ಚೆನ್ನೈ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿಗೂ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡಕ್ಕೂ ಅವಿನಾಭಾವ ಸಂಬಂಧ. ಐಪಿಎಲ್ ಆರಂಭಗೊಂಡ ದಿನದಿಂದಲೂ ಸಿಎಸ್ಕೆ ತಂಡ ಮುನ್ನಡೆಸಿರುವ ಏಕೈಕ ನಾಯಕ ಎನಿಸಿಕೊಂಡಿರುವ ಧೋನಿ, ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ಬಳಿಕವೂ ತಂಡದೊಂದಿಗೆ ಮುಂದುವರಿಯುವುದು ಖಚಿತವಾಗಿದೆ. ಮುಂದಿನ 10 ವರ್ಷಗಳ ಕಾಲ ತಂಡದೊಂದಿಗೆ ಇರಲಿರುವ ಧೋನಿ, ಅದು ಟೀಮ್ ಬಾಸ್ ಆಗಿರಲಿದ್ದಾರೆ ಎಂದು ತಂಡದ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.
ಮಂಗಳವಾರ ಧೋನಿ ಅವರ 39ನೇ ಹುಟ್ಟುಹಬ್ಬದ ಅಂಗವಾಗಿ ಸ್ಟಾರ್ ಸ್ಪೋರ್ಟ್ಸ್ ತಮಿಳು ಚಾನೆಲ್ನಲ್ಲಿ ಮಾತನಾಡಿದ ಸಿಎಸ್ಕೆ ಸಿಇಒ, ಭವಿಷ್ಯದಲ್ಲೂ ತಂಡ ಧೋನಿ ಜತೆಗಿರಲಿದೆ ಎಂದು ಹೇಳಿದರು. ಚೆನ್ನೈ ಫೇರಿಟ್ ಮಗ ಆಗಿರುವುದರರಿಂದ ಅವರನ್ನು ಥಲಾ ಎಂದು ಕರೆಯಲಾಗುತ್ತದೆ ಎಂದರು.