Toughest Exams: ಪರೀಕ್ಷೆ ಅಂದರೆ ಸಾಕು ಮೊದಲು ಎಚ್ಚೆತ್ತುಕೊಳ್ಳೊದು ವಿದ್ಯಾರ್ಥಿಗಳು. ಯಾಕಂದ್ರೆ, ಪರೀಕ್ಷೆ ಎಂಬ ಪದ ಅವರ ದಿನಚರಿಯ ಭಾಗವಾಗಿ ಮಾರ್ಪಟ್ಟಿರುತ್ತದೆ. ವಿದ್ಯಾಭ್ಯಾಸದ ಪಯಣದಲ್ಲಿ ಪರೀಕ್ಷೆಗಳನ್ನು ಎದುರಿಸಿ, ಉತ್ತಮ ಅಂಕಗಳನ್ನು ಗಳಿಸುವುದೇ ಪರಮ ಗುರಿ, ಅದೇ ಧ್ಯೇಯ. ಇನ್ನು ಸ್ಟೂಡೆಂಟ್ ಲೈಫ್ ಕೇಳಬೇಕೆ? ಅವರಿಗೆ ಪ್ರತಿ ಹಂತದಲ್ಲೂ ಪರೀಕ್ಷೆಯ ಅನುಭವ ಇದ್ದೇ ಇರುತ್ತದೆ. ಜೀವನದ ಪರೀಕ್ಷೆಯ ಜತೆ ಜತೆಗೆ ವಿದ್ಯಾರ್ಹತೆ ಪಡೆಯಲು ಇಂತಹ ಪರೀಕ್ಷಗೆಳನ್ನು ಎದುರಿಸಲೇಬೇಕು.
ಇದನ್ನೂ ಓದಿ: ಒಂದೇ ಪಿಚ್ ಭಾರತ ಗೆಲುವಿಗೆ ಅನುಕೂಲ! ಕಡೆಗೂ ಟೀಕಾಕಾರರಿಗೆ ಕ್ಯಾಪ್ಟನ್ ರೋಹಿತ್ ತಿರುಗೇಟು | Rohit Sharma
ಶಾಲಾ-ಕಾಲೇಜಿನ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ತೇಗರ್ಡೆಯಾಗುವುದು ಬಹಳ ಸುಲಭ. ಆದ್ರೆ, ಅದರ ಮುಂದಿನ ಹಂತ ಅಂದರೆ ಇದೆಲ್ಲವನ್ನೂ ಮೀರಿ ಇರುವ ಕಠಿಣ ಪರೀಕ್ಷೆಗಳನ್ನು ಸವಾಲಾಗಿ ಸ್ವೀಕರಿಸಿ, ಅದರಲ್ಲಿ ಜಯಶಾಲಿ ಆಗುವುದು. ಇದು ನಿಜಕ್ಕೂ ಸಾಧನೆಯನ್ನು ಮೀರಿದ್ದು ಎಂದೇ ಹೇಳಬಹುದು. ನಮಗೆಲ್ಲ ತಿಳಿದಿರುವಂತೆ ಭಾರತದಲ್ಲಿ ನಡೆಯುವ ಪರೀಕ್ಷೆಗಳ ಪೈಕಿ ಅತ್ಯಂತ ಕಠಿಣ, ಕಷ್ಟಕರ ಪರೀಕ್ಷೆ ಎಂದರೆ ಅದು ಯುಪಿಎಸ್ಸಿ.
ಭಾರತದಲ್ಲಿ ಯುಪಿಎಸ್ಸಿ (UPSC), ಗೇಟ್ (GATE) ಹಾಗೂ ಐಐಟಿ ಜೆಇಇ (IIT JEE) ಪರೀಕ್ಷೆಗಳನ್ನು ಎದುರಿಸುವ ಹಲವಾರು ಆಕಾಂಕ್ಷಿಗಳು ಇದರಲ್ಲಿ ಉತ್ತೀರ್ಣ ಹೊಂದುವುದು ಬಹಳ ಕಡಿಮೆ. ಭಾರತದಲ್ಲಿ ಇದು ಅತ್ಯಂತ ಕಠಿಣ ಪರೀಕ್ಷೆ ಎಂದೇ ಗುರುತಿಸಲ್ಪಟ್ಟಿದೆ. ಆದ್ರೆ, ಅನ್ಯ ದೇಶಗಳಲ್ಲಿ ಯಾವ ಎಕ್ಸಾಂ ತುಂಬ ಕಷ್ಟಕರ ಎಂಬುದು ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ ಆಯಾ ದೇಶಗಳಲ್ಲಿ ನಡೆಯುವ ಅತ್ಯಂತ ಕಠಿಣ ಪರೀಕ್ಷೆಗಳ ಪಟ್ಟಿ.
ಇದನ್ನೂ ಓದಿ: ಇಂದು ಭಾರತ-ಆಸೀಸ್ ಸೆಮೀಸ್; ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ರೋಹಿತ್ ಪಡೆ
1. ಚೀನಾ – ಗಾವೊಕಾವೊ
2. ಭಾರತ – IIT JEE
3. ಭಾರತ – ಯುಪಿಎಸ್ಸಿ
4. ಇಂಗ್ಲೆಂಡ್ – ಮೆನ್ಸಾ
5. ಯುಎಸ್/ಕೆನಡಾ – ಜಿಆರ್ಇ
6. ಯುಎಸ್/ಕೆನಡಾ – ಸಿಎಫ್ಎ
7. ಅಮೆರಿಕಾ – ಸಿಸಿಐಇ
8. ಭಾರತ – ಗೇಟ್
9. ಅಮೆರಿಕಾ – ಯುಎಸ್ಎಂಎಲ್ಇ
10. ಅಮೆರಿಕಾ – ಕ್ಯಾಲಿಫೋರ್ನಿಯಾ ಬಾರ್ ಪರೀಕ್ಷೆ,(ಏಜೆನ್ಸೀಸ್).