More

    ಇನ್ಮುಂದೆ ‘ಆಗಸ್ಟ್ 7’ ಯಾವ ದಿನಾಚರಣೆ ಗೊತ್ತೇ?

    ನವದೆಹಲಿ: ಭಾರತದ ಸ್ಟಾರ್ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಗಸ್ಟ್ 7 ರಂದು ಸ್ವರ್ಣ ಜಯಿಸಿದ ಹಿನ್ನೆಲೆಯಲ್ಲಿ ಪ್ರತಿವರ್ಷ ಇದೇ ದಿನವನ್ನು ‘ರಾಷ್ಟ್ರೀಯ ಜಾವೆಲಿನ್’ ದಿನಾಚರಣೆಯನ್ನಾಗಿ ಆಚರಿಸಲು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ಐ) ತೀರ್ಮಾನಿಸಿದೆ. ಜತೆಗೆ ಆಗಸ್ಟ್ 7 ರಂದು ಜಾವೆಲಿನ್ ಥ್ರೋ ಸ್ಪರ್ಧೆ ಆಯೋಜಿಸಲು ಎಎಫ್ಐ ತನ್ನ ಎಲ್ಲಾ ರಾಜ್ಯ ಘಟಕಗಳಿಗೂ ಸೂಚನೆ ರವಾನಿಸಿದೆ. 23 ವರ್ಷದ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಗಸ್ಟ್ 7 ರಂದು (ಕಳೆದ ಶನಿವಾರ) 87.58 ಮೀಟರ್ ಎಸೆಯುವ ಮೂಲಕ ಸ್ವರ್ಣ ಪದಕ ಗೆದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿಯೇ ವೈಯಕ್ತಿಕ ವಿಭಾಗದಲ್ಲಿ ಸ್ವರ್ಣ ಗೆದ್ದ ಭಾರತದ 2ನೇ ಕ್ರೀಡಾಪಟು ಎನಿಸಿಕೊಂಡಿದ್ದರು.

    ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಅಶಿಸ್ತು ತೋರಿದ ಭಾರತದ ಮಹಿಳಾ ಕುಸ್ತಿ ಪಟುವಿಗೆ ಎದುರಾಯಿತು ಸಂಕಷ್ಟ..!, 

    ‘ಭಾರತದಲ್ಲಿ ಜಾವೆಲಿನ್ ಥ್ರೋಗೆ ಮತ್ತಷ್ಟು ಉತ್ತೇಜನ ನೀಡುವ ದೃಷ್ಟಿಯಿಂದ ಪ್ರತಿವರ್ಷ ಆಗಸ್ಟ್ 7 ರಂದು ಜಾವೆಲಿನ್ ಥ್ರೋ ಸ್ಪರ್ಧೆ ಆಯೋಜಿಸಲು ಎಲ್ಲ ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ. ಇದರೊಂದಿಗೆ ರಾಷ್ಟ್ರೀಯ ಜಾವೆಲಿನ್ ದಿನಾಚರಣೆಯನ್ನು ಆಚರಿಸಲಾಗುವುದು’ ಎಂದು ಎಎಫ್ಐ ಯೋಜನಾ ಆಯೋಗದ ಚೇರ್ಮನ್ ಲಲಿತ್ ಬಾನೋಟ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಾವೆಲಿನ್ ಥ್ರೋನಲ್ಲಿ ಅಂತರ ಜಿಲ್ಲಾ ಸ್ಪರ್ಧೆ ಆಯೋಜಿಸಲಾಗುವುದು. ಅದಕ್ಕೆ ಮೂಲಭೂತವಾಗಿ ಅಗತ್ಯ ಜಾವೆಲಿನ್‌ಗಳನ್ನು ಪೂರೈಸಲಾಗುವುದು. ರಾಷ್ಟ್ರೀಯ ಸ್ಪರ್ಧೆಯಾಗಿ ಬೆಳಸಬೇಕಿದೆ’ ಎಂದು ತಿಳಿಸಿದರು.

    ಇದನ್ನೂ ಓದಿ: ಬಾಯ್ ಟೋಕಿಯೊ… ಹಾಯ್ ಪ್ಯಾರಿಸ್ ; 32ನೇ ಒಲಿಂಪಿಕ್ ಕ್ರೀಡಾಕೂಟಕ್ಕೆ ತೆರೆ, 

    2018ರಲ್ಲಿ ಎಎಫ್ಐ ರಾಷ್ಟ್ರೀಯ ಓಪನ್ ಜಾವೆಲಿನ್ ಥ್ರೋ ಚಾಂಪಿಯನ್‌ಷಿಪ್ ಆಯೋಜಿಸಿತ್ತು. ಇದೀಗ ಮುಂದಿನ ಅಕ್ಟೋಬರ್‌ನಲ್ಲಿ 3ನೇ ಆವೃತ್ತಿ ನಡೆಯಬೇಕಿದೆ. ‘ತುಂಬಾ ಖುಷಿಯಾಗುತ್ತಿದೆ. ಎಎಫ್ಐ ನನ್ನ ಸಾಧನೆಯನ್ನು ಸ್ಮರಣಿಯವಾಗಿಸಲು ನಿರ್ಧರಿಸಿದೆ. ಇದು ಮುಂದಿನ ಯುವಪೀಳಿಗೆಗೆ ಮಾದರಿಯಾಗಲಿದೆ’ ಎಂದು ನೀರಜ್ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.

    ಟೋಕಿಯೊ ಒಲಿಂಪಿಕ್ಸ್ ಹೀರೋಗಳಿಗೆ ಅದ್ಧೂರಿ ಸ್ವಾಗತ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts