ನ್ಯೂಸ್

‘ಕೆಜಿಎಫ್ 3’ ಕುರಿತು ಮೌನ ಮುರಿದ ರಾಕಿ ಭಾಯ್​; ಸಿನಿಮಾ ಬಗ್ಗೆ ಯಶ್ ಹೇಳಿದಿಷ್ಟು | KGF 3

ಮುಂಬೈ: ಕೆಜಿಎಫ್​ ಸಿನಿಮಾದ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್​​ ಪಟ್ಟ ಗಿಟ್ಟಿಸಿಕೊಂಡರು ಯಶ್​​​. ಕೆಜಿಎಫ್​​ 1 ಮತ್ತು ಕೆಜಿಎಫ್​​ ಚಾಪ್ಟರ್​​ 2 ಈ ಎರಡೂ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಕಲೆಕ್ಷನ್​​​ ಮಾಡಿದ್ದವು. ಈ ಬ್ಲಾಕ್​ ಬಸ್ಟರ್​ ಹಿಟ್​​ ಸಿನಿಮಾದಲ್ಲಿ ಯಶ್​​​​ ರಾಕಿ ಭಾಯ್​ ಪಾತ್ರವನ್ನು ನಿರ್ವಹಿಸಿದ್ದರು. ಅಂದಿನಿಂದ ಅಭಿಮಾನಿಗಳಿಗೆ ಯಶ್​​ ಪ್ರೀತಿಯ ‘ರಾಕಿ ಭಾಯ್​​’ ಆಗಿದ್ದಾರೆ. (KGF 3)

ಕೆಜಿಎಫ್ ಫ್ರಾಂಚೈಸಿನಿಂದ ಯಶ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಕೆಜಿಎಫ್​​​ 3 ಚಿತ್ರವು ಖಂಡಿತವಾಗಿ ಬರಲಿದೆ ಎಂದು ಯಶ್ ಇತ್ತೀಚಿನ ಸಂದರ್ಶವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜತೆ ಚರ್ಚಿಸುತ್ತಿರುವುದಾಗಿ ತಿಳಿಸಿದ್ದಾರೆ. ನಾವು ಅದರ ಬಗ್ಗೆ ಮಾತನಾಡುತ್ತೇವೆ, ನಮಗೆ ಒಂದು ಬಹಳ ದೊಡ್ಡ ಆಲೋಚನೆ ಇದೆ ಎಂದು ಹೇಳಿದರು. ಈ ಸಿನಿಮಾದ ಬಗ್ಗೆ ಸಂಪೂರ್ಣ ಗಮನವನ್ನು ನೀಡುವ ಅವಶ್ಯಕತೆಯಿದೆ. ನಾವು ಯಾವುದಕ್ಕೂ ಹಣವನ್ನು ಖರ್ಚು ಮಾಡಲು ಬಯಸುವುದಿಲ್ಲ. ಪ್ರೇಕ್ಷಕರು ನಮ್ಮ ಬಗ್ಗೆ ಹೆಮ್ಮೆ ಪಡುವಂತೆ ಮಾಡಲು ನಾವು ಬಯಸುತ್ತೇವೆ. ಈ ಬಾರಿ ನಾವು ದೊಡ್ಡದನ್ನು ತರುತ್ತೇವೆ ಎಂದ ಹೇಳಿದ್ದಾರೆ.

ಇನ್ನು ಇದೇ ಸಮಯದಲ್ಲಿ ಟಾಕ್ಸಿಕ್​ ಸಿನಿಮಾದ ಬಗ್ಗೆಯೂ ಯಶ್​ ಮಾತನಾಡಿದ್ದಾರೆ. ನಾವು ಸ್ವಲ್ಪ ಮುಂಚಿತವಾಗಿ ಸಿನಿಮಾ ಶೂಟ್ ಪ್ರಾರಂಭಿಸಬೇಕಾಗಿತ್ತು. ಆದರೆ ಅಂದುಕೊಂಡಂತೆ ನಡೆಯಲಿಲ್ಲ. ಡೇಟ್​ ಪ್ರಾಬ್ಲಂ ಆಯಿತು. ಇದು ನಿರೀಕ್ಷೆಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು. ಅಂದುಕೊಂಡ ದಿನಾಂಕದಂದು ಸಿನಿಮಾ ರಿಲೀಸ್​ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಹಿಂದೆ ಚಿತ್ರತಂಡವು ಟಾಕ್ಸಿಕ್​ ಸಿನಿಮಾವನ್ನು 2025ರ ಏಪ್ರಿಲ್​ನಲ್ಲಿ ಬಿಡುಗಡೆ ಮಾಡೋದಾಗಿ ಹೇಳಿಕೊಂಡಿದ್ದರು. ಈ ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಗಳನ್ನು ಫ್ಯಾನ್ಸ್ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಅಂದುಕೊಂಡ ಸಮಯಕ್ಕೆ ಬರುವುದಿಲ್ಲ ಎಂಬುದನ್ನು ನಟ ಯಶ್​ ಕನ್ಫರ್ಮ್​ ಮಾಡಿದ್ದಾರೆ.(ಏಜೆನ್ಸೀಸ್​​)