ಜ.16ರಂದು ಆಂಧ್ರಕ್ಕೆ ಪ್ರಧಾನಿ ಮೋದಿ ಭೇಟಿ: ಲೇಪಾಕ್ಷಿ ದೇವಾಲಯಗಳಲ್ಲಿ ವಿಶೇಷ ಪೂಜೆ

modi
Published on

ಅಮರಾವತಿ(ಆಂಧ್ರಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ(ಜ.16) ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಶ್ರೀಸತ್ಯಸಾಯಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕ ಗಡಿ ಭಾಗದ ಲೇಪಾಕ್ಷಿ ದುರ್ಗೆ ದೇವಾಲಯದ ಜತೆಗೆ ಪಾಪನಾತೇಶ್ವರ ಹಾಗೂ ವೀರಭದ್ರ ಸ್ವಾಮಿ ದೇವಸ್ಥಾನಗಳಿಗೆ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯದ ಭದ್ರತಾ ಸಿಬ್ಬಂದಿ, ರಾಜ್ಯ ಪೊಲೀಸರು ಹಾಗೂ ಆಡಳಿತ ವ್ಯವಸ್ಥೆ ಸಕಲ ಭದ್ರತಾ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ.

ವಿಶೇಷವಾಗಿ ಪ್ರಧಾನಿ ಕಾರ್ಯಾಲಯದ ಭದ್ರತಾ ಸಿಬ್ಬಂದಿ ಭದ್ರತೆ ಏರ್ಪಡಿಸುವ ಸಲುವಾಗಿ ರಾಜ್ಯದ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದೆ.

ಪ್ರಧಾನಿ ಮೋದಿ ಅವರ ಪ್ರವಾಸದಲ್ಲಿ ಆಂಧ್ರಪ್ರದೇಶದ ಗವರ್ನರ್ ಅಬ್ದುಲ್ ನಜೀರ್, ಸಿಎಂ ವೈ.ಎಸ್. ಜಗನ್, ರಾಜ್ಯ ಸಚಿವರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net