ಪತಿ ಪರುಪಳ್ಳಿ ಕಶ್ಯಪ್ ರನ್ನು ಮತ್ತೆ ಒಪ್ಪಿಕೊಂಡ ಬ್ಯಾಡ್ಮಿಂಟನ್ ತಾರೆ 
ಬ್ಯಾಡ್ಮಿಂಟನ್

ಪರುಪಳ್ಳಿ ಕಶ್ಯಪ್ ಜೊತೆ ಮತ್ತೆ ಒಂದಾದ ಸೈನಾ ನೆಹ್ವಾಲ್: ವೈವಾಹಿಕ ಜೀವನದ ಏಳುಬೀಳುಗಳ ಬಗ್ಗೆ ಬ್ಯಾಡ್ಮಿಂಟನ್ ತಾರೆ ಹೇಳಿದ್ದೇನು? Saina Nehwal and Parupalli Kashyap

ಪ್ರಮುಖ ಮುಖ್ಯಾಂಶಗಳು

  • ವಿಚ್ಛೇದನ ಮರೆತು ಪತಿ ಜೊತೆ ರಾಜಿ ಮಾಡಿಕೊಂಡ ಸೈನಾ ನೆಹ್ವಾಲ್​
  • ಪತಿ ಪರುಪಳ್ಳಿ ಕಶ್ಯಪ್ ರನ್ನು ಮತ್ತೆ ಒಪ್ಪಿಕೊಂಡ ಬ್ಯಾಡ್ಮಿಂಟನ್ ತಾರೆ
  • ಸಂಬಂದವನ್ನು ಉಳಿಸಿಕೊಳ್ಳಲು ಸೈನಾ ನೀಡಿರುವ ಟಿಪ್ಸ್​ಗಳೇನು?
ನವದೆಹಲಿ: ಭಾರತ ಕಂಡ ಅತ್ಯಂತ ಖ್ಯಾತ ಹಾಗೂ ಯಶಸ್ವಿ ಬ್ಯಾಡ್ಮಿಂಟನ್​ ತಾರೆ ಎಂದರೆ ಅದು ಸೈನಾ ನೆಹ್ವಾಲ್​ ಆಗಿದ್ದಾರೆ. ಆದರೆ ಇವರು ಇತ್ತಿಚೆಗೆ ಕ್ರೀಡೆಗಿಂತ ತಮ್ಮ ವೈವಾಹಿಕ ಜೀವನದಿಂದ ಸುದ್ದಿಯಲ್ಲಿದ್ದರು.
ಕಳೆದ ವರ್ಷ ಜುಲೈನಲ್ಲಿ ತಮ್ಮ ಪತಿ ಪರುಪಳ್ಳಿ ಕಶ್ಯಪ್ ಅವರಿಂದ ದೂರವಾಗುವ ಮೂಲಕ ಸುದ್ದಿಯಲ್ಲಿದ್ದ ಸೈನಾ ಈಗ ತನ್ನ ಪತಿ (Saina Nehwal and Parupalli Kashyap) ಯನ್ನು ಮತ್ತೊಮ್ಮೆ ಒಪ್ಪಿಕೊಂಡು ಜೊತೆಗೂಡಿ ಸಂಸಾರ ಮುನ್ನಡೆಸಲು ಮುಂದಾಗಿದ್ದಾರೆ.
ಈ ಕುರಿತು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿರುವ ಸೈನಾ, ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಪ್ರಯಾಣದ ಬಗ್ಗೆ, ಮದುವೆ ಮತ್ತು ಸಮನ್ವಯದಿಂದ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.

