More

    ಹೈಸ್ಕೂಲ್ ಶಿಕ್ಷಕರ ರಜೆಗೆ ಸರ್ಕಾರ ಕತ್ತರಿ ಪ್ರಯೋಗ – ಡಾ.ಎಸ್.ಆರ್.ಹರೀಶ್ ಆಚಾರ್ಯ ಖಂಡನೆ




    ಮಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ ನೋಂದಣಿ ಮಾಡಲು ಇರುವ ವಿದ್ಯಾರ್ಥಿಗಳಿಗೆ ಮೇ 15ರಿಂದ ಜೂ.5ರ ವರೆಗೆ ಆಯಾ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ(ಕೆಎಸ್‌ಇಎಬಿ) ತರಾತುರಿಯಲ್ಲಿ ನಿರ್ದೇಶನ ನೀಡುವ ಮೂಲಕ ಶಿಕ್ಷಕರಿಗೆ ರಜೆಯ ವಿಚಾರದಲ್ಲಿ ಅನ್ಯಾಯ ಮಾಡಿರುವುದು ಖಂಡನೀಯ ಎಂದು ಮಂಗಳೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಎಸ್.ಆರ್.ಹರೀಶ್ ಆಚಾರ್ಯ ಹೇಳಿದ್ದಾರೆ.
    ಸೇವಾ ನಿಯಮಗಳ ಪ್ರಕಾರ ಶಿಕ್ಷಕರಿಗೆ ಬೇಸಿಗೆ ರಜೆ ನೀಡಿರುವ ಸರ್ಕಾರವೇ ಈಗ ಏಕಾಏಕಿ ವಿಶೇಷ ತರಗತಿ ನಡೆಸಲು ಶಾಲೆಗೆ ಬನ್ನಿ ಎಂದು ಆದೇಶ ನೀಡುವುದು ಯಾವ ನ್ಯಾಯ ? ಮಕ್ಕಳಂತೆ ಶಿಕ್ಷಕರು ಕೂಡಾ ತಮ್ಮ ಕುಟುಂಬದ ಜತೆಗೆ ರಜೆಯಲ್ಲಿ ಹೋಗಿರುತ್ತಾರೆ. ಮೇ.15ರಂದು ಏಕಾಏಕಿ ಕೆಎಸ್‌ಇಎಬಿ ನಿರ್ದೇಶನ ನೀಡುವ ಮೂಲಕ ಶಿಕ್ಷಕರ ರಜೆಗೆ ಕತ್ತರಿ ಪ್ರಯೋಗ ಮಾಡಿದ್ದು ಸರಿಯಲ್ಲ. ಸರ್ಕಾರ ಮೊದಲೇ ನಿಗದಿಪಡಿಸಿದಂತೆ ಶಾಲೆಗಳು ಅಧಿಕೃತವಾಗಿ ಆರಂಭವಾಗಲು ಇನ್ನೂ 14 ದಿನಗಳ ಸಮಯಾವಕಾಶವಿದೆ. ಬೇಸಿಗೆ ರಜೆಯ ಈ ಹಿಂದಿನ ತಿಂಗಳ ಅವಧಿ ಲೋಕಸಭಾ ಚುನಾವಣೆಯ ಕರ್ತವ್ಯದಲ್ಲೇ ಕಳೆದುಹೋಗಿದೆ. ಈಗ ಸಿಕ್ಕಿರುವ ರಜೆಯನ್ನೂ ಕಡಿತಗೊಳಿಸಿ ಶಿಕ್ಷಕರು ಶಾಲೆಗಳಿಗೆ ಆಗಮಿಸುವಂತೆ ಸೂಚನೆ ನೀಡುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts