ಶಿವಮೊಗ್ಗ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರ ಜೀವನ ಕತೆಯಾಧಾರಿತ ಹಾಗೂ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ನಟನೆಯ ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸಿನಿಮಾದಲ್ಲಿ ಬರುವಂತಹ ಯುವರಾಜ್ ಸಿಂಗ್ ಅವರ ದೃಶ್ಯವನ್ನು ಬಹುತೇಕ ಮಂದಿ ನೋಡಿಯೇ ಇರ್ತೀರಿ. ಯುವರಾಜ್ ಸಿಂಗ್ ಸಾಧನೆಯನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಆದರೆ, ಆ ಸಾಧನೆಯನ್ನು ಇಂದು ನಡೆದ ದೇಸಿ ಪಂದ್ಯಾವಳಿಯಲ್ಲಿ ಕನ್ನಡಿಗನೋರ್ವ ಪುಡಿ ಪುಡಿ ಮಾಡಿದ್ದಾನೆ.
ಹೌದು, ಸೋಮವಾರ ಶಿವಮೊಗ್ಗದಲ್ಲಿ ಮುಂಬೈ ವಿರುದ್ಧ ನಡೆದ ಕೂಚ್ ಬೆಹರ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ 636 ಎಸೆತಗಳಲ್ಲಿ ಅಜೇಯ 404* ರನ್ ಬಾರಿಸುವ ಮೂಲಕ ಯುವರಾಜ್ ಸಿಂಗ್ ಅವರ 25 ವರ್ಷ ಹಿಂದಿನ ದಾಖಲೆಯನ್ನು ಮುರಿಯವಲ್ಲಿ ಕರ್ನಾಟಕದ ಪ್ರಖರ್ ಚತುರ್ವೇದಿ ಯಶಸ್ವಿಯಾಗಿದ್ದಾರೆ.
ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಯುವರಾಜ್, 1999ರಲ್ಲಿ ಬಿಹಾರ ವಿರುದ್ಧ ಪಂಜಾಬ್ ಪರ 358 ರನ್ ಗಳಿಸಿದ್ದರು. ಈ ವೇಳೆ ಅವರು ಧೋನಿ ಪ್ರತಿನಿಧಿಸಿದ್ದ ಬಿಹಾರ ತಂಡವನ್ನು ಸೋಲಿಸಿ ಈ ದಾಖಲೆಯನ್ನು ಬರೆದಿದ್ದರು.
ಇಂದು (ಜ.15) ನಡೆದ ಕೂಚ್ ಬೆಹರ್ ಟ್ರೋಫಿಯ ಫೈನಲ್ ಪಂದ್ಯಾಟದ ಮೊದಲ ಇನ್ನಿಂಗ್ಸ್ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಕರ್ನಾಟಕ ತಂಡ 380 ರನ್ಗಳಿಗೆ ಮುಂಬೈ ತಂಡವನ್ನು ಆಲೌಂಟ್ ಮಾಡಿತು. 380 ರನ್ಗಳ ಗುರಿ ಬೆನ್ನು ಹತ್ತಿದ ಕರ್ನಾಟಕ, ಹರ್ಷಿಲ್ ದಮಾನಿಯವರು 179 ರನ್, ಚತುರ್ವೇದಿ 400 ರನ್ ಗಳಿಸಿ ತಂಡದ ಒಟ್ಟು ಮೊತ್ತ 890ರ ಗಡಿ ದಾಟುತ್ತಿದ್ದಲ್ಲದೆ, 510 ರನ್ ಮುನ್ನಡೆಯನ್ನು ಕರ್ನಾಟಕ ತಂಡ ಕಾಯ್ದುಕೊಂಡಿತು. ಆದರೆ, ನಾಲ್ಕನೇ ದಿನ ಮುಕ್ತಾಯವಾದ್ದರಿಂದ ಪಂದ್ಯವನ್ನು ಡ್ರಾ ಎಂಬ ನಿರ್ಣಯದೊಂದಿಗೆ ತೆರೆ ಎಳೆಯಲಾಯಿತು.
ಚತುರ್ವೇದಿ ಅವರು ಕೂಚ್‌ಬೆಹರ್ ಟ್ರೋಫಿಯಲ್ಲಿ 46 ಬೌಂಡರಿಗಳು ಮತ್ತು ಮೂರು ಸಿಕ್ಸರ್ಗಳನ್ನು ಬಾರಿಸಿ 63.32 ರನ್ ರೇಟ್ ನೊಂದಿಗೆ 400 ರನ್ ಗಳಿಸಿದ ಮೊದಲ ಆಟಗಾರನಾಗಿ ಮೂಡಿಬಂದ್ದಿದಾರೆ.