Champions Trophy: ಇತ್ತೀಚೆಗೆಷ್ಟೇ ಮುಕ್ತಾಯಗೊಂಡ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ತ್ರಿಕೋನ ಸರಣಿಯಲ್ಲಿ ಪಾಕ್ನ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ರನ್ನು ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಸಿದ್ದರ ಬಗ್ಗೆ ಪಾಕಿಸ್ತಾನ ಮಾಜಿ ಹಿರಿಯ ಕ್ರಿಕೆಟಿಗ ಬಸಿತ್ ಅಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಗತ್ತಿನ ಅಂತ್ಯ ದೂರವಿಲ್ಲ… 1704ರಲ್ಲಿ ಸರ್ ಐಸಾಕ್ ನ್ಯೂಟನ್ ಬರೆದ ಪತ್ರದಲ್ಲಿದೆ ಸ್ಫೋಟಕ ಸಂಗತಿ! Sir Isaac Newton
ಯುವ ಆರಂಭಿಕ ಆಟಗಾರ ಸೈಮ್ ಅಯೂಬ್, ಬಲ ಪಾದದ ಮೂಳೆ ಮುರಿತದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಈ ಕಾರಣದಿಂದ ಪಾಕ್ ಮ್ಯಾನೇಜ್ಮೆಂಟ್, ಬಾಬರ್ ಜತೆಗೆ ಫಖರ್ ಜಮಾನ್ ಅವರನ್ನು ಟಾಪ್ ಆರ್ಡರ್ನಲ್ಲಿ ಆಡಿಸಲು ನಿರ್ಧರಿಸಿತು. ತಂಡದ ಈ ನಿರ್ಧಾರ ಬಸಿತ್ ಅಲಿಗೆ ತೀವ್ರ ಅಸಮಾಧಾನ ಮೂಡಿಸಿತು. ಇವರಿಬ್ಬರ ಕಾಂಬಿನೇಷನ್ ತ್ರಿಕೋನ ಸರಣಿಯಲ್ಲಿ ಫಲಿಸಲಿಲ್ಲ. ಕಾರಣ, ಆಡಿದ ಮೂರು ಪಂದ್ಯಗಳಲ್ಲಿ ಕೇವಲ 62 ರನ್ ಗಳಿಸಿದ ಬಾಬರ್, ಉತ್ತಮ ಓಪನಿಂಗ್ ಆಟ ತೋರುವಲ್ಲಿ ಎಡವಿದರು. ಕರಾಚಿಯಲ್ಲಿ ನಡೆದ ಫೈನಲ್‌ನಲ್ಲಿ ಐದು ವಿಕೆಟ್‌ಗಳ ಸೋಲು ಸೇರಿದಂತೆ ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿತು. ಈ ಸರಣಿಯಲ್ಲಿ ಬಾಬರ್ ತೋರಿದ ನೀರಸ ಪ್ರದರ್ಶನ ಸದ್ಯ ಬಸಿತ್ ಅಲಿ ಬೇಸರಕ್ಕೆ ಕಾರಣವಾಗಿದೆ.
ಇನ್ನು ಇದೇ ಫೆ.19ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಾಬರ್ ಅವರನ್ನು ಆರಂಭಿಕ ಸ್ಥಾನಕ್ಕೆ ಬಡ್ತಿ ನೀಡುವ ಪಾಕಿಸ್ತಾನದ ನಿರ್ಧಾರವನ್ನು ಅಲಿ ಸುತಾರಾಮ್ ಒಪಿಲ್ಲ. ಸದ್ಯ ಈ ವಿಷಯ ವ್ಯಾಪಕ ಟೀಕೆಗೆ ಗುರಿಯಾಗಿದೆ. “ತಂಡವು ತ್ರಿಕೋನ ಸರಣಿಯನ್ನು ಗೆದ್ದಿದ್ದರೆ, ಅದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿತ್ತು. ಪ್ರತಿಯೊಬ್ಬ ಆಟಗಾರನ ಉತ್ಸಾಹನ್ನೂ ದುಪ್ಪಟ್ಟಾಗಿಸುತ್ತಿತ್ತು. ಆದರೆ, ಇಲ್ಲಿ ಬಾಬರ್ ಅಜಮ್ರನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಓಪನಿಂಗ್ ಕಳಿಸುವ ನಿರ್ಧಾರ ಯಾರದ್ದು? ಈ ಸಲಹೆ ಕೊಟ್ಟವರಾರು? ಇದನ್ನು ಕೇಳಿ ನಿಜಕ್ಕೂ ನನಗೆ ಆಘಾತವಾಯಿತು. ಎಂತಹ ವಿಚಿತ್ರ ನಿರ್ಧಾರವಿದು” ಎಂದು ಅಲಿ ಮ್ಯಾನೇಜ್ಮೆಂಟ್ ನಿರ್ಧಾರಕ್ಕೆ ಕಿಡಿಕಾರಿದ್ದಾರೆ.
ಇದನ್ನೂ ಓದಿ: Chaitra Vasudevan | ಸೋಶಿಯಲ್ ಮೀಡಿಯಾ ಪಾಸಿಟಿವ್-ನೆಗೆಟಿವ್ ಕಾಮೆಂಟ್ಸ್ ಚೈತ್ರಾ ಹೇಗೆ ತಗೊಳ್ತಾರೆ?!
ಫೆ.19ರಂದು ಆತಿಥೇಯ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಶುಭಾರಂಭ ಮಾಡಲಿದ್ದು, ಇದೇ ಫೆ.23ರಂದು ದುಬೈ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲಿದೆ, ಇದೊಂದು ಪಂದ್ಯ ನೋಡಲು ದಾಖಲೆ ಮಟ್ಟದಲ್ಲಿ ಈಗಾಗಲೇ ಟಿಕೆಟ್ಗಳು ಖರೀದಿಯಾಗಿದ್ದು, ಹೈವೋಲ್ಟೇಜ್ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).