ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋನಲ್ಲಿ ಸ್ವರ್ಣ ಜಯಿಸಿ ಐತಿಹಾಸಿಕ ಸಾಧನೆ ಮಾಡಿರುವ ನೀರಜ್ ಚೋಪ್ರಾ, ಇದೀಗ ಮತ್ತೊಂದು ಸವಾಲಿಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ 2018ರ ಏಷ್ಯಾಡ್, ಕಾಮನ್ವೆಲ್ತ್‌ನಲ್ಲಿ ಸ್ವರ್ಣ ಗೆದ್ದಿರುವ ನೀರಜ್, ಇದೀಗ ಪ್ರತಿಷ್ಠಿತ ಒಲಿಂಪಿಕ್ಸ್‌ನಲ್ಲೂ ಸ್ವರ್ಣ ಗೆದ್ದಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ನೀರಜ್ ಚೋಪ್ರಾ ಸ್ವರ್ಣ ಗೆಲುವಿನ ಹಂಬಲ ವ್ಯಕ್ತಪಡಿಸಿದ್ದಾರೆ. ‘ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಗೆಲ್ಲುವುದೇ ನನ್ನ ಗುರಿ’ ಎಂದು ನವದೆಹಲಿಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆದ ಸನ್ಮಾನ ಸಮಾರಂಭದ ವೇಳೆ ತಿಳಿಸಿದರು
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಗಸ್ಟ್ 7 ರಂದು (ಕಳೆದ ಶನಿವಾರ) 87.58 ಮೀಟರ್ ಎಸೆಯುವ ಮೂಲಕ ಸ್ವರ್ಣ ಪದಕ ಗೆದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿಯೇ ವೈಯಕ್ತಿಕ ವಿಭಾಗದಲ್ಲಿ ಸ್ವರ್ಣ ಗೆದ್ದ ಭಾರತದ 2ನೇ ಕ್ರೀಡಾಪಟು ಎನಿಸಿಕೊಂಡಿದ್ದರು. ಇದರ ಅಂಗವಾಗಿ ಆಗಸ್ಟ್ 7 ರಂದು ಸ್ವರ್ಣ ಜಯಿಸಿದ ಹಿನ್ನೆಲೆಯಲ್ಲಿ ಪ್ರತಿವರ್ಷ ಇದೇ ದಿನವನ್ನು ‘ರಾಷ್ಟ್ರೀಯ ಜಾವೆಲಿನ್’ ದಿನಾಚರಣೆಯನ್ನಾಗಿ ಆಚರಿಸಲು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ (ಎಎ್ಐ) ತೀರ್ಮಾನಿಸಿದೆ. ಜತೆಗೆ ಆಗಸ್ಟ್ 7 ರಂದು ಜಾವೆಲಿನ್ ಥ್ರೋ ಸ್ಪರ್ಧೆ ಆಯೋಜಿಸಲು ಎಎ್ಐ ತನ್ನ ಎಲ್ಲಾ ರಾಜ್ಯ ಘಟಕಗಳಿಗೂ ಸೂಚನೆ ರವಾನಿಸಿದೆ.
ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್ ಹೀರೋಗಳಿಗೆ ಅದ್ಧೂರಿ ಸ್ವಾಗತ,
‘ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಗೆಲ್ಲುವುದೇ ನನ್ನ ಗುರಿ. ಏಷ್ಯಾಡ್, ಕಾಮನ್ವೆಲ್ತ್ ಹಾಗೂ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಗೆದ್ದಿರುವೆ. ಇದೀಗ ನನ್ನ ಗಮನ ಎನಿದ್ದರೂ ವಿಶ್ವ ಚಾಂಪಿಯನ್‌ಷಿಪ್’ ನೀರಜ್ ಚೋಪ್ರಾ, ಸ್ವರ್ಣ ಸಾಧಕ