ಕ್ರೀಡೆ

ಆಟೋ ಸಂಚಾರಕ್ಕೆ 30 ರೂ.! ಕೆಕೆಆರ್​, ಸಿಎಸ್​ಕೆಗೆ​ ಬೇಡವಾದ ಅಶ್ವನಿ ಕುಮಾರ್ ಕನಸಿಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ | Ashwani

Ashwani Kumar: ಮಾ.31 ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 18ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿಯಾಗಿ ಸೆಣಸಾಡಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್​ ಕೇವಲ 16.2 ಓವರ್​ ಅಂತ್ಯಕ್ಕೆ 116 ರನ್ ಕಲೆಹಾಕುವ ಮೂಲಕ ಆಲ್​​ಔಟ್ ಆಯಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಮುಂಬೈ 8 ವಿಕೆಟ್​ಗಳ ಜಯ ಸಾಧಿಸಿ, ಅತ್ಯಂತ ಸುಲಭ ಗೆಲುವನ್ನು ದಾಖಲಿಸಿತು.

ಕೇವಲ 12.5 ಓವರ್​ನೊಳಗೆ ಪಂದ್ಯವನ್ನು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್​, 2 ವಿಕೆಟ್​ ನಷ್ಟಕ್ಕೆ 121 ರನ್​ ಬಾರಿಸಿ, ಗೆಲುವಿನ ಪತಾಕೆ ಹಾರಿಸಿತು. ಇನ್ನು ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೌಲರ್​ಗಳು ಮಾಡಿದ ಮೋಡಿಗೆ ಕೋಲ್ಕತ ಪಡೆ ಅಕ್ಷರಶಃ ತತ್ತರಿಸಿ ಹೋಯಿತು. ವೇಗಿಗಳ ಪೈಕಿ ತನ್ನ ಪದಾರ್ಪಣೆ ಪಂದ್ಯದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಯುವ ಬೌಲರ್​ ಅಶ್ವನಿ ಕಮಾರ್​, 3 ಓವರ್​ಗೆ ಕೇವಲ 24 ರನ್ ಕೊಟ್ಟು, ಬರೋಬ್ಬರಿ 4 ವಿಕೆಟ್​ಗಳನ್ನು ಪಡೆದು ತಂಡದ ಪರ ಮಿಂಚಿದರು.

ಐಪಿಎಲ್​ ಪದಾರ್ಪಣೆ ಪಂದ್ಯದಲ್ಲೇ ಅಮೋಘ ಪ್ರದರ್ಶನ ತೋರಿದ ಅಶ್ವನಿ ಕುಮಾರ್​, 4 ವಿಕೆಟ್​ಗಳನ್ನು ಪಡೆಯುವ ಮೂಲಕ ತಂಡಕ್ಕೆ ಹಾಗೂ ಎದುರಾಳಿಗಳಿಗೆ ತಮ್ಮ ಸಾಮರ್ಥ್ಯವನ್ನು ಪರಿಚಯಿಸಿದರು. ಅಸಲಿಗೆ ಸಿಎಸ್​ಕೆ, ಆರ್​ಆರ್​, ಕೆಕೆಆರ್​ ಸೇರಿದಂತೆ ಯಾವ ಫ್ರಾಂಚೈಸಿಗೂ ಬೇಡವಾದ ಅಶ್ವನಿ ಕುಮಾರ್​ಗೆ ಸ್ಥಾನ ಕೊಟ್ಟಿದ್ದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ. ಐಪಿಎಲ್ ಮೆಗಾ ಹರಾಜಿನಲ್ಲಿ 30 ಲಕ್ಷ ರೂ.ಗೆ ಅಶ್ವನಿಯನ್ನು ಖರೀದಿಸಿದ ಎಂಐ, ಮುಂದೊಂದು ದಿನ ಅವರನ್ನು ಅದ್ಭುತ ಆಟಗಾರನನ್ನಾಗಿ ನೋಡಲು ಭರವಸೆ ವ್ಯಕ್ತಪಡಿಸಿತ್ತು. ಆದರೆ, ಪದಾರ್ಪಣೆಯ ಪಂದ್ಯದಲ್ಲೇ ಅಶ್ವನಿ ಮಿಂಚಿದ್ದು, ಇದೀಗ ಫ್ರಾಂಚೈಸಿ ಭರವಸೆ, ಸಂತಸವನ್ನು ದುಪ್ಪಟ್ಟಾಗಿಸಿದೆ.

ಮೊದಲ ಪಂದ್ಯದಲ್ಲೇ ಸಾಧನೆಯ ಮೈಲಿಗಲ್ಲು ಏರಿದ ಪುತ್ರನನ್ನು ಕಂಡು ಭಾವುಕರಾದ ಅಶ್ವನಿ ತಂದೆ ಹರ್ಕೇಶ್​ ಕುಮಾರ್​, "ಅವನು ಒಂದೇ ಒಂದು ದಿನ ಕೂಡ ಪಿಸಿಎ ಅಕಾಡೆಮಿಯಲ್ಲಿ ತರಬೇತಿ ಪಡೆಯುವುದನ್ನು ತಪ್ಪಿಸಿಲ್ಲ. ಸೈಕಲ್​ ತುಳಿದೇ ಕೋಚಿಂಗ್​ ಹೋಗುತ್ತಿದ್ದ. ಇಲ್ಲವೇ ಸಮಯ ಮೀರುತ್ತಿದೆ ಎಂದು ಹಂಚಿಕೆ ಆಟೋ ಪ್ರಯಾಣದ ಮೇಲೆ ಅವಲಂಬಿಸುತ್ತಿದ್ದ. ಆಟೋ ಬೇಕು ಎಂದಾದರೆ ನನ್ನಿಂದ 30 ರೂ. ಪಡೆದು ತೆರಳುತ್ತಿದ್ದ. ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಆತನಿಗೆ 30 ಲಕ್ಷ ರೂ. ಕೊಟ್ಟು ಖರೀದಿಸಿದಾಗ ಬಹಳ ಖುಷಿಯಾಯಿತು. ಏಕೆಂದರೆ, ಆ ಹಣಕ್ಕೆ ನನ್ನ ಮಗ ಅರ್ಹ" ಎಂದು ಹೇಳಿದ್ದಾರೆ,(ಏಜೆನ್ಸೀಸ್).