ಕ್ರಾಫ್ಟನ್ ಜೊತೆ ಕೈ ಜೋಡಿಸಿದ ಟಾಕ್ಸಿಕ್!
- ಯಶ್ ಅಭಿನಯದ ಬಹು ನೀರಿಕ್ಷಿತ ಸಿನಿಮಾ ಟಾಕ್ಸಿಕ್
- ಕ್ರಾಫ್ಟನ್ ಜೊತೆ ಕೈ ಜೋಡಿಸಿದ ಟಾಕ್ಸಿಕ್!
- BGMI ಗೇಮ್ನಲ್ಲಿ ಯಶ್ ಹವಾ
- ಯಕ್ಷಪ್ರಶ್ನೆಯಾದ ಬಿಡುಗಡೆ ದಿನಾಂಕ!
ನವದೆಹಲಿ: ಸದ್ಯ ಭಾರತದ ಬಹು ನೀರಿಕ್ಷಿತ ಸಿನಿಮಾ ಯಾವುದೆಂದು ಕೇಳಿದರೆ ಸಿನಿ ಪ್ರೇಕ್ಷಕರಿಂದ ಕೇಳಿ ಬರುತ್ತಿರುವ ಹೆಸರೆಂದರೆ ಅದು ಟಾಕ್ಸಿಕ್. ರಾಕಿಂಗ್ ಸ್ಟಾರ್ ಯಶ್ (Rocking Star Yash in BGMI) ಸೇರಿದಂತೆ ದೊಡ್ಡ ತಾರಾಗಣ ಹೊಂದಿರುವ ಈ ಸಿನಿಮಾ ಸೆಟ್ಟೆರಲು ರೆಡಿಯಾಗಿ ನಿಂತಿದೆ.
ಕ್ರಾಫ್ಟನ್ ಜೊತೆ ಕೈ ಜೋಡಿಸಿದ ಟಾಕ್ಸಿಕ್!
ಈ ಹಿಂದೆ ಬ್ಯಾನ್ ಆಗಿದ್ದ ಪಬ್ಜಿ ಮೊಬೈಲ್ನ ರೂಪಾಂತರವಾದ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾದ ಒಡೆತನದ ಸಂಸ್ಥೆಯಾದ ಕ್ರಾಫ್ಟನ್ ಇಂಡಿಯಾ ಜೊತೆ ಟಾಕ್ಸಿಕ್ ಚಿತ್ರತಂಡ ಕೈ ಜೋಡಿಸಿದೆ ಎಂದು ವರದಿಯಾಗಿದೆ.
ಬಿಡುಗಡೆಗೆ ತಯಾರಿರುವ ಬಹು ನೀರಿಕ್ಷಿತ ಸಿನಿಮಾಗಳಲ್ಲಿ ಮುಂಚೂಣಿಯಲ್ಲಿರುವ ಟಾಕ್ಸಿಕ್ ಸಿನಿಮಾ ಕ್ರಾಫ್ಟನ್ ಇಂಡಿಯಾ ಜೊತೆ ಸೇರಿಕೊಳ್ಳುವ ಮೂಲಕ ಯುವ ಜನರನ್ನು ಅದರಲ್ಲೂ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ನ್ನು ಇಷ್ಟ ಪಡುವ ಜನರನ್ನು ತಲುಪುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಈ ಹಿಂದೆ ಅನೇಕ ಸಿನಿಮಾಗಳು ಈ ಕ್ರಾಫ್ಟನ್ ಇಂಡಿಯಾ ಜೊತೆ ಕೊಲಾಬರೇಶನ್ ಮಾಡಿ ತಮ್ಮ ಸಿನಿಮಾದಲ್ಲಿರುವ ಪಾತ್ರಗಳನ್ನು ಗೇಮ್ನಲ್ಲಿ ಬಳಕೆ ಮಾಡಲು ಅವಕಾಶ ಕೊಟ್ಟು ಖ್ಯಾತಿಗಳಿಸಿದ್ದವು. ಈಗ ಟಾಕ್ಸಿಕ್ ಸಿನಿಮಾ ಕೂಡ ಕೊಲಾಬರೇಶನ್ ಮಾಡಿ ಕೊಂಡಿರುವ ಕಾರಣ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ನಲ್ಲಿ ಯಶ್ನ ಪಾತ್ರ ಸಹ ಬರಬಹುದು ಎಂದು ಹೇಳಲಾಗುತ್ತಿದೆ.
