ಕ್ರೀಡೆ

2008ರ ಐಪಿಎಲ್​ ಮೊದಲ ಆವೃತ್ತಿಯಲ್ಲೇ ಶತಕ ಸಿಡಿಸಿದ ಸ್ಟಾರ್​ ಬ್ಯಾಟ್ಸ್​​ಮನ್​ಗಳು ಇವರೇ ನೋಡಿ…..

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಆವೃತ್ತಿಗೆ ಸದ್ಯ ದಿನಗಣನೆ ಆರಂಭಗೊಂಡಿದ್ದು, ಈ ಬಾರಿ ಅದ್ದೂರಿ ಓಪನಿಂಗ್​ ಕಾರ್ಯಕ್ರಮ ಚೆನ್ನೈನ ಚೇಪಾಕ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಕುರಿತು ಈಗಾಗಲೇ ಬಿಸಿಸಿಐ ಅಧಿಕೃತ ಮಾಹಿತಿ ತಿಳಿಸಿದ್ದು, ಈ ಸೀಸನ್​ನ ಮೊದಲ 21 ದಿನಗಳ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಐಪಿಎಲ್​ 2024ರ ಕಿಕ್​ಸ್ಟಾರ್ಟ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು​ ಸೆಣಸಾಡಲಿದ್ದು, ಮೊದಲ ಪಂದ್ಯದ ಮೂಲಕ ಯಾರು ಈ ಸೀಸನ್​ ಶುಭಾರಂಭ ಮಾಡಲಿದ್ದಾರೆ ಎಂಬ ಕುತೂಹಲ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಬೆಂಬಿಡದೆ ಕಾಡುತ್ತಿದೆ. ಇಂಡಿಯನ್​ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ಹೆಚ್ಚು ವೈರತ್ವ, ಪೈಪೋಟಿ ಇರುವ ತಂಡಗಳೇ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ನೋಡುಗರಲ್ಲಿ ಕಿಚ್ಚು ಹೆಚ್ಚಿಸುತ್ತಿದೆ.

ಪ್ರತಿವರ್ಷವೂ ನಡೆಯಲಿರುವ ಐಪಿಎಲ್ ಸೀಸನ್​ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗೆ ಪರ್ಪಲ್ ಕ್ಯಾಪ್​ ಮತ್ತು ಅತೀ ಹೆಚ್ಚು ರನ್​ ಗಳಿಸಿದ ಬ್ಯಾಟ್ಸ್​​ಮನ್​ಗೆ ಆರೆಂಜ್ ಕ್ಯಾಪ್ ನೀಡಿ, ಪ್ರೋತ್ಸಾಹಿಸಲಾಗುತ್ತದೆ. ಇದೇ ರೀತಿ ಇಡೀ ಆವೃತ್ತಿಯಲ್ಲಿ ವಿಶೇಷ ಪ್ರದರ್ಶನ ನೀಡಿದ ಆಟಗಾರರ ದಾಖಲೆ ಐಪಿಎಲ್ ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ. ಬ್ಯಾಟ್ಸ್​ಮನ್​ಗಳು ಆಯಾ ಪಂದ್ಯದಲ್ಲಿ​ ತಮ್ಮ ತಂಡಕ್ಕಾಗಿ ನೀಡುವ ರನ್ ಕೊಡುಗೆಗಳು ಟೀಮ್​ನ ಗೆಲುವಿಗೆ ಪ್ರಮುಖ ಕಾರಣವಾಗುತ್ತದೆ.

ಹಾಗೆ ನೋಡುವುದಾದರೆ ಐಪಿಎಲ್​ನ ಮೊದಲ ಆವೃತ್ತಿ ಪ್ರಾರಂಭವಾಗಿದ್ದು 2008ರಲ್ಲಿ. ಆ ವರ್ಷದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದ ಸ್ಟಾರ್ ಬ್ಯಾಟ್ಸ್​ಮನ್​ಗಳು ಯಾರೆಲ್ಲಾ? ಎಂಬುದರ ವಿವರ ಹೀಗಿದೆ.

ಬ್ರೆಂಡಂನ್ ಮೆಕಾಲಮ್​ (ಕೆಕೆಆರ್)- 158*(63 ಎಸೆತ)

ಮೈಕ್ ಹಸ್ಸಿ (ಸಿಎಸ್​ಕೆ)- 116*(54)

ಆ್ಯಂಡ್ರಿವ್ ಸೈಮಂಡ್ಸ್​ (ಡೆಕನ್​ ಚಾರ್ಜರ್ಸ್​)- 117*(53)

ಆಡಮ್ ಗಿಲ್​ಕ್ರಿಸ್ಟ್​ (ಡೆಕನ್​ ಚಾರ್ಜರ್ಸ್​)- 109*(47)

ಸನತ್ ಜಯಸೂರ್ಯ (ಮುಂಬೈ ಇಂಡಿಯನ್ಸ್​)- 114*(48)

ಶಾನ್ ಮಾರ್ಶ್​ (ಪಂಜಾಬ್ ಕಿಂಗ್ಸ್​)- 115(69)