ನ್ಯೂಸ್

ಮುಸ್ಲಿಮರು ಉಗ್ರರೆಂದು ಬಿಂಬಿಸಲಾಗಿದೆ; ಒಬ್ಬಂಟಿ ಭಾವನೆ ಮೂಡಿದೆ ಎಂದು ಖ್ಯಾತ ಗಾಯಕ ಟ್ವೀಟ್​

ಮುಂಬೈ: ಇಂದಿನ ಜಗತ್ತಿನಲ್ಲಿ ಮುಸಲ್ಮಾನರಾಗಿದ್ದು, ಪ್ರವಾದಿಯವರು ತೋರಿಸಿದ ಮಾರ್ಗದಲ್ಲಿ ನಡೆಯುವುದು ಒಂಟಿತನದ ಸಂಗತಿಯಾಗಿದೆ ಎಂದು ಖ್ಯಾತ ಗಾಯಕ ಲಕ್ಕಿ ಅಲಿ ಹೇಳಿದ್ದಾರೆ.

ಬೆಂಗಳೂರು ಮೂಲದ ಬಾಲಿವುಡ್​ನ ಖ್ಯಾತ ಗಾಯಕ ಲಕ್ಕಿ ಅಲಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಮುಸ್ಲಿಮರನ್ನು ಉಗ್ರರು ಎಂಬಂತೆ ಬಿಂಬಿಸಲಾಗಿದೆ. ಇಂದಿನ ಪ್ರಪಂಚದಲ್ಲಿ ಮುಸ್ಲಿಮನಾಗಿ ಉಳಿಯುವುದು ಒಬ್ಬಂಟಿ ಭಾವ ಮೂಡಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​ ಸಖತ್​ ವೈರಲ್​ ಆಗುತ್ತಿದೆ.

ಇಂದಿನ ಜಗತ್ತಿನಲ್ಲಿ ಮುಸ್ಲಿಮನಾಗಿ ಉಳಿಯುವುದು ಒಬ್ಬಂಟಿ ಭಾವ ಮೂಡಿಸುತ್ತದೆ. ಪ್ರವಾದಿ ಅವರ ಮಾರ್ಗವನ್ನು ಅನುಸರಿಸುವುದು ಒಂಟಿತನ ಎದುರಾಗುತ್ತದೆ. ನಿಮ್ಮ ಸ್ನೇಹಿತರು ಬಿಟ್ಟು ಹೋಗುತ್ತಾರೆ. ಈ ಜಗತ್ತು ನಿಮ್ಮನ್ನು ಉಗ್ರ ಎಂದು ಕರೆಯುತ್ತದೆ ಎಂದು ಬರೆದುಕೊಂಡಿದ್ದಾರೆ. ಇವರ ಪೋಸ್ಟ್​ಗೆ ಹಲವರು ಪ್ರತಿಕ್ರಿಯಿಸಿ ಗಾಯಕನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ದಿವಂಗತ ನಟ ಮೆಹಮೂದ್ ಅವರ ಮಗ, ಲಕ್ಕಿ ಅಲಿ ತಮ್ಮ ಹಾಡುಗಳ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದದ್ದು, 'ಓ ಸನಮ್', 'ಎಕ್‌ ಪಲ್‌ಕಾ ಜೀನಾ' 'ಹೈರಾತ್‌' ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ. ಕೆಲ ದಿನಗಳ ಹಿಂದೆ ಐಎಎಸ್‌ ಅಧಿಕಾರಿಯೊಬ್ಬರ ವಿರುದ್ಧ ಇತ್ತೀಚೆಗೆ ಭೂ ಕಬಳಿಕ ಆರೋಪ ಮಾಡಿದ್ದ ಅವರು, ಈ ವಿಚಾರವಾಗಿ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.