ನ್ಯೂಸ್

ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿ; ಸರ್ಕಾರದಿಂದ ಸಿಕ್ತು ಬಂಪರ್ ಗಿಫ್ಟ್​

ನವದೆಹಲಿ: ನಾವು ಕಂಡಂತೆ ಸಾಮಾನ್ಯವಾಗಿ ಪ್ರೀತಿಯಲ್ಲಿ ಮೋಸ ಹೋಗುವುದು ಹುಡುಗರು ಎಂಬ ಭಾವನೆ ಸಾಕಷ್ಟು ಜನರಲ್ಲಿ ಇದೆ. ಅದೇ ರೀತಿ ಹುಡುಗಿಯರು ನಂಬಿಸಿ ಮೋಸ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿರುತ್ತವೆ. ಆದರೆ, ಹುಡುಗಿಯರು ಹುಡುಗರ ಪ್ರೀತಿಯ ಬಲೆಗೆ ಬಿದ್ದು ಮೋಸ ಹೋಗಿರುವ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ಆದರೆ, ಯಾವ ಪ್ರಕರಣಗಳು ಹೊರಬಾರದ ಕಾರಣ ಹೆಚ್ಚು ಸದ್ದು ಮಾಡುವುದಿಲ್ಲ.

ಇದೀಗ ಅದೇ ರೀತಿಯ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದ್ದು, ಮೋಸ ಯುವತಿ ತನ್ನ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳುವ ಮೂಲಕ ಸರ್ಕಾರದಿಂದ ಬಂಪರ್​ ಆಫರ್​ ಒಂದನ್ನು ಪಡೆದಿದ್ದಾಳೆ. ಈ ಸುದ್ದಿ ಎಲ್ಲೆಡೆ ವೈರಲ್​ ಆಗಿದ್ದು ಯುವತಿಯ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಇವಾ ಲುಯಿ ಎಂಬ ಯುವತಿ ತಾನು ಪ್ರೀತಿ ಮಾಡಿದ ಯುವಕನಿಂದ ಮೋಸ ಹೋಗಿದ್ದಾಳೆ. ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ಷೀವ್​ ಆಗಿದ್ದು, ನ್ನ ಪ್ರೀತಿ ಹಾಗೂ ಪ್ರಿಯಕರನ ಬಗ್ಗೆ ಸಾಕಷ್ಟು ವಿಷಯಗಳನ್ನು  ಆಗಿಂದಾಗೆ ಹಂಚಿಕೊಳ್ಳುತ್ತಿದ್ದಳು. ತನ್ನ ಬಾಯ್ ಫ್ರೆಂಡ್ ಅನ್ಯೋನ್ಯವಾಗಿದ್ದಾಗ ಸಿಕ್ಕ ರಹಸ್ಯ ಸಂಗತಿಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಳು. ತನ್ನ ಹುಡುಗನಿಂದ ಮೋಸ ಆಗಿರುವ ವಿಷಯವನ್ನು ಸಹ ಹಂಚಿಕೊಂಡಿದ್ದಳು.

ಷರ್ಷಗಳಿಂದ ಪ್ರೀತಿಸುತ್ತಿದ್ದು,ಇದೀಗಾ ಆಕೆಯ ಪ್ರಿಯತಮ ಬೇರೆ ಹುಡುಗಿಯೊಂದಿಗಿರುವುದು ತಿಳಿದು, ತನಗೆ ಮೋಸ ಮಾಡಿದ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳಲು ಮಾಸ್ಟರ್​​​ ಪ್ಲಾನ್​​ ಮಾಡಿದ್ದಾಳೆ. ಅದರಂತೆ ತನ್ನ ಪ್ರೇಮಿ ಸರ್ಕಾರಕ್ಕೆ ತೆರಿಗೆ ಪಾವತಿಸದೆ ಹೇಗೆ ತಪ್ಪಿಸಿಕೊಂಡಿದ್ದ ಎಂಬುದರ ಕುರಿತು ವಿಡಿಯೋ ಹಂಚಿಕೊಂಡಿದ್ದಾಳೆ. ಇದಲ್ಲದೇ ತೆರಿಗೆ ವಂಚನೆ ಮಾಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ತಿಳಿಸಿದ್ದಾಳೆ.

ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಅಧಿಕಾರಿಗಳು ಯುವತಿ ಹೇಳಿರುವುದು ನಿಜ ಎಂದು ತಿಳಿದಿದೆ. ಇಂತಹ ಸುಳಿವು ನೀಡಿದ್ದಕ್ಕೆ ಸರ್ಕಾರ ರೂ. 83 ಲಕ್ಷ ರೂ ನಗದನ್ನು ಯುವತಿಗೆ ಬಹುಮಾನವಾಗಿ ನೀಡಿದ್ದಾರೆ. ಅಮೆರಿಕಾದ ಕಾನೂನಿನ ಅಡಿಯಲ್ಲಿ, ತೆರಿಗೆ ವಂಚಕರ ವಿವರಗಳನ್ನು ಬಹಿರಂಗಪಡಿಸುವವರಿಗೆ ಸರ್ಕಾರವು ಭಾರಿ ಬಹುಮಾನಗಳನ್ನು ನೀಡುತ್ತದೆ.

ಅದಾಗ್ಯೂ, ತೆರಿಗೆ ವಂಚನೆ ಎರಡು ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿದ್ದರೆ ಮಾತ್ರ ವಿವರಗಳನ್ನು ನೀಡಿದವರಿಗೆ ಇಂತಹ ಬಂಪರ್ ಆಫರ್ ಗಳು ಸಿಗುತ್ತವೆ. ತೆರಿಗೆ ವಂಚಕರಿಂದ ವಸೂಲಿಯಾಗುವ ಮೊತ್ತದ ಶೇ.15ರಿಂದ 30ರಷ್ಟು ಹಣವನ್ನು ಮಾಹಿತಿದಾರರಿಗೆ ನೀಡಲಾಗುತ್ತದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.