More

    ಬಾಕ್ಸ್‌ ಆಫೀಸ್‌ನಲ್ಲಿ ಹನುಮಾನ್​ ಹವಾ..ಕಾಂತಾರ, ಕೆಜಿಎಫ್‌ ದಾಖಲೆ ಮುರಿಯಿತೇ?

    ಹೈದರಾಬಾದ್​: ಹೊಸ ವರ್ಷದ ಮೊದಲ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿ ಹನುಮಾನ್‌ ಹೊರಹೊಮ್ಮಿದೆ. ತೇಜ ಸಜ್ಜ ನಟನೆಯ ತೆಲುಗು ಸಿನಿಮಾ ಮೊದಲ ವಾರಾಂತ್ಯದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ 40.65 ಕೋಟಿ ರೂಪಾಯಿ ಗಳಿಕೆ ಮಾಡಿದೆ.

    ಇದನ್ನು ಓದಿ: ಜ.16ರಂದು ಆಂಧ್ರಕ್ಕೆ ಪ್ರಧಾನಿ ಮೋದಿ ಭೇಟಿ: ಲೇಪಾಕ್ಷಿ ದೇವಾಲಯಗಳಲ್ಲಿ ವಿಶೇಷ ಪೂಜೆ

    ಇದು ಯಶ್‌ ನಟನೆಯ ಕೆಜಿಎಫ್‌: ಚಾಪ್ಟರ್‌ 1 ಮತ್ತು ರಿಷಬ್‌ ಶೆಟ್ಟಿ ನಟನೆಯ ಕಾಂತಾರದ ಮೊದಲ ವಾರಾಂತ್ಯದ ಗಳಿಕೆಗಿಂತ ಹೆಚ್ಚು. ಈ ಸಿನಿಮಾದ ಗಳಿಕೆಯು ಅಲ್ಲು ಅರ್ಜುನ್‌ ನಟನೆಯ ಪುಷ್ಪಾ ಸಿನಿಮಾದ ಗಳಿಕೆಗೆ ಹತ್ತಿರದಲ್ಲಿದೆ.

    ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ನಟನೆಯ ಫೈಟರ್‌ ಸಿನಿಮಾ ಬಿಡುಗಡೆಗೆ ಇನ್ನೂ ಹತ್ತು ದಿನ ಬಾಕಿ ಇದೆ. ಹೀಗಾಗಿ ಮುಂದಿನ ಹತ್ತು ದಿನಗಳಲ್ಲಿ ಹನುಮಾನ್‌ ಬಾಕ್ಸ್‌ ಆಫೀಸ್‌ ಗಳಿಕೆಗೆ ಯಾವುದೇ ಅಡೆತಡೆ ಇಲ್ಲ ಎನ್ನಲಾಗುತ್ತಿದೆ.

    ಹನುಮಾನ್‌ ಗಳಿಕೆ ಎಷ್ಟು?: ಮೊದಲ ದಿನ ಹನುಮಾನ್‌ ಸಿನಿಮಾ 8 ಕೋಟಿ ರೂ.ಗಳಿಕೆ ಮಾಡಿತ್ತು. ಈ ಸಿನಿಮಾ ನೋಡಿದವರು ಚಿತ್ರದ ಕುರಿತು ಸಕಾರಾತ್ಮಕ ವಿಮರ್ಶೆ ಮಾಡಿದ ಬಳಿಕ ಇದರ ಜನಪ್ರಿಯತೆ ಹೆಚ್ಚಾಯಿತು. ಇದೇ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಮಹೇಶ್‌ ಬಾಬು ಅವರ ಗುಂಟೂರು ಖಾರಂ ಸಹ ಬಿಡುಗಡೆಯಾಗಿತ್ತು. ಅದು ಮೊದಲ ದಿನ ಭರ್ಜರಿ ಗಳಿಕೆ ಮಾಡಿತ್ತು. ಆದರೆ, ಸಿನಿಮಾ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಬಳಿಕ ಇದರ ಗಳಿಕೆ ಕಡಿಮೆಯಾಗಿತ್ತು. ಇನ್ನು ಹನುಮಾನ್‌ ಇಲ್ಲಿಯವರೆಗೆ 28.21 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಿಂದಿ ಆವೃತ್ತಿಯು 12 ಕೋಟಿ ಗಳಿಕೆ ಮಾಡಿದೆ. ತಮಿಳು ಮತ್ತು ಕನ್ನಡ ಆವೃತ್ತಿಗಳು ತಲಾ 19 ಕೋಟಿ ರೂ. ಗಳಿಕೆ ಮಾಡಿದೆ. ಮಲಯಾಳಂ ಆವೃತ್ತಿಯು 6 ಕೋಟಿ ರೂ. ಗಳಿಕೆ ಮಾಡಿದೆ.

    ಕಾಂತಾರ, ಕೆಜಿಎಫ್‌ಗಿಂತಲೂ ಹೆಚ್ಚು ಗಳಿಕೆ: ಹನುಮಾನ್‌ ನ ಮೊದಲ ಮೂರು ದಿನದ ಗಳಿಕೆ ಕುರಿತು ಅಚ್ಚರಿಯ ಸಂಗತಿಯೊಂದು ಇದೆ. ಇದರ ಇಷ್ಟು ದಿನದ ಗಳಿಕೆಯು ಕೆಜಿಎಫ್‌ ಮೊದಲ ಭಾಗ ಮತ್ತು ಕಾಂತಾರದ ಮೊದಲ ಮೂರು ದಿನಗಳ ಗಳಿಕೆಯನ್ನು ಮೀರಿಸಿದೆ.
    ‘ಹನು-ಮಾನ್’ ಸಿನಿಮಾವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸಿದ್ದಾರೆ. ನಾಯಕ ನಟನಾಗಿ ತೇಜ ಸಜ್ಜ ನಟಿಸಿದ್ದು, ನಾಯಕಿಯಾಗಿ ಅಮೃತಾ ಐಯ್ಯರ್ ಅಭಿನಯಿಸಿದ್ದಾರೆ.

    ‘ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪಿಸುವಾಗ ನಾವು ಹೊರಗೆ ಕುಳಿತು ಚಪ್ಪಾಳೆ ತಟ್ಟಬೇಕಾ?’: ಪುರಿ ಸ್ವಾಮಿ ನಿಶ್ಚಲಾನಂದ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts