More

    ಜೀವನದಲ್ಲಿ ಗುರಿ, ಉದ್ದೇಶ ಮುಖ್ಯ

    ಬೆಳಗಾವಿ: ಯುವಕರು ಜೀವನದಲ್ಲಿ ಸ್ಪಷ್ಟ ಗುರಿ-ಉದ್ದೇಶ ಇಟ್ಟುಕೊಳ್ಳಬೇಕು. ದೈಹಿಕವಾಗಿ ಯಾವುದೇ ನ್ಯೂನತೆ ಇದ್ದರೂ ಅದನ್ನು ಬದಿಗೊತ್ತಿ ಸಾಧನೆ ಮಾಡಬೇಕು ಎಂದು ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್, ಪದ್ಮಶ್ರೀ ಪುರಸ್ಕೃತೆ ಡಾ.ಮಾಲತಿ ಹೊಳ್ಳ ಕಿವಿಮಾತು ಹೇಳಿದರು.

    ನಗರದ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ಸ್ಮರಣಾರ್ಥ ಶುಕ್ರವಾರ ಆಯೋಜಿಸಿದ್ದ 19ನೇ ವಾರ್ಷಿಕೋತ್ಸವ, ಯುವ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಯಾವುದೇ ಕ್ಷೇತ್ರವಾಗಿರಲಿ ನಮ್ಮಲ್ಲಿ ಗುರಿ ಇರಬೇಕು. ಗುರಿ ಮುಟ್ಟುವ ತನಕ ಪ್ರಯತ್ನ ಬಿಡಬಾರದು. ಬೇರೆಯವರ ಜತೆ ನಮ್ಮನ್ನು ಹೋಲಿಸಿಕೊಳ್ಳುವ ಬದಲಾಗಿ ನಾವೇ ಮಾದರಿಯಾಗಿ ಬದುಕಬೇಕು ಎಂದರು.

    ಕುಡಚಿ ಶಾಸಕ ಪಿ.ರಾಜೀವ ಮಾತನಾಡಿ, ಆಧ್ಯಾತ್ಮಿಕ ತಳಹದಿ ಮೇಲೆ ರಾಮಕೃಷ್ಣ ಆಶ್ರಮ ನಿಂತಿದೆ. ಸ್ವಾಮಿ ವಿವೇಕಾನಂದರು ತೋರಿದ ಮಾರ್ಗದಲ್ಲಿ ಸಾಗಿದರೆ ಯಾರೂ ಸಹಿತ ತಮ್ಮ ಜೀವನದಲ್ಲಿ ವೈಫಲ್ಯತೆ ಅನುಭವಿಸಲು ಸಾಧ್ಯವೇ ಇಲ್ಲ. ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಪುರುಷೋತ್ತಮನಂದರ ಭಾಷಣ ಕೇಳಿದ ನಂತರ ನನ್ನ ಜೀವನವೇ ಬದಲಾಯಿತು. ಜೀವನ ರೂಪಿಸಿಕೊಳ್ಳಲು ಪೂರಕ ಮಾರ್ಗದರ್ಶನ ಇಲ್ಲಿ ಸಿಗುತ್ತದೆ ಎಂದರು.

    ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಪುರುಷೋತ್ತಮನಂದರ ಭಾಷಣ ಕೇಳಿದೆ. ಇದರಿಂದ ನನ್ನ ಜೀವನವೇ ಬದಲಾಯಿತು. ವಿವೇಕಾನಂದರು ತೋರಿದ ಮಾರ್ಗದಲ್ಲಿ ಸಾಗಿದರೆ ಯಾರೊಬ್ಬರೂ ತಮ್ಮ ಜೀವನದಲ್ಲಿ ವೈಫಲ್ಯ ಅನುಭವಿಸಲು ಸಾಧ್ಯವೇ ಇಲ್ಲ ಎಂದರು. ಜಗತ್ತಿಗೆ ಅಧ್ಯಾತ್ಮಿಕ ಸಾರಿ ಹೇಳಿದ್ದು ನಮ್ಮ ಭಾರತ. ಬಿಸಿ ರಕ್ತದ ಯುವಕರು ವೈಜ್ಞಾನಿಕ ಚಿಂತನೆ ಮೂಲಕ ಆಧ್ಯಾತ್ಮಿಕ ಹಾದಿಯಲ್ಲಿ ಸಾಗಬೇಕು. ವಿದ್ಯಾರ್ಥಿ ಜೀವನವನ್ನು ವ್ಯರ್ಥವಾಗಿ ಕಳೆಯದೆ ಸ್ವಾಮಿ ವಿವೇಕಾನಂದರು ತೋರಿದ ಮಾರ್ಗದಲ್ಲಿ ಮುನ್ನುಗ್ಗಬೇಕು ಎಂದರು. ಬೆಂಗಳೂರು ಶಿವನಹಳ್ಳಿ ರಾಮಕೃಷ್ಣ ಮಿಷನ್‌ನ ಸ್ವಾಮಿ ಮಂಗಳಾನಾಥ ಮಹಾರಾಜ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts