More

    ಜಗನ್ನಾಥ ದೇವರಿಗೆ ಪೂಜೆ ಸಲ್ಲಿಸಿದ ಇಟಲಿ ಮಹಿಳಾ ಹಾಕಿ ತಂಡ!

    ರಾಂಚಿ (ಜಾರ್ಖಂಡ್): ಇಟಲಿ ಮಹಿಳಾ ಹಾಕಿ ತಂಡವು ಇತ್ತೀಚೆಗೆ ರಾಂಚಿಯ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿತು. ಬಹುನಿರೀಕ್ಷಿತ ಎಫ್‌ಐಎಚ್ ಹಾಕಿ ಒಲಿಂಪಿಕ್ಸ್ ಕ್ವಾಲಿಫೈಯರ್ ಟೂರ್ನಿ ಆರಂಭಗೊಂಡಿದ್ದು, ಭಾರತ ಆತಿಥ್ಯವಹಿಸಿರುವ ಈ ಟೂರ್ನಿಗೆ ಅಮೆರಿಕ, ಜಪಾನ್, ಜೆಕ್ ಗಣರಾಜ್ಯ ಸೇರಿ 7 ವಿವಿಧ ತಂಡಗಳು ಆಗಮಿಸಿದೆ. ಇದೀಗ ಇಟಲಿ ಮಹಿಳಾ ತಂಡ ಮಹತ್ವದ ಪಂದ್ಯಕ್ಕೂ ಮುನ್ನ ಜಗನ್ನಾಥನ ದರ್ಶನ ಪಡೆದಿದೆ.

    ಇದನ್ನೂ ಓದಿ: ಬಾಕ್ಸ್‌ ಆಫೀಸ್‌ನಲ್ಲಿ ಹನುಮಾನ್​ ಹವಾ..ಕಾಂತಾರ, ಕೆಜಿಎಫ್‌ ದಾಖಲೆ ಮುರಿಯಿತೇ?
    ಸಾಂಪ್ರಾದಾಯಿಕ ಪೂಜೆ ಸಲ್ಲಿಸಿದ ಇಟಲಿ ತಂಡ ಉತ್ತಮ ಪ್ರದರ್ಶನಕ್ಕಾಗಿ ಪ್ರಾರ್ಥಿಸಿದೆ. ತಂಡವು ಜಗನ್ನಾಥನ ದರ್ಶನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ತಂಡದ ಆಟಗಾರ್ತಿಯರು, ಸಹಾಯಕ ಸಿಬ್ಬಂದಿ ಸೇರಿ ಜಗನ್ನಾಥ ದೇವಸ್ಥಾನಕ್ಕೆ ಆಗಮಿಸಿದ್ದರು. ಪೂಜೆ ಸಲ್ಲಿಸುವ ಸಂದರ್ಭ ಅರ್ಚಕರು ಹೇಳಿದ ಮಂತ್ರಗಳನ್ನು ಪುನರುಚ್ಚರಿಸಿ ತಂಡದ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ. ಇಟಲಿ ತಂಡ ಜಗನ್ನಾಥನ ದರ್ಶನ, ಪೂಜೆ ಕುರಿತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ವಿಶ್ವ ಮಹಿಳಾ ಹಾಕಿಯಲ್ಲಿ 19ನೇ ಸ್ಥಾನದಲ್ಲಿರುವ ಇಟಲಿ ಈ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯು ವಿಶ್ವಾಸದಲ್ಲಿದೆ. ಆದರೆ ಅನುಭವಿ ಆಟಗಾರರ ಕೊರತೆಯಲ್ಲಿರುವ ತಂಡ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ತಂಡದ ನಾಯಕಿ ಫೆಡ್ರಿಕಾ ಕಾರ್ತಾ 57 ಪಂದ್ಯಗಳನ್ನಾಡಿದ್ದಾರೆ. ಕೆಲ ತಿಂಗಳಿನಿಂದ ಒಲಿಂಪಿಕ್ಸ್ ಕ್ವಾಲಿಫೈಯರ್ ಪಂದ್ಯಕ್ಕಾಗಿ ಅಭ್ಯಾಸ ಮಾಡಿದ್ದೇವೆ. ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ನಾಯಕಿ ಫೆಡ್ರಿಕಾ ಹೇಳಿದ್ದಾರೆ.

    ಮದುವೆಗೆ ಮುನ್ನ ವಿಯೆಟ್ನಾಂಗೆ ಹಾರಿದ ರಶ್ಮಿಕಾ-ವಿಜಯ್ ದೇವರಕೊಂಡ..ಫ್ಯಾನ್ಸ್​ ಏನಂತಿದ್ದಾರೆ ನೋಡಿ..

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts