ಕೇವಲ ಮೂವರನ್ನು ಫಾಲೋ ಮಾಡುತ್ತಿರುವ ಡಿವೈನ್ ಸ್ಟಾರ್
- ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ದೊಡ್ಡ ಬದಲಾವಣೆ
- ಹೊಂಬಾಳೆ ಫಿಲ್ಮ್ಸ್ ಹಾಗೂ ಆಪ್ತ ಸ್ನೇಹಿತ ರಾಜ್ ಶೆಟ್ಟಿಯನ್ನು ಅನ್ ಫಾಲೋ ಮಾಡಿದ ರಿಷಬ್
- ಕೇವಲ ಮೂವರನ್ನು ಫಾಲೋ ಮಾಡುತ್ತಿರುವ ಡಿವೈನ್ ಸ್ಟಾರ್
ಬೆಂಗಳೂರು: ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಯಾವುದೇ ಸಿನಿಮಾ ವಿಚಾರಕ್ಕಲ್ಲ, ಬದಲಾಗಿ ತಮ್ಮ ಇನ್‌ಸ್ಟಾಗ್ರಾಮ್ (Rishab Shetty Instagram) ಖಾತೆಯಲ್ಲಿ ಅವರು ಮಾಡಿರುವ ಒಂದು ಸಣ್ಣ ಬದಲಾವಣೆ ಈಗ ಗಾಂಧಿನಗರದಿಂದ ಹಿಡಿದು ಬಾಲಿವುಡ್ ವರೆಗೂ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಹೌದು, ರಿಷಬ್ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಲಿಸ್ಟ್ ಅನ್ನು ಸಂಪೂರ್ಣವಾಗಿ ಕ್ಲೀನ್ ಸ್ವೀಪ್ ಮಾಡಿದ್ದಾರೆ. ಅಂದರೆ, ರಿಷಬ್ ಈಗ ಕೇವಲ ಮೂರೇ ಮೂರು ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.
ಯಾರು ಆ ಮೂರು ಲಕ್ಕಿ ಪರ್ಸನ್ಸ್?
ಸಾವಿರಾರು ಜನರನ್ನು ಫಾಲೋ ಮಾಡುತ್ತಿದ್ದ ರಿಷಬ್, ಈಗ ತಮ್ಮ ಪಟ್ಟಿಯಿಂದ ಎಲ್ಲರನ್ನೂ ಕೈಬಿಟ್ಟಿದ್ದಾರೆ. ಅವರು ಈಗ ಫಾಲೋ ಮಾಡುತ್ತಿರುವುದು ಕೇವಲ ಮೂವರನ್ನು ಮಾತ್ರ. ಒಂದು ಅವರ ಧರ್ಮಪತ್ನಿ ಪ್ರಗತಿ ಶೆಟ್ಟಿ, ಇನ್ನೊಂದು ಅವರ ಸ್ವಂತ ನಿರ್ಮಾಣ ಸಂಸ್ಥೆಯಾದ ರಿಷಬ್ ಶೆಟ್ಟಿ ಫಿಲ್ಮ್ಸ್ಮ ಮತ್ತು ಮೂರನೇಯದು ರಿಷಬ್ ಶೆಟ್ಟಿ ಫೌಂಡೇಶನ್ . ಈ ಮೂವರನ್ನು ಹೊರತುಪಡಿಸಿ ಚಿತ್ರರಂಗದ ಯಾವುದೇ ದೊಡ್ಡ ನಟ ಅಥವಾ ನಿರ್ದೇಶಕರನ್ನು ಅವರು ಫಾಲೋ ಮಾಡುತ್ತಿಲ್ಲ.
ಹೊಂಬಾಳೆ ಫಿಲ್ಮ್ಸ್ ಅನ್‌ಫಾಲೋ ಮಾಡಿದ್ದೇಕೆ?
