ನ್ಯೂಸ್

'ಜೆಪ್ಟೋ' ಫಾರ್ಮಸಿ ಸೇವೆ ಆರಂಭ; ಇನ್ಮುಂದೆ ಕೇವಲ 10 ನಿಮಿಷಗಳಲ್ಲಿ ಔಷಧಿಗಳು ಸಿಗಲಿವೆ ಎಂದ 'ಸಿಇಒ'| zepto

ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಆನ್​ಲೈನ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿ ಮಾಡೋ ಬದಲು ಕುಳಿತಲ್ಲಿಯೇ ತಮಗೆ ಬೇಕಾದ ವಸ್ತುವನ್ನು ಬುಕ್ ಮಾಡುವವರೇ ಹೆಚ್ಚಾಗಿದ್ದಾರೆ. ತಮಗಿಷ್ಟವಾದ ಫುಡ್‌ ಆಗಲಿ ಅಥವಾ ಇನ್ನಿತರ ವಸ್ತುಗಳನ್ನಾಗಲಿ ಆನ್ಲೈನ್‌ನಲ್ಲಿ ಆರ್ಡರ್‌ ಮಾಡಿದ್ರೆ ಸಾಕು, ಮನೆಬಾಗಿಲಿಗೆ ಬರುತ್ತದೆ. ಇದರ ಬೆನ್ನಲ್ಲೇ ಇದೀಗ ಆನ್​ಲೈನ್​ ಮೂಲಕ ಔಷಧಗಳನ್ನು ವಿತರಿಸುವ ಸೇವೆಯನ್ನು ಜೆಪ್ಟೋ ಆರಂಭಿಸಿದೆ. ಕೇವಲ ಹತ್ತು ನಿಮಿಷದಲ್ಲಿ ಗ್ರಾಹಕರಿಗೆ ಔಷಧಗಳನ್ನು ತಲುಪಿಸುವ ‘ಜೆಪ್ಟೊ ಫಾರ್ಮಸಿ’ ಸೇವೆಯನ್ನು ಆರಂಭಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ‘ಜೆಪ್ಟೊ’ ಸಂಸ್ಥೆ ಪೋಸ್ಟ್​ ಮಾಡಿದೆ.

ಬೆಂಗಳೂರು, ದೆಹಲಿ–ಎನ್‌ಸಿಆರ್, ಹೈದರಾಬಾದ್‌ನಲ್ಲಿ ಮತ್ತು ಮುಂಬೈನಲ್ಲಿ ಪ್ರಸ್ತುತ ಈ ‘ಜೆಪ್ಟೊ ಫಾರ್ಮಸಿ’ ಸೇವೆಯನ್ನು ಆರಂಭಿಸಲಾಗಿದೆ ಎಂದು ಜೆಪ್ಟೊ ಸಿಇಒ ತಿಳಿಸಿದ್ದಾರೆ. ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಜೆಪ್ಟೊ ಸಹ-ಸಂಸ್ಥಾಪಕ ಮತ್ತು ಸಿಇಒ ಆದಿತ್ ಪಲಿಚಾ ಪ್ರತಿಕ್ರಿಯಿಸಿದ್ದು, ನಮ್ಮ ತಂಡವು ಕಳೆದ 12 ತಿಂಗಳುಗಳಿಂದ ಗ್ರಾಹಕರ ಅನುಭವ, ಪೂರೈಕೆ ಸರಪಳಿ ಲಾಜಿಸ್ಟಿಕ್ಸ್ ಮತ್ತು ನಿಯಂತ್ರಕ ಅನುಸರಣೆಯನ್ನು ಗುರುತಿಸಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆಯ ಗುಣಮಟ್ಟವನ್ನು ಅತ್ಯಂತ ಉನ್ನತ ಮಟ್ಟದಲ್ಲಿ ನಡೆಸುವುದು ಮತ್ತು ತುಂಬಾ ವೇಗವಾಗಿ ಗ್ರಾಹಕರ ಸೇವೆ ಪೂರೈಸುವುದು ನಮ್ಮ ಉದ್ದೇಶವಾಗಿದೆ ಎಂದು ಪಲಿಚಾ ಹೇಳಿದ್ದಾರೆ.

(ಏಜೆನ್ಸೀಸ್)

ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಈ ಸೇವೆಯು ಲಕ್ಷಾಂತರ ಜನರ ಜೀವನವನ್ನು ಗಂಭೀರವಾಗಿ ಸುಧಾರಿಸುತ್ತದೆ ಮತ್ತು ಹೆಚ್ಚು ಅಗತ್ಯವಿರುವಾಗ ಪ್ರಮುಖ ಔಷಧಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ ಎಂದಿದ್ದಾರೆ. ಈಗಾಗಲೇ ಕಂಪನಿಯು 10 ನಿಮಿಷದಲ್ಲಿ ದಿನಸಿ ವಸ್ತುಗಳನ್ನು ತಲುಪಿಸಲಾಗುತ್ತಿದೆ. ಈಗ ಆಯ್ದ ಮಹಾನಗರಗಳಲ್ಲಿ ಜೆಪ್ಟೊ ಫಾರ್ಮಸಿ ಸೇವೆ ಆರಂಭಿಸಲಾಗಿದ್ದು, ಲಕ್ಷಾಂತರ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.