ಕ್ರೀಡೆ

ಆಸಿಸ್​ ತಂಡದಲ್ಲಿ ಶುರುವಾಯ್ತು ನಡುಕ! ಟೀಮ್​ ಇಂಡಿಯಾಗೆ ರಣಬೇಟೆಗಾರನ ಎಂಟ್ರಿ ಫಿಕ್ಸ್​

ನವದೆಹಲಿ: ಈ ಬಾರಿ ಲಖನೌ ಎಕ್ಸ್‌ಪ್ರೆಸ್ ಮಯಾಂಕ್ ಯಾದವ್ ಐಪಿಎಲ್‌ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಯುವ ವೇಗಿ ತನ್ನ ಮಿಂಚಿನ ಪ್ರದರ್ಶನದಿಂದ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾರೆ. 150 ಕಿ.ಮೀ. ಗಿಂತ ಹೆಚ್ಚು ವೇಗದಲ್ಲಿ ಮಯಾಂಕ್​ ಎಸೆಯುವ ಚೆಂಡುಗಳನ್ನು ನೋಡಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಕೇವಲ ಒಂದೆರೆಡು ಎಸೆತವಲ್ಲ, ಸ್ಪೆಲ್ ಉದ್ದಕ್ಕೂ ಸತತವಾಗಿ ಅದೇ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಮನ ಗೆಲ್ಲುತ್ತಿದ್ದಾರೆ.

ಆಸ್ಟ್ರೇಲಿಯಾದ ದಿಗ್ಗಜ ಬೌಲರ್​ ಬ್ರೆಟ್ ಲೀಯಿಂದ ಡೇಲ್ ಸ್ಟೇಯ್ನ್ ವರೆಗಿನ ವಿಶ್ವದ ಅಗ್ರ ವೇಗದ ಬೌಲರ್​ಗಳು ಮಯಾಂಕ್ ಅವರನ್ನು ಮೆಚ್ಚುತ್ತಿದ್ದಾರೆ. ಹಲವು ವರ್ಷಗಳ ಬಳಿಕ ಭಾರತಕ್ಕೆ ಓರ್ವ ಮಿಂಚಿನ ವೇಗದ ಬೌಲರ್​ ಸಿಕ್ಕಿದ್ದು, ಮಯಾಂಕ್ ಯಾದವ್​ ಅವರ ಬೌಲಿಂಗ್​ ನೋಡಿ ಆಸ್ಟ್ರೇಲಿಯಾ ತಂಡ ಇದೀಗ ಹೆದರುತ್ತಿದೆ.

ಹೌದು, ಮಯಾಂಕ್ ಯಾದವ್ ಅವರನ್ನು ನೋಡಿ ಕಾಂಗರೂ ಪಡೆ ನಡುಗುತ್ತಿದೆ . ಅವರ ತೀಕ್ಷ್ಣ ವೇಗದ ಬೌಲಿಂಗ್ ಹಾಗೂ ಬ್ಯಾಟರ್​ಗಳನ್ನು ಬೆದರಿಸುವ ರೀತಿಯಿಂದಾಗಿ ಆಸೀಸ್ ನಲುಗುತ್ತಿದೆ. ಈ ಮಿಂಚಿನ ಬೌಲರ್ ಎಲ್ಲಿ ತಮ್ಮ ಮೇಲೆ ದಾಳಿ ಮಾಡುತ್ತಾರೋ ಎಂಬ ಭಯ ಅವರಲ್ಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಆರ್‌ಸಿಬಿ ಮತ್ತು ಲಖನೌ ನಡುವಿನ ಪಂದ್ಯ ಇದಕ್ಕೆ ಕಾರಣ. ಮಯಾಂಕ್ ಅವರು ಈ ಪಂದ್ಯದಲ್ಲಿ 3 ವಿಕೆಟ್ ಪಡೆದರು. ಇದರಲ್ಲಿ ಇಬ್ಬರು ಆಸಿಸ್​ ಆಟಗಾರರ ವಿಕೆಟ್ ​ಪಡೆದಿರುವುದು ಗಮನಾರ್ಹ. ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು ಮಯಾಂಕ್​ ಔಟ್​ ಮಾಡಿದರು.

ಮಯಾಂಕ್ ಅವರು ಕ್ಯಾಮರೂನ್ ಗ್ರೀನ್ ಔಟ್ ಮಾಡಿದ ರೀತಿ ಅದ್ಭುತವಾಗಿತ್ತು. ಇದರಿಂದ ಆಸ್ಟ್ರೇಲಿಯಾ ತಂಡ ಹೆದರುತ್ತಿದೆ. ಈ ವೇಗದ ಬೌಲರ್ ಭಾರತ ತಂಡವನ್ನು ಸೇರಿದರೆ ನಮಗೆ ಅಪಾಯಕಾರಿಯಾಗುವುದು ಗ್ಯಾರಂಟಿ ಎಂದು ಆಸಿಸ್​ ಪಡೆ ಮಾತನಾಡಿಕೊಳ್ಳುತ್ತಿದೆ. ವಿದೇಶಿ ಪಿಚ್​ಗಳು ವೇಗದ ಬೌಲಿಂಗ್​ಗೆ ಹೆಸರುವಾಗಿ, ಭಾರತದಂತಹ ಸ್ಪಿನ್​ ಪಿಚ್​ಗಳಲ್ಲಿ ಮಯಾಂಕ್ ಅವರ ಬಾಲ್​ ಮಿಂಚಿನಂತೆ ನುಗ್ಗುತ್ತಿದೆ. ಇನ್ನು ವಿದೇಶಿ ಪಿಚ್​ಗಳಲ್ಲಿ ಯಾವ ರೀತಿ ಬಾಲ್​ ನುಗ್ಗಬಹುದು ಎಂದು ಆಸಿಸ್​ ಪಡೆ ಚಿಂತಿಸುತ್ತಿದೆ.

​ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಮಯಾಂಕ್​ ತಮಗೆ ಬಹುದೊಡ್ಡ ಸವಾಲಾದರು ಅಚ್ಚರಿ ಇಲ್ಲ ಎಂದು ಆಸಿಸ್ ಪಡೆ ಭಾವಿಸಿದೆ. ವಿಶ್ವಕಪ್​ಗೆ ತೆರಳುವ ಭಾರತ ತಂಡದಲ್ಲಿ ಮಯಾಂಕ್ ಸ್ಥಾನ ಗ್ಯಾರಂಟಿ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಇದರೊಂದಿಗೆ ವಿಶ್ವಕಪ್‌ನ ನಾಕೌಟ್ ಪಂದ್ಯಗಳಲ್ಲಿ ಈ ಅಪಾಯಕಾರಿ ಬೌಲರ್‌ನಿಂದ ಬೆದರಿಕೆಯೊಡ್ಡುವ ಭೀತಿಯಲ್ಲಿದ್ದಾರೆ.

ಅಂದಹಾಗೆ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡದೆ ಆಸೀಸ್ ತಂಡವನ್ನು ನಡುಗಿಸಿರುವ ಮಯಾಂಕ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)