ಕ್ರೀಡೆ

VIDEO: ಫುಟ್‌ಬಾಲ್ ಆಟಗಾರನ ಸಾಮಾಜಿಕ ಕಾರ್ಯಕ್ಕೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಶ್ಲಾಘನೆ

ನ್ಯೂಯಾರ್ಕ್: ಕೋವಿಡ್-19 ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಇದರಿಂದ ಸಂಕಷ್ಟಕ್ಕೀಡಾದವರ ಸಂಖ್ಯೆ ಲೆಕ್ಕಕ್ಕಿಲ್ಲ. ಹಲವು ಸಂಘ ಸಂಸ್ಥೆಗಳು, ಸಿನಿಮಾ ಹಾಗೂ ಕ್ರೀಡಾ ತಾರೆ ಸೇರಿದಂತೆ ಹಲವು ಮಂದಿ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿದ್ದಾರೆ. ಹೀಗೆ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿರುವ ಇಂಗ್ಲೆಂಡ್‌ನ ಫುಟ್‌ಬಾಲ್ ಆಟಗಾರ ಇಂಥ ಕಾರ್ಯಕ್ಕೆ ಮೆಚ್ಚಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ್ ವಿಡಿಯೋ ಕಾಲ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮಾಜಕ್ಕೆ ಯುವಕರು ಯಾವ ರೀತಿಯಲ್ಲಿ ನೆರವಾಗಬಲ್ಲರು ಎಂಬ ವಿಷಯದ ಕುರಿತು ಚರ್ಚೆ ನಡೆಸಿದ್ದಾರೆ.

ಇಂಗ್ಲೆಂಡ್ ಫುಟ್‌ಬಾಲ್ ತಂಡದ ಫಾರ್ವರ್ಡ್ ಆಟಗಾರ ಮಾರ್ಕಸ್ ರಶ್ ಫೋರ್ಡ್​ ಬಡತನದಲ್ಲಿರುವ ಮಕ್ಕಳಿಗೆ ಕಳೆದ ಸಹಾಯ ಹಸ್ತ ನೀಡಿದ್ದರು. ರಜೆದಿನದಲ್ಲೂ ಬ್ರಿಟನ್ ಸರ್ಕಾರ ಉಚಿತ ಮಕ್ಕಳಿಗೆ ಉಚಿತ ಆಹಾರ ನೀಡುತ್ತಿರುವ ಕಾರ್ಯಕ್ರಮದ ಪ್ರಚಾರದಲ್ಲೂ ರಶ್ ಫೋರ್ಡ್​ ತೊಡಗಿದ್ದರು. ಕೋವಿಡ್-19ರಿಂದ ತತ್ತರಿಸಿದ್ದ ಬಡಮಕ್ಕಳಿಗೆ ರಶ್ ಫೋರ್ಡ್​ ವಿವಿಧ ರೀತಿಯಲ್ಲಿ ನೆರವಾಗಿದ್ದರು. ಕೇವಲ 23ನೇ ವಯಸ್ಸಿಗೆ ಇಂಥ ಕಾರ್ಯಕ್ಕೆ ಕೈಹಾಕಿರುವ ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಒಬಾಮ ಹೇಳಿದ್ದಾರೆ. ರಶ್ ಫೋರ್ಡ್​ ಸೇವೆಗೆ ಎಂಬಿಇ ಪ್ರಶಸ್ತಿ ನೀಡಿ ಗೌರವಿಸಿತ್ತು.

ನನ್ನ ಕೈಲಾದ ಸಣ್ಣ ಪ್ರಮಾಣದ ಸಹಾಯವನ್ನು ನನ್ನ ಸಮುದಾಯಕ್ಕೆ ಮಾಡಿದ್ದೇನೆ ಎಂದು ಒಬಾಮ ಜತೆ ಚರ್ಚೆ ನಡೆಸಿದ ವೇಳೆ ರಶ್‌ೆರ್ಡ್ ತಿಳಿಸಿದ್ದಾರೆ. ಒಬಾಮ್ ಜತೆ ಜೂಮ್‌ನಲ್ಲಿ ಸಭೆ ನಡೆಸುತ್ತಿದ್ದ ವೇಳೆ ನಾನು ಅಡುಗೆ ಮನೆಯಲ್ಲಿದ್ದೆ, ಈ ವೇಳೆ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಕುರಿತು ಚರ್ಚೆ ನಡೆಸಲಾಯಿತು ಎಂದು ಹೇಳಿದ್ದಾರೆ.