ಈ ಚರ್ಚೆ ಶುರುವಾಗಿದ್ದು ಕೆಲವು ದಿನಗಳ ಹಿಂದೆ. ರಿಷಬ್ ಅವರು ತಮಗೆ ಜನ್ಮ ನೀಡಿದ (ಕಾಂತಾರ ಸಿನಿಮಾ ಮೂಲಕ) ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯನ್ನು ಅನ್‌ಫಾಲೋ ಮಾಡಿದಾಗ ಅಭಿಮಾನಿಗಳಲ್ಲಿ ಅನುಮಾನ ಶುರುವಾಗಿತ್ತು. ಹೊಂಬಾಳೆ ಮತ್ತು ರಿಷಬ್ ನಡುವೆ ಏನೋ ನಡೆದಿದೆ ಎಂಬ ವದಂತಿಗಳು ಹಬ್ಬಿದ್ದವು.
ಇದರ ಬೆನ್ನಲ್ಲೇ ಆಪ್ತ ಸ್ನೇಹಿತರಾದ ರಾಜ್ ಬಿ ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ಅವರನ್ನೂ ಅನ್‌ಫಾಲೋ ಮಾಡಿದ್ದು ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಆದರೆ ಈಗ ಎಲ್ಲರನ್ನೂ ಅನ್‌ಫಾಲೋ ಮಾಡುವ ಮೂಲಕ ಇದು ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಲ್ಲ, ಬದಲಾಗಿ ಅವರ ಸೋಶಿಯಲ್ ಮೀಡಿಯಾ ಸ್ಟ್ರಾಟಜಿ ಇರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಇದು ಜೈ ಹನುಮಾನ್ ಚಿತ್ರದ ತಯಾರಿ ಇರಬಹುದೇ?
ಸಾಮಾನ್ಯವಾಗಿ ದೊಡ್ಡ ನಟರು ಯಾವುದಾದರೂ ಗಂಭೀರ ಪಾತ್ರಕ್ಕೆ ತಯಾರಿ ನಡೆಸುವಾಗ ಅಥವಾ ಹೊಸ ಜೀವನಶೈಲಿಗೆ ಒಗ್ಗಿಕೊಳ್ಳುವಾಗ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಸ್ತುತ ರಿಷಬ್ ಶೆಟ್ಟಿ ಪ್ರಶಾಂತ್ ವರ್ಮಾ ನಿರ್ದೇಶನದ ಜೈ ಹನುಮಾನ್ ಚಿತ್ರದಲ್ಲಿ ಹನುಮಂತನ ಪಾತ್ರ ಮಾಡುತ್ತಿದ್ದಾರೆ. ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ಈ ಚಿತ್ರದ ಅದ್ಧೂರಿ ಮುಹೂರ್ತ ಕೂಡ ನಡೆದಿದೆ. ಪೌರಾಣಿಕ ಹಿನ್ನೆಲೆಯ ಈ ಚಿತ್ರಕ್ಕಾಗಿ ರಿಷಬ್ ವಿಶೇಷ ದೀಕ್ಷೆ ಅಥವಾ ಏಕಾಗ್ರತೆಗಾಗಿ ಸೋಶಿಯಲ್ ಮೀಡಿಯಾದಿಂದ ದೂರ ಉಳಿಯಲು ಈ ರೀತಿ ಮಾಡಿರಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ.
ಸದ್ಯಕ್ಕೆ ಈ ಬಗ್ಗೆ ರಿಷಬ್ ಶೆಟ್ಟಿ ಅವರಾಗಲಿ ಅಥವಾ ಅವರ ತಂಡವಾಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ರಿಷಬ್ ಅವರ ಈ ಡಿಜಿಟಲ್ ಡಿಟಾಕ್ಸ್ ಅಥವಾ ಬದಲಾವಣೆ ಅವರ ವೃತ್ತಿಜೀವನದ ಹೊಸ ಅಧ್ಯಾಯಕ್ಕೆ ನಾಂದಿಯೇ ಎಂಬುದು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ರಿಷಬ್ ಅವರ ಈ ಒಂದು ನಡೆಯಿಂದ ಅವರ ಇನ್‌ಸ್ಟಾಗ್ರಾಮ್ ಪೇಜ್ ಈಗ ಎಲ್ಲರ ಕಣ್ಣು ಕುಕ್ಕುವಂತೆ ಮಾಡುತ್ತಿದೆ,(ಏಜನ್ಸೀಸ್).