ನವದೆಹಲಿ: 2025ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಐಪಿಎಲ್ 18ನೇ ಆವೃತ್ತಿಗೆ ಇಂದಿನಿಂದಲೇ ಭರ್ಜರಿ ತಯಾರಿಗಳು ಶುರುವಾಗಿದ್ದು, ಈಗಾಗಲೇ ರಿಟೆನ್ಶನ್ ಪ್ರಕ್ರಿಯೆ ಕೂಡ ಮುಕ್ತಾಯಗೊಂಡಿದೆ. ಯಾವ ನಾಲ್ಕು ಆಟಗಾರರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಲು ಆಯಾ ಫ್ರಾಂಚೈಸಿ ನಿರ್ಧರಿಸಿದೆ ಎಂಬುದನ್ನು ಅ.31ರಂದು ಐಪಿಎಲ್ ಮಂಡಳಿಗೆ ತಿಳಿಸಬೇಕಿತ್ತು. ಅದರಂತೆಯೇ ಉಳಿಸಿಕೊಳ್ಳುವ ಪ್ರಕ್ರಿಯೆ ಅಂತ್ಯಗೊಂಡಿದ್ದು, ಈ ಪಟ್ಟಿಯಲ್ಲಿ ಶಾಕಿಂಗ್ ಹೆಸರುಗಳು ಕೇಳಿಬಂದಿದ್ದೇ ಆದರೂ ಐದು ತಂಡದ ಐದು ಕ್ಯಾಪ್ಟನ್ಗಳು ಇದೀಗ ಹರಾಜಿನತ್ತ (IPL Auction) ಮುಖ ಮಾಡಿರುವುದು ಸದ್ಯ ಕ್ರಿಕೆಟ್ ಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.
ಹರಾಜು ಪ್ರಕ್ರಿಯೆಗೂ ಮುಂಚಿತವಾಗಿಯೇ ಜಾಲತಾಣಗಳಲ್ಲಿ ಕೆಲವು ಭವಿಷ್ಯವಾಣಿ ಮತ್ತು ವರದಿಗಳು ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಹಾಗೂ ಗೊಂದಲ ಹುಟ್ಟುಹಾಕಿವೆ. ಈ ಪೈಕಿ ಲಖನೌ ಸೂಪರ್ ಜೈಂಟ್ಸ್ ಕ್ಯಾಪ್ಟನ್, ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ರನ್ನು ಉಳಿಸಿಕೊಳ್ಳುವುದು ಬಹುತೇಕ ಅನುಮಾನ ಎಂದೇ ಊಹಿಸಲಾಗಿತ್ತು. ಅಂತಿಮವಾಗಿ ಇದು ನಿಜವಾಗಿದ್ದರ ಜತೆಗೆ ಇನ್ನೂ ಕೆಲವರ ಹೆಸರು ಆಶ್ಚರ್ಯಕ್ಕೆ ಕಾರಣವಾಗಿದೆ.
ಕೋಲ್ಕತ ನೈಟ್ ರೈಡರ್ಸ್- ಶ್ರೇಯಸ್ ಅಯ್ಯರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು- ಫಾಫ್ ಡು ಪ್ಲೆಸಿಸ್
ಲಖನೌ ಸೂಪರ್ ಜೈಂಟ್ಸ್ - ಕೆ.ಎಲ್. ರಾಹುಲ್
ಡೆಲ್ಲಿ ಕ್ಯಾಪಿಟಲ್ಸ್- ರಿಷಭ್ ಪಂತ್
ಪಂಜಾಬ್ ಕಿಂಗ್ಸ್- ಶಿಖರ್ ಧವನ್