ಕ್ರೀಡೆ

ಏಕದಿನ ವಿಶ್ವಕಪ್​ನಲ್ಲಿ ಶ್ರೀಲಂಕಾಗೆ ಹ್ಯಾಟ್ರಿಕ್ ಸೋಲು; ಆಸ್ಟ್ರೇಲಿಯಾಗೆ ಐದು ವಿಕೆಟ್​ಗಳ ಜಯ

ಲಖನೌ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧ ಐದು ವಿಕೆಟ್​ಗಳ ಭರ್ಜರಿ ಜಯ ಗಳಿಸಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಶ್ರಿಲಂಕಾ ತಂಡವು ಆರಂಭಿಕರಾದ ಪತುನ್​ ನಿಸ್ಸಂಕ (61 ರನ್, 67 ಎಸೆತ, 8 ಬೌಂಡರಿ), ಕುಶಾಲ್​ ಪೆರೇರಾ (78 ರನ್, 82 ಎಸೆತ, 12 ಬೌಂಡರಿ) ಅರ್ಧಶತಕಗಳ ಫಲವಾಗಿ 43.3 ಓವರ್ಗಳಲ್ಲಿ 209ರನ್​ಗಳಿಗೆ ಆಲೌಟ್​ ಆಯಿತು. ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ (8-1-47-4), ಮಿಚೆಲ್​ ಸ್ಟಾರ್ಕ್​ (10-0-43-2), ಪ್ಯಾಟ್​ ಕಮ್ಮಿನ್ಸ್​ (7-0-32-2), ಗ್ಲೆನ್​ ಮ್ಯಾಕ್ಸ್​ವೆಲ್ (9.3-0-36-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡವು ಜೋಶ್​ ಇಂಗ್ಲಿಸ್​ (58 ರನ್​, 59 ಎಸೆತ, 5 ಬೌಂಡರಿ, 1 ಸಿಕ್ಸರ್), ಮಿಚೆಲ್​ ಮಾರ್ಷ್​ (52 ರನ್, 51 ಎಸೆತ, 9 ಬೌಂಡರಿ), ಅರ್ಧಶತಕಗಳ ಫಲ ಹಾಗೂ ಕಡೆಯಲ್ಲಿ ಮ್ಯಾಕ್ಸ್​ವೆಲ್​-ಸ್ಟೋಯಿನಿಸ್​ ಅಬ್ಬರದ ಬ್ಯಾಟಿಂಗ್​ ಫಲವಾಗಿ ಗುರಿಯನ್ನು 35.2 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 215ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು.

ಈ ಮೂಲಕ ಶ್ರೀಲಂಕಾ ತಂಡವು ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ಸೋಲು ಕಂಡಿದೆ. ಆಸ್ಟ್ರೇಲಿಯಾ ತಂಡವು ಗೆಲುವಿನ ಹಳಿಗೆ ಮರಳುವ ಮೂಲಕ ವಿಶ್ವಕಪ್​ನಲ್ಲಿ ತನ್ನ ಅಭಿಯಾನವನ್ನು ಜೀವಂತವಾಗಿರಿಸಿದೆ.