ಝೇನ್ ಜಿಗಳನ್ನು ಸೆಳೆಯಲು ಈ ತಂತ್ರ!
ಈ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ನ್ನು ಹೆಚ್ಚಿನ ಸಂಖ್ಯೆಯಲ್ಲಿ ಝೇನ್ ಜಿಗಳು ಇಷ್ಟ ಪಡುವ ಕಾರಣ ಈ ಗೇಮ್ನಲ್ಲಿ ಯಶ್ ಸೇರಿದಂತೆ ಇತರೆ ನಟ ನಟಿಯರ ಕ್ಯಾರೆಕ್ಟರ್ಗಳು ಸೇರ್ಪಡೆಯಾದರೆ ಅಪಾರ ಜನರನ್ನು ತಲುಪಬಹುದು ಎನ್ನುವುದು ಸಿನಿಮಾ ತಂಡದ ಲಕ್ಕಾಚಾರವಾಗಿದೆ.
ಯಶ್ ಈಗಾಗಲೇ ಫ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಇದನ್ನು ನಾವು ಯುವ ಸಮುದಾಯವನ್ನು ಸೆಳೆಯಲು ಅವರ ಕ್ಯಾರೆಕ್ಟರ್ನ್ನು ಗೇಮ್ನಲ್ಲಿ ಸೇರ್ಪಡೆ ಮಾಡಿ ಅವರ ಧ್ವನಿಯನ್ನು ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಸೇರಿಸಿದರೆ ಜನರಿಗೆ ಖಂಡಿತವಾಗಿ ಇಷ್ಟವಾಗುತ್ತದೆ ಎಂದು ಕ್ರಾಫ್ಟನ್ ಇಂಡಿಯಾ ಬಿಸ್ನೆಸ್ ಡೆವಲಪ್ಮೆಂಟ್ ಹಾಗೂ ಪಾರ್ಟ್ನರ್ಶಿಪ್ ಮುಖ್ಯಸ್ಥ ಸಿದ್ದಾರ್ಥ ಮೆರೋತ್ರಾ ಹೇಳಿಕೆ ನೀಡಿದ್ದಾರೆ.
ಟಾಕ್ಸಿಕ್ ಬಗ್ಗೆ
ಟಾಕ್ಸಿಕ್ ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದ್ದು, ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ, ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಶಿ, ತಾರಾ ಸುತಾರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಮಿಂಚಲಿದ್ದು, ಈ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ.
ಯಕ್ಷಪ್ರಶ್ನೆಯಾದ ಬಿಡುಗಡೆ ದಿನಾಂಕ!
ಹೌದು ಸಿನಿಮಾದ ಟ್ರೇಲರ್, ಟೀಸರ್, ಪಾತ್ರ ಪರಿಚಯ ಎಲ್ಲಾ ಬಿಡುಗಡೆ ಕಂಡಿದ್ದರೂ ಸಹ ಸಿನಿಮಾ ಬಿಡುಗಡೆಗೆ ದಿನಾಂಕ ಇನ್ನು ಫಿಕ್ಸ್ ಆಗಿಲ್ಲ. ಈ ಮೊದಲು ಮಾರ್ಚ್ 19 ರಂದು ಧುರಂಧರ್ 2 ಜೊತೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು.
ಆದರೆ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಸಿನಿಮಾವನ್ನು ಜೂನ್ 4 ಕ್ಕೆ ಮುಂದೂಡಲಾಗಿತ್ತು. ಆದರೆ ಈಗ ಈ ದಿನಾಂಕವನ್ನು ಸಹ ಮುಂದೂಡಲಾಗಿದ್ದು, ಜಾಗತಿಕ ಮಾರುಕಟ್ಟೆ ತಯಾರಿ ಸಲುವಾಗಿ ಮತ್ತೆ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೆವೆಂದು ಸಿನಿಮಾ ತಂಡ ತಿಳಿಸಿದೆ,(ಏಜನ್ಸೀಸ್).