ರಾಜ್ಯದಲ್ಲಿ ಬಿಜೆಪಿ ಸೋಲಲು ಕಾಂಗ್ರೆಸ್​ನ ಗ್ಯಾರಂಟಿ ಕಾರ್ಡ್ ಕಾರಣ: ವರ್ತೂರು ಪ್ರಕಾಶ್

Varthur Prakash
Published on

ಕೋಲಾರ: ರಾಜ್ಯದಲ್ಲಿ ಬಿಜೆಪಿ ಸೋಲಲು ಕಾಂಗ್ರೆಸ್​ನ ಗ್ಯಾರೆಂಟಿ ಕಾರ್ಡ್ ಕಾರಣವಾಗಿದೆ. ಜನ ಗ್ಯಾರಂಟಿ ಕಾರ್ಡ್​​ಗೆ ಯಮಾರಿದರೆ ಹೊರತು, ಅಭಿವೃದ್ಧಿಗೆ ಮತ ನೀಡಿಲ್ಲ ಎಂದು ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್ ಹೇಳಿದ್ದಾರೆ.

ಕೋಲಾರದಲ್ಲಿ ಪರಾಮರ್ಶೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸೋಲಲು ಕಾಂಗ್ರೆಸ್ ನ ಗ್ಯಾರೆಂಟಿ ಕಾರ್ಡ್ ಕಾರಣ. ಜನ ಗ್ಯಾರಂಟಿ ಕಾರ್ಡ್​​ಗೆ ಯಮಾರಿದರೆ ಹೊರತು, ಅಭಿವೃದ್ಧಿಗೆ ಮತ ನೀಡಿಲ್ಲ. ಸಾವಿರಾರು ಕೋಟಿ ತಂದು ಅಭಿವೃದ್ಧಿ ಮಾಡಿದರೂ ರಾಜ್ಯದ ಜನತೆ ಅಭಿವೃದ್ಧಿಗೆ ಮತ ನೀಡಿಲ್ಲ, ಮಣ್ಣು ತಿನ್ನುವುದಕ್ಕೆ ವೋಟ್ ಕೊಟ್ಟಿದ್ದಾರೆ. ಶಾಶ್ವತವಲ್ಲ, ಅಭಿವೃದ್ಧಿನೇ ಶಾಶ್ವತ ಎಂದು ಕಿಡಿಕಾರಿದ್ದಾರೆ.

ಹಣ ಕೊಟ್ಟು ವೋಟ್ ಹಾಕಿಸಿಕೊಳ್ಳವುದಲ್ಲ. ಪ್ರೀತಿ ವಿಶ್ವಾಸದಿಂದ ವೋಟ್ ಹಾಕಿಸಿಕೊಳ್ಳಬೇಕು, ಕೋಲಾರದಲ್ಲಿ ಕೊತ್ತೂರು ಮಂಜುನಾಥ್ ಅವರನ್ನು ಗೆಲ್ಲಿಸಿರುವುದು ಗ್ಯಾರಂಟಿ ಕಾರ್ಡ್, ಘಟ್ಟಬಂಧನ ಟೀಂ ಅಲ್ಲ, ಅವರನ್ನು ಎದರು ಹಾಕಿಕೊಂಡೇ ಚುನಾವಣೆ ಮಾಡೋಣ,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಚಂಡ ಬಹುಮತ ಬರುತ್ತದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net