

ಗುಜರಾತ್: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಪ್ರಮುಖರಾದ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪೂರ್ವ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆದಿದ್ದು, ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಗಣ್ಯರು ಆಗಮಿಸಿರುವುದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಅನಂತ್-ರಾಧಿಕಾ ಜೋಡಿಯ ವಿವಾಹ ಪೂರ್ವ ಕಾರ್ಯಕ್ರಮ ಸಖತ್ ಗ್ರ್ಯಾಂಡ್ ಆಗಿ ಮುಗಿದಿದ್ದು, ಹೆಸರಾಂತ ಸೆಲೆಬ್ರಿಟಿಗಳ ದಂಡೇ ಸಮಾರಂಭಕ್ಕೆ ಆಗಮಿಸಿತ್ತು.
ಅನಂತ್ ಮತ್ತು ರಾಧಿಕಾ ಅವರ ವಿವಾಹ ಪೂರ್ವ ಕಾರ್ಯಕ್ರಮಗಳ ಝಲಕ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿವೆ. ಮೂರು ದಿನ ಗುಜರಾತ್‌ನ ಜಾಮ್‌ನಗರ ಗಣ್ಯಾತಿ ಗಣ್ಯರಿಂದಲೇ ಕಂಗೊಳಿಸಿದೆ. ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅಂತಾರಾಷ್ಟ್ರೀಯ ಕಲಾವಿದರನ್ನು ಭಾರೀ ಹಣ ನೀಡಿ ಕರೆಸಲಾಯಿತು.
ಮೂರು ದಿನಗಳ ಕಾಲ ನಡೆದ ಅನಂತ್-ರಾಧಿಕಾ ಪ್ರೀ-ವೆಡ್ಡಿಂಗ್ ಸಮಾರಂಭಕ್ಕೆ ಆಗಮಿಸಿದ ಅತಿಥಿಗಳ ಫೋಟೋಸ್ ಇಲ್ಲಿವೆ ನೋಡಿ.
ಬಾಲಿವುಡ್ ನಟ ಅನಿಲ್ ಕಪೂರ್ ದಂಪತಿ
ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಕುಟುಂಬ
ಸೂಪರ್ಸ್ಟಾರ್ ರಜನಿಕಾಂತ್ ಕುಟುಂಬ
ನಟ ಸೈಫ್ ಅಲಿಖಾನ್ ಮತ್ತು ನಟಿ ಕರೀನಾ ಕಪೂರ್ ಪುತ್ರನ ಜತೆಗೆ ಆಗಮಿಸಿದರು.
ಸದ್ಗುರು ಜಗ್ಗಿವಾಸುದೇವ್
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿ
ಬಿಲ್ಗೇಟ್ಸ್ ದಂಪತಿ
ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ದಂಪತಿ