ಸಂಬಂಧದಲ್ಲಿ ಬಿರುಕು ಸಾಮಾನ್ಯ

ತಮ್ಮ ವೈವಾಹಿಕ ಜೀವನದಲ್ಲಿ ಬಗ್ಗೆ ಮಾತನಾಡುತ್ತಾ ಸೈನಾ, ನಾನು ಮತ್ತು ಪರುಪಳ್ಳಿ ಕಶ್ಯಪ್ 2018 ರಲ್ಲಿ ಮದುವೆ ಮಾಡಿಕೊಂಡೆವು. ಯಾವುದೇ ಸಂಬಂಧವಿರಲಿ ಅದು ಸರಳ ರೇಖೆಯಂತೆ ನೇರವಾಗಿರಲು ಸಾಧ್ಯವಿಲ್ಲ.
ಪ್ರತಿ ಸಂಬಂಧಲ್ಲಿ ಏಳು-ಬೀಳು, ಮತ್ತು ಬಿನ್ನಭಿಒಪ್ರಾಯಗಳು ಬರುವುದು ಸಹಜ. ಆದರೆ ಈ ಬಿನ್ನಾಭಿಪ್ರಾಯಗಳನ್ನು ನಾವು ಹೇಗೆ ನಿರ್ವಹಿಸುತ್ತೆವೆ ಎನ್ನುವುದರ ಮೇಲೆ ನಮ್ಮ ಸಂಬಂಧ ನಿರ್ಧರಿತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಪರಸ್ಪರ ಗೌರವ ಇರಲಿ!

ಜೀವನ ಎನ್ನುವುದು ಅದೊಂದು ಪ್ರಯಾಣ. ನಾವು ಈ ಪ್ರಯಾಣದಲ್ಲಿ ನಮ್ಮೊದಿಂಗೆ ಯಾರು ಸಾಗಬೇಕೆಂದು ನಾವೇ ಆರಿಸಿಕೊಳ್ಳಬೇಕು ಹಾಗೂ ಆರಿಸಿಕೊಂಡ ಬಳಿಕ ಅವರೊಂದಿಗೆ ಸಾಗಬೇಕು.
ಈ ವೈವಾಹಿಕ ಸಂಬಂಧದಲ್ಲಿ ಇಬ್ಬರು ಪರಸ್ಪರರನ್ನು ಅರ್ಥ ಮಾಡಿಕೊಂಡು, ಗೌರವ, ವಿಶ್ವಾಸ ಹಾಗೂ ನಂಬಿಕೆಯನ್ನು ಇಟ್ಟುಕೊಂಡರೆ ಯಾವುದೇ ಸಂಬಂಧ ಮುರಿಯುವುದಿಲ್ಲ ಎನ್ನುವುದು ಸೈನಾ ಅವರ ಅಭಿಪ್ರಾಯವಾಗಿದೆ.

ಅಹಂನ್ನು ಬಿಟ್ಟು ಬಿಡಿ

ಸಂಸಾರದಲ್ಲಿ ಜಗಳ ಸಹಜವಾದ ಪ್ರಕ್ರಿಯೆಯಾಗಿದೆ. ಹಾಗೆಂದ ಮಾತ್ರಕ್ಕೆ ಆ ವ್ಯಕ್ತಿಯನ್ನು ನಿಂದಿಸುವ ಮತ್ತು ನಾನು ಹೇಳುತ್ತಿರುವುದೇ ಸರಿ ಎನ್ನುವ ಅಹಂನ್ನು ಬಿಟ್ಟರೆ ಎಂತಹ ಜಗಳವಾದರೂ ಕ್ಷಣಾರ್ಧದಲ್ಲಿ ನಿಂತುಹೋಗುತ್ತದೆ. ಪರಸ್ಪರರಲ್ಲಿ ಪ್ರೀತಿ ಮತ್ತು ನಂಬಿಕೆಯನ್ನು ಬೆಳೆಸಿಕೊಂಡರೆ ನಿಮ್ಮ ಸಂಸಾರ ದೀರ್ಫಕಾಲ ಮುಂದುವರಿಯುತ್ತದೆ ಎಂದು ಸೈನಾ ಹೇಳಿದ್ದಾರೆ,(ಏಜನ್ಸೀಸ್​).