ಕಸ್ಕಟ್ಲಾನ್: ಫುಟ್‌ಬಾಲ್ ಪಂದ್ಯಾಟದ ವೇಳೆ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 12 ಜನರು ಮೃತಪಟ್ಟು, 500ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ದಾರುಣ ಘಟನೆ ಎಲ್.ಸಾಲ್ವಡಾರ್ನಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರು ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ನಿನ್ನೆ ಎಲ್.ಸಾಲ್ವಡಾರ್‌ನ ಕುಸ್ಕಾಟ್ಲಾನ್‌ನಲ್ಲಿರುವ ಸ್ಮಾರಕ ಕ್ರೀಡಾಂಗಣದಲ್ಲಿ ಸ್ಥಳೀಯ ತಂಡ ಅಲಿಯಾಂಜಾ ಮತ್ತು ಎಫ್‌ಎಎಸ್ ನಡುವಿನ ಕ್ವಾರ್ಟರ್ ಫೈನಲ್ ನಡುವಿನ ಪಂದ್ಯಾಟದ ವೇಳೆ ಈ ಆಘಾತಕಾರಿ ಘಟನೆ ನಡೆದಿದೆ. ಈ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ಈ ವೇಳೆ ಕ್ರೀಡಾಂಗಣದ ಸಿಬ್ಬಂದಿ ಪ್ರವೇಶ ದ್ವಾರಗಳನ್ನು ಮುಚ್ಚಲು ಪ್ರಯತ್ನಿಸಿದಾಗ, ಅಭಿಮಾನಿಗಳ ಅತಿರೇಕತನದಿಂದಾಗಿ ಭೀಕರ ಕಾಲ್ತುಳಿತ ನಡೆದಿದೆ. ಈ ಘಟನೆಯಲ್ಲಿ ಹಲವು ಪುರುಷರು ಹಾಗೂ ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)