ನ್ಯೂಸ್

ವಾರಕ್ಕೆ 90 ಗಂಟೆ ಕೆಲಸ ಮಾಡಿ; ಸುಬ್ರಹ್ಮಣ್ಯನ್ ಹೇಳಿಕೆಗೆ ದೀಪಿಕಾ ಪಡುಕೋಣೆ ಚಾಟಿ | 90-Hour Work

ಬಾಬುಪ್ರಸಾದ್​ ಮೋಡಿಸ್​

90-Hour Work: ನೌಕರರು ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಅಲ್ಲದೆ, ಭಾನುವಾರಕ್ಕೂ ಗುಡ್​ ಬೈ ಹೇಳಬೇಕು ಎಂದು  ಎಲ್ ಅಂಡ್​ ಟಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿಕೆಗೆ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ  ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಳ್ಳವ ಮೂಲಕ ಉದ್ಯೋಗಿಗಳ ಆರೋಗ್ಯದ ಬಗ್ಗೆ ಒತ್ತಿ ಹೇಳಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ದೀಪಿಕಾ, ಕೆಲಸ-ಜೀವನದ ಸಮತೋಲನ ಮತ್ತು ಮಾನಸಿಕ ಆರೋಗ್ಯದ ಮಹತ್ವವನ್ನು ಒತ್ತಿಹೇಳಿದ್ದಾರೆ. ಇಂತಹ ಹಿರಿಯ ಹುದ್ದೆಯಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ನೋಡಿ ಆಘಾತವಾಗುತ್ತದೆ ಎಂದು ಎಲ್ ಅಂಡ್​ ಟಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿಕೆಗೆ ಚಾಟಿ ಬೀಸಿದ್ದಾರೆ.

ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿದ್ದೇನು?

ಕೆಲಸ-ಜೀವನ ಸಮತೋಲನದ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಎಲ್ ಅಂಡ್​ ಟಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್, ನಾರಾಯಣಮೂರ್ತಿ ಅವರ ಹೇಳಿಕೆಗಿಂತ ಒಂದೆರೆಡು ಹೆಜ್ಜೆ ಮುಂದೋಗಿ, ನೌಕರರು ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದಾರೆ. ವಾರ ಪೂರ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಉನ್ನತ ಹುದ್ದೆಗೆ ಶ್ರಮಿಸಬೇಕು. ಇಲ್ಲಿ ಭಾನುವಾರಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡುವುದು ಒಳಿತು ಎಂದು ಪ್ರತಿಪಾದಿಸಿರುವುದು ಸದ್ಯ ಹೊಸ ವಿವಾದಕ್ಕೆ ಕಾರಣವಾಗಿದೆ.

90 ಗಂಟೆ ಕೆಲಸ

ಎಲ್ ಅಂಡ್ ಟಿ ಸಂಸ್ಥೆಯ ಆರು ದಿನಗಳ ಕೆಲಸದ ವಾರದ ನೀತಿಗೆ ಸಂಬಂಧಿಸಿದಂತೆ ನೌಕರರೊಂದಿಗಿನ ಸಂವಾದದ ಸಂದರ್ಭದಲ್ಲಿ ಎಸ್.ಎನ್. ಸುಬ್ರಹ್ಮಣ್ಯನ್ ಅವರಿಂದ ಹೊರಬಂದ ಮಾತುಗಳಿವು. “ನೀವು ಎಷ್ಟು ಹೊತ್ತು ನಿಮ್ಮ ಹೆಂಡತಿ ಜತೆಗೆ ಇರಲು ಸಾಧ್ಯ? ಉದ್ಯೋಗಿಗಳು ಮನೆಯಲ್ಲಿ ಕಡಿಮೆ ಸಮಯ ಕಳೆಯಬೇಕು ಮತ್ತು ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು. ನೌಕರರು ಶನಿವಾರದಂದು ಕೆಲಸ ಮಾಡಬೇಕಾಗಿರುವುದು ಏಕೆ ಎಂದು ಉಲ್ಲೇಖಿಸಿದ ಸುಬ್ರಹ್ಮಣ್ಯನ್, ಭಾನುವಾರಗಳನ್ನು ಕೆಲಸದ ದಿನಗಳೆಂದು ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಆದ್ರೆ, ನೀವೆಲ್ಲರೂ ಭಾನುವಾರವೂ ಕರ್ತವ್ಯಕ್ಕೆ ಹಾಜರಾದರೆ ನನಗೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ” ಎಂದಿದ್ದಾರೆ.