More

    ವಿರಾಟ್ ಕೊಹ್ಲಿ ಅಬ್ಬರದ​ ಬ್ಯಾಟಿಂಗ್ ಕಂಡು ವಾರ್ನಿಂಗ್​ ಕೊಟ್ಟ ಆಕಾಶ್​ ಚೋಪ್ರಾ​! ಆತಂಕದಲ್ಲಿ ಅಭಿಮಾನಿಗಳು

    ನವದೆಹಲಿ: ಕ್ರಿಕೆಟ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಭಾರತದಲ್ಲಂತೂ ಅತಿ ಹೆಚ್ಚು ವೀಕ್ಷಿಸುವ ಆಟವಾಗಿದೆ. ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್ ಹಾಗೂ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಕ್ರೇಜ್ ಅಂತೂ ಹೇಳತೀರದು. ನಿನ್ನೆ (ಜ.14) ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಅಬ್ಬರದ ಆಟವಾಡಿದ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದರು. ಆದರೆ, ಕೊಹ್ಲಿ ಆಟದ ಬಗ್ಗೆ ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ಹೇಳಿರುವ ಮಾತು ಅದೇ ಅಭಿಮಾನಿಗಳಿಗೆ ಆಘಾತವನ್ನೂ ಉಂಟು ಮಾಡಿದೆ.

    ಹಾಗಾದರೆ, ಆಕಾಶ್​ ಚೋಪ್ರಾ ಹೇಳಿದ್ದೇನು ಎಂದು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೆ, ಮುಂದೆ ಓದಿ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಟಿ20 ಯಲ್ಲಿ ಕೊಹ್ಲಿಯ ಆಕ್ರಮಣಕಾರಿ ಬ್ಯಾಟಿಂಗ್​ ಬಗ್ಗೆ ಆಕಾಶ್ ಚೋಪ್ರಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಆಡಲು ಪ್ರಾರಂಭಿಸಿದ್ದು, ಸ್ಥಿರತೆ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಚೋಪ್ರಾ ಎಚ್ಚರಿಸಿದ್ದಾರೆ.

    2022ರ ಐಸಿಸಿ ಟಿ20 ವಿಶ್ವಕಪ್​ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಹೀನಾಯವಾಗಿ ಸೋತ ನಂತರ ಕಿಂಗ್ ಕೊಹ್ಲಿ ಒಂದು ವರ್ಷದ ಬಳಿಕ ಅಂತಾರಾಷ್ಟ್ರೀಯ ಟಿ20 ಸ್ವರೂಪಕ್ಕೆ ಮರಳಿದ್ದಾರೆ. ಈ ಸಂಗತಿ ಕೊಹ್ಲಿ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಭಾನುವಾರ ನಡೆದ ಪಂದ್ಯಾಟದಲ್ಲಿ ಕೊಹ್ಲಿ ತಮ್ಮ ಕೆಲವು ಟ್ರೇಡ್‌ಮಾರ್ಕ್ ಶಾಟ್‌ಗಳ ಮೂಲಕ ಪಂದ್ಯದಲ್ಲಿ 150 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಮಾಡಿದರು. ಇದರ ಬಗ್ಗೆ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೊಹ್ಲಿ ಅವರು ಇದೇ ಮೊದಲ ಬಾರಿಗೆ ಹಿಟ್‌ಗಳನ್ನು ಹೊಡೆಯುವುದು ಮಾತ್ರವಲ್ಲದೆ ಅವರ ಆಟವು ಕೂಡ ತುಂಬಾ ವಿಭಿನ್ನವಾಗಿತ್ತು ಎಂದಿದ್ದಾರೆ.

    ಮುಂದುವರಿದು ಮಾತನಾಡಿದ ಚೋಪ್ರಾ, ನನ್ನ ಪ್ರಕಾರ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್​ನಲ್ಲಿದ್ದಾರೆ. ಅವರು ಈ ಹಿಂದೆ ಸುಮಾರು 140 ಸ್ಟ್ರೈಕ್ ರೇಟ್‌ನಲ್ಲಿ 4,000 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಆದ್ದರಿಂದ ಅವರು ಅದೇ ಸ್ಟ್ರೈಕ್ ರೇಟ್‌ನಲ್ಲಿ ಆಡಿದರೆ ಒಳ್ಳೆಯದು. ಆದರೆ, ಸ್ಟ್ರೈಕ್ ರೇಟ್‌ ಹೆಚ್ಚಿಸಲು ಪ್ರಯತ್ನಿಸಿದರೆ ಅವರು ತಮ್ಮ ಬ್ಯಾಟಿಂಗ್​ನಲ್ಲಿ ಸ್ಥಿರತೆ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಂದರೆ, ಫಾರ್ಮ್​ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಹೀಗಾದಲ್ಲಿ ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ಅವರನ್ನು ಹಾಗೆ ನೋಡುವುದು ಕಷ್ಟದ ಸಂಗತಿ ಎಂದು ಚೋಪ್ರಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಇನ್ನೂ ಮುಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಇದೇ ರೀತಿ ಅಬ್ಬರಿಸುತ್ತಾರಾ? ಅಥವಾ ಮತ್ತು ತಮ್ಮ ಹಳೆಯ ಲಯಕ್ಕೆ ಬರುತ್ತಾರಾ? ಎಂಬುದನ್ನು ಕಾದು ನೋಡಬೆಕಿದೆ. (ಏಜೆನ್ಸೀಸ್​)

    ಸರ್ಕಾರಿ ಕೆಲಸ ಸಿಗುತ್ತೆ ಎಂಬ ಆಸೆಯಿಂದ ಸಂದರ್ಶನಕ್ಕೆ ಹೋದ ಮಹಿಳೆಯರಿಗೆ ಕಾದಿತ್ತು ಶಾಕ್​!

    ಜಗನ್ನಾಥ ದೇವರಿಗೆ ಪೂಜೆ ಸಲ್ಲಿಸಿದ ಇಟಲಿ ಮಹಿಳಾ ಹಾಕಿ ತಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts