ಶಕ್ತಿ ವಿದ್ಯಾರ್ಥಿಗಳು ಎಸ್‌ಜಿಎಫ್‌ಟಿ ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಆಯ್ಕೆ

mng_29 oct shakthi
ಎಸ್‌ಜಿಎಫ್‌ಟಿ ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಶಕ್ತಿ ವಿದ್ಯಾರ್ಥಿಗಳಾದ ಲಿಖಿತ್ ಎಸ್ ಸುವರ್ಣ ಹಾಗೂ ಅಮೋಘ ವರ್ಷ.
Published on

ಮಂಗಳೂರು: ಶಕ್ತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಲಿಖಿತ್ ಎಸ್ ಸುವರ್ಣ ಹಾಗೂ ಶಕ್ತಿ ವಸತಿ ಶಾಲೆಯ ಅಮೋಘವರ್ಷ ಇವರು ಮಧ್ಯಪ್ರದೇಶದ ದಿವಾಸ್‌ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಎಸ್‌ಜಿಎಫ್‌ಟಿ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್‌ಗೆ ಅಯ್ಕೆಯಾಗಿದ್ದಾರೆ. ಹಾಗೂ ಶಕ್ತಿ ವಸತಿ ಶಾಲೆಯ ವಿವನ್ ಸಾಗರ್ ಶೆಟ್ಟಿ ಇವರು ಬೆಳ್ಳಿ ಪದಕ ಜಯಿಸಿಕೊಂಡಿರುತ್ತಾರೆ.

ವಿಜೇತರನ್ನು ಸಂಸ್ಥೆಯ ಸಂಸ್ಥಾಪಕ ಡಾ. ಕೆ. ಸಿ. ನಾಕ್, ಕಾರ್ಯದರ್ಶಿ ಸಂಜಿತ್ ನಾಕ್. ಪ್ರಧಾನ ಸಲಹೆಗಾರ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಮತ್ತು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net