ಕಾರ್ಕಳ: ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರ ತೊಡಿಗಿಸಿಕೊಂಡಾಗ ಸಮಾಜದ ಉದ್ಧಾರ ಸಾಧ್ಯ ಎಂದು ನಾನಿಲ್ತಾರು ಕುಲಾಲ ಸಂಘ ಗೌರವಾಧ್ಯಕ್ಷ ಐತು ಆರ್.ಮೂಲ್ಯ ಹೇಳಿದರು.
ಮುಂಡ್ಕೂರು ನಾನಿಲ್ತಾರು ಕುಲಾಲ ಸಂಘ 36ನೇ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾರ್ಥಿವೇತನ, ವೈದ್ಯಕೀಯ ನೆರವು, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಯರಾಂ ಕುಲಾಲ್ ಅಗ್ಗರಟ್ಟ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕುಶ ಆರ್. ಮೂಲ್ಯ, ಪುರುಷೋತ್ತಮ ಕುಲಾಲ್, ದಿವಾಕರ ಮೂಲ್ಯ, ಶಂಭು ಮೂಲ್ಯ ಸಾಂತೂರು, ಬೊಗ್ಗು ಮೂಲ್ಯ ಬೆಲಾಡಿ, ಜಗನ್ನಾಥ್ ಮೂಲ್ಯ ಬೆಳ್ಮಣ್, ರಾಜೇಶ್ ಕುಲಾಲ್ ಸಾಂತೂರು, ಪ್ರತಿಮಾ ಶ್ರೀಧರ್ ಉಪಸ್ಥಿತರಿದ್ದರು. ಹರ್ಷಿತಾ ಮತ್ತು ಬಳಗ ಪ್ರಾರ್ಥಿಸಿದರು. ದಿನೇಶ್ ಕುಲಾಲ್ ವರದಿ ವಾಚಿಸಿದರು. ಲೊಕೇಶ್ ಕುಲಾಲ್ ಸ್ವಾಗತಿಸಿದರು. ಸುಧಾಕರ್ ಕುಲಾಲ್ ವಂದಿಸಿದರು. ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ಆಶಾ ವರದರಾಜ್, ಅರುಣಾ ಕುಲಾಲ್ ಉಳೆಪಾಡಿ, ಸಂತೋಷ್ ಕುಲಾಲ್ ಅಗರಟ್ಟ, ಸಹಕರಿಸಿದರು.
ಅಗ್ನಿವೀರ ದುರ್ಗಾಪ್ರಸಾದ್, ಸಾಹಿತಿ ಹರ್ಷ ಕುಲಾಲ್ ಬೆಲಾಡಿ, ಭಜನಾ ಶಿಕ್ಷಕ ರಾಜೇಂದ್ರ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಶೇ.85 ಅಂಕ ಪಡೆದ ಸುಮಾರು 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.