More

    ‘ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪಿಸುವಾಗ ನಾವು ಹೊರಗೆ ಕುಳಿತು ಚಪ್ಪಾಳೆ ತಟ್ಟಬೇಕಾ?’: ಪುರಿ ಸ್ವಾಮಿ ನಿಶ್ಚಲಾನಂದ ಪ್ರಶ್ನೆ

    ಕೋಲ್ಕತ್ತಾ: ನಾಲ್ವರು ಶಂಕರಾಚಾರ್ಯರು ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಮತ್ತು ಬಾಲರಾಮ ದೇವರ ಪ್ರಾಣ ಪ್ರತಿಷ್ಠಾ ಸಮಾರಂಭದಿಂದ ಹೊರಗುಳಿಯಲು ಚಿಂತಿಸುತ್ತಿದ್ದಾರೆ ಎಂಬ ವಿರೋಧಿ ಬಣಗಳ ಪ್ರತಿಪಾದನೆಯ ನಡುವೆ ಪುರಿಯ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಮಹಾರಾಜ್ ಅವರು ತಮ್ಮ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.

    ಇದನ್ನೂ ಓದಿ: ಮಂದಿರ ಉದ್ಘಾಟನೆಯ ದಿನ ರಾಮನ ಜಪ ಮಾಡಿ

    ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಮದೇವರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ನಾಲ್ವರು ಶಂಕರಾಚಾರ್ಯರು ಏಕೆ ಹಾಜರಾಗುತ್ತಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಶಂಕರಾಚಾರ್ಯರು ತಮ್ಮದೇ ಆದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಇದು ಅಹಂಕಾರದ ಬಗ್ಗೆ ಅಲ್ಲ. ಪ್ರಧಾನಿಯವರು ರಾಮ್ ಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಿದಾಗ ನಾವು ಕೇವಲ ಹೊರಗೆ ಕುಳಿತು ಚಪ್ಪಾಳೆ ತಟ್ಟಬೇಕು ಎಂದು ನಿರೀಕ್ಷಿಸಲಾಗಿದೆಯೇ? ‘ಜಾತ್ಯತೀತ’ ಮತ್ತು ಸಂಪ್ರದಾಯವನ್ನು ಅಳಿಸಿಹಾಕುವುದನ್ನು ನಾವು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

    ಈ ನಡುವೆ ನಾಲ್ವರು ಶಂಕರಾಚಾರ್ಯರು ಕಾರ್ಯಕ್ರಮದಿಂದ ಹೊರಗುಳಿದಿರುವ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಇದನ್ನೇ ಮುಂದಿಟ್ಟುಕೊಂಡು ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದಾರೆ.

    ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್, ಬಿಜೆಪಿಯವರು ಇದನ್ನು ರಾಜಕೀಯಗೊಳಿಸಿ ನಿರ್ಧಾರಗಳನ್ನು ತೆಗೆದುಕೊಂಡಾಗ, ಸನಾತನ ಧರ್ಮದ ಅಗ್ರಸ್ಥಾನದಲ್ಲಿರುವ ಮತ್ತು ನಮಗೆ ಮಾರ್ಗದರ್ಶನ ನೀಡುವ ನಮ್ಮ ಶಂಕರಾಚಾರ್ಯರು ಈ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದಿದ್ದಾರೆ. ದೇಶದ ಮೂರನೇ ಎರಡರಷ್ಟು ಜನಸಂಖ್ಯೆಯನ್ನು ಭಗವಾನ್ ರಾಮನಿಂದ ಬೇರ್ಪಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.

    ಮೈದಾನಕ್ಕೆ ನುಗ್ಗಿ ಕೊಹ್ಲಿ ಪಾದಮುಟ್ಟಿ ಬಿಗಿದಪ್ಪಿದ ಅಭಿಮಾನಿ: ಕಡೆಗೆ ಏನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts