'ಅಡಿಡಾಸ್' ಸಹಯೋಗದ 'ಜಿಯೋಮಾರ್ಟ್ ಫ್ರೀಡಂ ರನ್' ಆಗಸ್ಟ್ 13ರ ಭಾನುವಾರದಂದು ಬೆಂಗಳೂರಿನ ಹಲಸೂರು ಕೆರೆ ಸಮೀಪದ ಗಂಗಾಧರ ಚೆಟ್ಟಿ ರಸ್ತೆಯ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ನಲ್ಲಿ ನಡೆಯಲಿದೆ. 'ನಿಮ್ಮ ಸ್ವಂತ ಓಟವನ್ನು ಓಡಿ, ನಿಮ್ಮ ಸ್ವಾತಂತ್ರ್ಯವನ್ನು ಆನಂದಿಸಿ' ಎಂಬ ಧ್ಯೇಯದೊಂದಿಗೆ ಓಟ ಆಯೋಜಿಸಲಾಗಿದೆ.
ಅಡಿಡಾಸ್ ಸಹಯೋಗದ 'ಜಿಯೋಮಾರ್ಟ್ ಫ್ರೀಡಂ ರನ್' ಎರಡು ವಿಭಾಗಗಳಲ್ಲಿ ನಡೆಯಲಿದೆ. ಬೆಳಗ್ಗೆ 5 ಗಂಟೆಯಿಂದ 10ಕೆ ಓಟದ ಸ್ಪರ್ಧೆ ನಡೆದರೆ, ಬೆಳಗ್ಗೆ 6ರಿಂದ 5ಕೆ ಓಟ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಾರದಲ್ಲಿ ನಡೆಯಲಿರುವ ಈ ಕೂಟದಲ್ಲಿ ನೂರಾರು ಫಿಟ್‌ನೆಸ್ ಉತ್ಸಾಹಿಗಳು ಮತ್ತು ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಯಾವುದೇ ಶುಲ್ಕವಿಲ್ಲದೆ 18 ವರ್ಷ ಮೇಲ್ಪಟ್ಟ ಎಲ್ಲರೂ ಓಟದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಅಡಿಡಾಸ್ ತನ್ನ ಅಡಿಡಾಸ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಈ ಕೂಟವನ್ನು ವಿಸ್ತರಿಸುತ್ತದೆ, ಅವರ ಡಿಜಿಟಲ್ ಫಿಟ್‌ನೆಸ್ ಸಮುದಾಯವನ್ನು ಈ ರನ್‌ಗೆ ಸೇರಲು ಮತ್ತು ಅವರ ಸಕ್ರಿಯ ವಾರಾಂತ್ಯಕ್ಕೆ ಸೇರಿಸಲು ಅನುವು ಮಾಡಿಕೊಡುತ್ತದೆ. ಓಟ ಪೂರ್ಣಗೊಂಡ ನಂತರ ಎಲ್ಲಾ ಓಟಗಾರರಿಗೆ ಪದಕಗಳು ಮತ್ತು ಇ-ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ವಿಜೇತರು ಪದಕಗಳು, ಪ್ರಮಾಣಪತ್ರಗಳು ಮತ್ತು ಅತ್ಯಾಕರ್ಷಕ ಅಡಿಡಾಸ್ ಸರಕುಗಳನ್ನು ಪಡೆಯಲಿದ್ದಾರೆ.
ನೋಂದಣಿ ಲಿಂಕ್: https://bit.ly/440hYGP
ದಿನಾಂಕ: 13 ಆಗಸ್ಟ್, ಭಾನುವಾರ, 2023
ಸಮಯ: ಬೆಳಗ್ಗೆ 4:45ಕ್ಕೆ ಓಟಗಾರರು ಹಾಜರಿರಬೇಕು.
ಸ್ಥಳ: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್, ಗಂಗಾಧರ ಚೆಟ್ಟಿ ರಸ್ತೆ, ಹಲಸೂರು ಕೆರೆ, ಬೆಂಗಳೂರು.