ಕನ್ನಡದ ಜನಪ್ರಿಯ ಕಿರುತೆರೆ ವಾಹಿನಿ ಜೀ಼ ಕನ್ನಡದಲ್ಲಿ ಗೌರಿ- ಗಣೇಶ ಚತುರ್ಥಿ ಹಬ್ಬಕ್ಕಾಗಿ ಎರಡು ಅತ್ಯಂತ ಜನಪ್ರಿಯ ಧಾರಾವಾಹಿಗಳ ಮಹಾಸಂಗಮ ನಡೆಯಲಿದೆ. ಆಗಸ್ಟ್ 17ರಿಂದ 22, 2020ರವರೆಗೆ ಸಂಜೆ 8ರಿಂದ 9ರವರೆಗೆ ಜೀ಼ ಕನ್ನಡದಲ್ಲಿ ಜೊತೆ ಜೊತೆಯಲಿ ಹಾಗೂ ಗಟ್ಟಿಮೇಳ ಧಾರಾವಾಹಿಗಳ ಮಹಾಸಂಗಮ ನಡೆಯಲಿದೆ.
ಇದನ್ನೂ ಓದಿ: ಗುಂಜನ್ ಜತೆ ನಾನೂ ಏರ್ಫೋರ್ಸ್ನಲ್ಲಿದ್ದೆ, ನನ್ನನ್ಯಾಕೆ ತೋರಿಸಿಲ್ಲ; ಚಿತ್ರತಂಡದ ವಿರುದ್ಧ ಶ್ರೀವಿದ್ಯಾ ಆರೋಪ
ವಿಶೇಷವೆಂದರೆ ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಹಾಗೂ ಗಟ್ಟಿಮೇಳದ ವೇದಾಂತ್ ಇಬ್ಬರೂ ಯಶಸ್ವಿ ಉದ್ಯಮಿಗಳು. ಈ ಎರಡೂ ವೀಕ್ಷಕರನ್ನು ಅಪಾರವಾಗಿ ಸೆಳೆದ ಈ ಪಾತ್ರಗಳು “ಮಹಾಸಂಗಮ”ದಲ್ಲಿ ಒಂದುಗೂಡಲಿವೆ. ಈ ಎರಡೂ ಪಾತ್ರಗಳು ಒಟ್ಟಿಗೆ ಕಾಣಿಸಿಕೊಂಡು ವೀಕ್ಷಕರನ್ನು ರಂಜಿಸಲಿವೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ರಿಂದ 9 ಗಂಟೆ ನಿಮ್ಮ ನೆಚ್ಚಿನ ಜೀ಼ ಕನ್ನಡ ಮತ್ತು ಜೀ಼ ಕನ್ನಡ ಎಚ್ ಡಿಯಲ್ಲಿ ಪ್ರಸಾರವಾಗಲಿವೆ.
ಇದನ್ನೂ ಓದಿ: ಪೃಥ್ವಿ ಹುಟ್ಟುಹಬ್ಬಕ್ಕೆ ‘ಶುಗರ್ಲೆಸ್’ ಗಿಫ್ಟ್ …
ಈ ಮಹಾಸಂಗಮ ಕುರಿತು ಜೀ಼ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, “ಜೀ಼ ಕನ್ನಡ ವೀಕ್ಷಕರ ಅಭಿರುಚಿಗೆ ತಕ್ಕುದಾದ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದೆ. ಇದೀಗ ನಮ್ಮ ಎರಡು ಜನಪ್ರಿಯ ಧಾರಾವಾಹಿಗಳಾದ ಜೊತೆ ಜೊತೆಯಲಿ ಮತ್ತು ಗಟ್ಟಿಮೇಳದ ಪಾತ್ರಗಳು “ಮಹಾಸಂಗಮ”ದಲ್ಲಿ ಒಗ್ಗೂಡಲಿದ್ದು ಮನರಂಜನೆಯ ಮಹಾಪೂರ ಹರಿಸಲಿವೆ. ಈ ಎರಡೂ ಧಾರಾವಾಹಿಗಳ ವೀಕ್ಷಕರ ನಿರೀಕ್ಷೆಗೆ ಕಿಂಚಿತ್ತೂ ಭಂಗವಾಗದಂತೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ನಮ್ಮ ಎಲ್ಲ ಧಾರಾವಾಹಿ, ರಿಯಾಲಿಟಿ ಶೋಗಳನ್ನು ಇಷ್ಟಪಟ್ಟ ವೀಕ್ಷಕರು ಇದನ್ನೂ ಬಹಳ ಆದರಿಸುತ್ತಾರೆ ಎಂಬ ಭರವಸೆ ನಮ್ಮದು” ಎನ್ನುತ್ತಾರೆ.