ಅಹಮದಾಬಾದ್: ಮಾಜಿ ಪ್ರಿಯಕರ, ತನ್ನನ್ನು ಬಿಟ್ಟ ಮೇಲೆ ಬೇರೊಬ್ಬ ಹುಡುಗಿಯನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ ಎನ್ನುವ ಸಿಟ್ಟಿನಿಂದ, ಆ ಯುವತಿಯ ಅಶ್ಲೀಲ ಫೋಟೋಗಳನ್ನು ಮಾಜಿ ಲವರ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.
ಇತ್ತೀಚೆಗೆ ಯುವತಿಯೊಬ್ಬಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು. ಇನ್ಸ್ಟಾಗ್ರಾಂನ ಯಾವುದೋ ನಕಲಿ ಖಾತೆಯಿಂದ ನನ್ನ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಲಾಗುತ್ತಿದೆ ಎಂದು ಆಕೆ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಈ ಪ್ರಕರಣದ ಆರೋಪಿ ಒಬ್ಬ ಗಂಡಲ್ಲ ಬದಲಾಗಿ ಹೆಣ್ಣು ಎನ್ನುವುದು ತಿಳಿದುಬಂದಿದೆ.
ಫೋಟೋಗಳು ಪೋಸ್ಟ್ ಆದ ಲೊಕೇಷನ್ ಟ್ರೇಸ್ ಮಾಡಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಮದುವೆಯಾಗಬೇಕಿದ್ದ ಯುವಕನ ಮಾಜಿ ಪ್ರಿಯತಮೆಯೇ ಈ ಕೆಲಸ ಮಾಡಿದ್ದು ಬೆಳಕಿಗೆ ಬಂದಿದೆ. ಆತನ ಇನ್ಸ್ಟಾಗ್ರಾಂ ಖಾತೆಯ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಆ ಯುವತಿಯ ಬಳಿ ಇತ್ತಂತೆ. ಅದನ್ನು ಬಳಸಿಕೊಂಡು ಅವನ ಖಾತೆಗೆ ಲಾಗ್ಇನ್ ಆದ ಆಕೆ, ಅದರಲ್ಲಿ ಆತ ಮದುವೆಯಾಗಬೇಕಿದ್ದ ಯುವತಿಯೊಂದಿಗೆ ಮಾಡಿದ್ದ ಚಾಟ್ ಅನ್ನು ನೋಡಿದ್ದಾಳೆ. ಅಲ್ಲಿ ಆಕೆಗೆ ಆ ಯುವತಿಯ ಅಶ್ಲೀಲ ಫೋಟೊಗಳೂ ಸಿಕ್ಕಿವೆ. ಅದನ್ನು ಡೌನ್ಲೋಡ್ ಮಾಡಿಟ್ಟುಕೊಂಡು, ಫೇಕ್ ಅಕೌಂಟ್ ಒಂದರ ಮೂಲಕ ಆ ಫೋಟೋಗಳನ್ನು ಪೋಸ್ಟ್ ಮಾಡಲಾರಂಭಿಸಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅವಳು ಬಳಸುತ್ತಿದ್ದ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ. (ಏಜೆನ್ಸೀಸ್)