ನ್ಯೂಸ್

ಗರ್ಲ್​​ಫ್ರೆಂಡ್​ ತಾಯಿಗೆ ಹೆದರಿ ಸತ್ತೇ ಹೋದ; ಆಗಿದ್ದಾದರೂ ಏನು?

ಚೆನ್ನೈ: 'ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು' ಎಂಬ ಗೀತೆ 'ರಣಧೀರ' ಸಿನಿಮಾದಲ್ಲಿದೆ. ಆದರೆ ಇಲ್ಲೊಬ್ಬ ಪ್ರೇಮಿ ತನ್ನ ಗರ್ಲ್​ಫ್ರೆಂಡ್​ ತಾಯಿಗೇ ಹೆದರಿ ಸತ್ತು ಹೋಗಿದ್ದಾನೆ. ಇಂಥದ್ದೊಂದು ದುರಂತ ಚೆನ್ನೈನಲ್ಲಿ ನಡೆದಿದೆ.

ತಮಿಳುನಾಡಿನ ಸೇಲಂ ಬಳಿಯ ಚಿನ್ನ ಕೊಲಪಟ್ಟಿ ಎಂಬಲ್ಲಿ ಶನಿವಾರ ಬೆಳಗ್ಗೆ ಈ ಪ್ರಕರಣ ನಡೆದಿದೆ. ಕಾನೂನು ವಿದ್ಯಾರ್ಥಿ ಸಂಜಯ್​ (18) ಹೆದರಿ ಸಾವಿಗೀಡಾದ ಪ್ರಿಯಕರ. ಚಿನ್ನ ಕೊಲಪಟ್ಟಿಯ ಸೆಂಟ್ರಲ್ ಲಾ ಕಾಲೇಜ್ ವಿದ್ಯಾರ್ಥಿಯಾಗಿದ್ದ ಈತ ತನ್ನ ಶಾಲಾ ಹಾಗೂ ಕಾಲೇಜಿನ ಸಹಪಾಠಿಯೊಂದಿಗೆ ಪ್ರೀತಿಯಲ್ಲಿದ್ದ.

ಸಂಜಯ್ ಮನೆಗೆ ಸಮೀಪವೇ ಈತನ ಪ್ರೇಯಸಿ ತನ್ನ ತಾಯಿ ಹಾಗೂ ಸಹೋದರಿಯೊಂದಿಗೆ ನೆಲೆಸಿದ್ದಳು. ಶನಿವಾರ ತಡರಾತ್ರಿ ಪ್ರೇಯಸಿಯೊಂದಿಗೆ ಮಾತನಾಡಲು ಆಕೆ ನೆಲೆಸಿದ್ದ ಅಪಾರ್ಟ್​ಮೆಂಟ್​ಗೆ ಈತ ಹೋಗಿದ್ದ. ಆದರೆ ಇವರಿಬ್ಬರು ಬಾಲ್ಕನಿಯಲ್ಲಿ ಮಾತನಾಡುತ್ತಿದ್ದುದನ್ನು ಆಕೆಯ ತಾಯಿ ನೋಡಿದ್ದಳು. ಗರ್ಲ್​ಫ್ರೆಂಡ್​ ತಾಯಿ ತಮ್ಮನ್ನು ನೋಡಿ ಬೆಚ್ಚಿಬಿದ್ದ ಸಂಜಯ್​, ಎರಡನೇ ಮಹಡಿಯಿಂದ ಕೆಳಕ್ಕೆ ಹಾರಿ, ಸಾವಿಗೀಡಾಗಿದ್ದಾನೆ. ಈತ ಕಾಂಪೌಂಡ್​ ಗೋಡೆ ಹಾಗೂ ಕಟ್ಟಡದ ಮೆಟ್ಟಿಲನ್ನು ಏರಿ ಆಕೆ ಇದ್ದ ಬಾಲ್ಕನಿಗೆ ತಲುಪಿದ್ದ. ಆದರೆ ಎರಡನೇ ಮಹಡಿಯಿಂದ ಬಿದ್ದ ರಭಸಕ್ಕೆ ಈತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.