ಉತ್ತರಕನ್ನಡ: ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಮೇಲೆ ಧಾರ್ಮಿಕ ಕ್ಷೇತ್ರದ ದರ್ಶನಕ್ಕೆ ಬಂದ ಮಹಿಳೆಯರು ವಾಪಸ್ ಹೋಗಲು ಬಸ್ ಇಲ್ಲದೆ ಪರದಾಟ ನಡೆಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉತ್ತರಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರಕ್ಕೆ ಬಂದ ಮಹಿಳೆಯರು ಮನೆಗೆ ಮರಳಲು ಬಸ್ಗಾಗಿ ಕಾಯುವಂತಾಗಿದೆ.
ಹುಬ್ಬಳ್ಳಿ, ಹಾವೇರಿ, ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಯಿಂದ ಉತ್ತರಕನ್ನಡ ಕಡೆಗೆ ಬಂದಿದ್ದ ಸುಮಾರು 40 ಮಹಿಳೆಯರು ವಾಪಸ್ ಹೋಗುವ ಬಸ್ಗಾಗಿ ಅಧಿಕಾರಿಗಳಿಗೆ ದುಂಬಾಲು ಬಿದ್ದಿರುವ ಪ್ರಸಂಗ ನಡೆದಿದೆ.
ಇದನ್ನೂ ಓದಿ: ಹೆಂಡ್ತಿ ಆ್ಯಪ್ ಡೌನ್ಲೋಡ್ ಮಾಡೋದು ತಡವಾಯ್ತೆಂದು ಸಿಟ್ಟಾದ ಗಂಡ; ಸಮಾಧಾನಿಸಲು ಬಂದ ಮಗನ ಎದೆಗೆ ಚೂರಿ ಇರಿತ!
ಉಚಿತ ಪ್ರಯಾಣದ ಮೇರೆಗೆ ಬಂದಿರುವ ಈ ಮಹಿಳೆಯರು ಹೊನ್ನಾವರ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದಾರೆ. ಕೆಲವರ ಜತೆ ಮಕ್ಕಳು ಕೂಡ ಇದ್ದು, ಅಕ್ಷರಶಃ ಪರದಾಡುತ್ತಿದ್ದಾರೆ. ವಿವಿಧ ಭಾಗಕ್ಕೆ ತೆರಳುವ ವಾಯವ್ಯ ಸಾರಿಗೆ ಬಸ್ ಸಂಚಾರ ರಾತ್ರಿ 7ಕ್ಕೆ ಕೊನೆಯಾದ್ದರಿಂದ ಮಾಹಿತಿ ಇರದ ಈ ಮಹಿಳೆಯರು ಪ್ರವಾಸಕ್ಕೆ ಬಂದು ಪರದಾಡುವಂತಾಗಿದೆ. ಹೊನ್ನಾವರದಿಂದ ಶಿವಮೊಗ್ಗ ಜಿಲ್ಲೆಗೆ ಬಸ್ ಬಿಡುವಂತೆ ಅಧಿಕಾರಿಗಳಿಗೆ ದುಂಬಾಲು ಬಿದ್ದಿರುವುದು ಕಂಡುಬಂದಿದೆ.