ಕ್ರೀಡೆ

ನನ್ನ ಪ್ರಕಾರ ಇನ್ನೂ ತುಂಬಾ ಇದೆ... Team India ಯುವ ವೇಗಿ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸ್ಟಾರ್​ ಆಟಗಾರ

ನವದೆಹಲಿ: ಬಾಂಗ್ಲಾದೇಶದ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟಿ20 ಸರಣಿಯನ್ನು ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿರುವ ಭಾರತ (Team India) ತಂಡವು ಸೀರೀಸ್​ ಗೆದ್ದು ಮುಂಬರುವ ಟೂರ್ನಿಗಳಿಗೆ ತಯಾರಿ ಆರಂಭಿಸಲು ಸಜ್ಜಾಗಿದೆ. ಇಂದು (ಅಕ್ಟೋಬರ್​ 09) ಸರಣಿಯ(Series) ಎರಡನೇ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ. ದೆಹಲಿಯ (Delhi) ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಆಡಿದ ತಂಡವೇ ಇಲ್ಲೂ ಮುಂದುವರಯುತ್ತದೆ ಎಂದು ಹೇಳಲಾಗಿದೆ.

17ನೇ ಆವೃತ್ತಿಯ ಐಪಿಎಲ್​ನಲ್ಲಿ (IPL) 156 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆಯುವ ಮೂಲಕ ಕ್ರೀಡಾ ವಲಯದಲ್ಲಿ ಸಾಕಷ್ಟು ಸದ್ದು ಮಾಡಿದ್ದ ದೆಹಲಿಯ ಮಯಾಂಕ್ ಯಾದವ್​ (Mayank Yadav) ಬಾಂಗ್ಲಾ (Bangladesh)ವಿರುದ್ಧದ ಸರಣಿಯಲ್ಲಿ (Series) ಆಡುವ ಮೂಲಕ ಟೀಮ್​ ಇಂಡಿಯಾ ಪರ ಕಣಕ್ಕಿಳಿದಿದ್ದಾರೆ. ಪದರ್ಪಾಣೆ ಪಂದ್ಯದಲ್ಲೇ (Debut Match) ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಮಯಾಂಕ್​ರನ್ನು ಮುಂಬರುವ ಟೆಸ್ಟ್ ಸರಣಿಗಳಿಗೆ ಆಯ್ಕೆ ಮಾಡುವಂತೆ ಆಗ್ರಹ ಕೇಳಿ ಬರುತ್ತಿದ್ದು, ಈ ಬಗ್ಗೆ ಮಾಜಿ ಕ್ರಿಕೆಟಿಗ ಆರ್​ಪಿ ಸಿಂಗ್ (RP Singh)​ ಮಾತನಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸಿಂಗ್​, ನವೆಂಬರ್​ 26ರಿಂದ ಆರಂಭವಾಗಲಿರುವ ಬಾರ್ಡರ್​​-ಗವಾಸ್ಕರ್​ ಟ್ರೋಫಿಗೆ ಆಕಾಶ್​ ದೀಪ್​ ಹಾಗೂ ಮಯಾಂಕ್​ ಯಾದವ್​ರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕು. ಮಯಾಂಕ್ ವಿಚಾರವಾಗಿ ಮಾತನಾಡುವುದಾದರೆ ಆತನಲ್ಲಿ ಕೌಶಲ್ಯವಿದ್ದು, ಟೆಸ್ಟ್​ ಕ್ರಿಕೆಟ್​ ಮುಖ್ಯವಾಗಿ ನಿಮ್ಮ ತಾಳ್ಮೆ ಮತ್ತು ಕೌಶಲ್ಯಗಳನ್ನು ಪರೀಕ್ಷಿಸುತ್ತದೆ. ಮಯಾಂಕ್​ ದೇಶೀಯ ಕ್ರಿಕೆಟ್​ನಲ್ಲಿ ಇನ್ನಷ್ಟು ಪಂದ್ಯಗಳನ್ನು ಆಡಬೇಕಿದ್ದು, ಆಕಾಶ್​ದೀಪ್​ ನನ್ನ ಪ್ರಕಾರ ಉತ್ತಮ ಆಯ್ಕೆ ಎಂದು ಆರ್​ಪಿ ಸಿಂಗ್​ ಹೇಳಿದ್ದಾರೆ.

ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar)​ ಟೆಸ್ಟ್​ ಸರಣಿಯೂ (Test Series) ನವೆಂಬರ್​ 26ಕ್ಕೆ ಆರಂಭವಾಗಲಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ (Border-Gavaskar)​ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) 2023-2025 ಅಡಿಯಲ್ಲಿ ಆಡಲಾಗುತ್ತಿದೆ.