ಆಗ್ರಾ: ಅಪಾರ್ಟ್‌ಮೆಂಟ್‌ನ ಮಹಿಳೆಯೊಬ್ಬಳು ವಾಚ್ಮನ್ ಜತೆಗೆ ಅನುಚಿತವಾಗಿ ವರ್ತಿಸಿ. ಪೊರಕೆಯಿಂದ ಥಳಿಸಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜಗದೀಶ್ ಪ್ರಸಾದ ತಿವಾರಿ ಹಲ್ಲೆಗೊಳಗಾದ ವಾಚ್ಮನ್ ಆಗಿದ್ದಾನೆ. ರೇನ್‌ಬೋ ಅಪಾರ್ಟ್‌ಮೆಂಟ್‌ನ ಸಿ-8ರಲ್ಲಿ ವಾಸಿಸುವ ಅನಿಲ್ ಶರ್ಮಾ ಎಂಬುವರ ಪತ್ನಿ ಅನಿತಾ ಹಾಗೂ ಮಗ ಪ್ರಾಂಶು ಎಂಬುವರೇ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ಜಗದೀಶ್ ಪ್ರಸಾದ್ ಎಂದಿನಂತೆ ಮಂಗಳವಾರ ಬೆಳಗ್ಗೆ ಕರ್ತವ್ಯದಲ್ಲಿದ್ದರು. ಈ ವೇಳೆ ತಾಯಿ ಮತ್ತು ಮಗ ಬಂದು, ಲಿಫ್ಟ್ ಏಕೆ ಕೆಲಸ ಮಾಡುತ್ತಿಲ್ಲ ಎಂದು ಕೇಳಿದ್ದಾರೆ. ಆಗ ಜಗದೀಶ್ ಕಾರಣವನ್ನು ವಿವರಿಸುತ್ತಿದ್ದಂತೆಯೇ, ಮಗ ಆತನನ್ನು ನಿಂದಿಸಲು ಪ್ರಾರಂಭಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಸ್ವಲ್ಪ ಸಮಯದ ನಂತರ, ತಾಯಿ ವಾಚ್ಮನ್ಗೆ ಪೊರಕೆಯಿಂದ ಥಳಿಸಲು ಪ್ರಾರಂಭಿಸಿದ್ದಾಳೆ.
ಘಟನೆಯಿಂದ ನೊಂದಿರುವ ಜಗದೀಶ್ ಇಬ್ಬರ ವಿರುದ್ಧ ಸಿಕಂದರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇನ್ಸ್ ಪೆಕ್ಟರ್ ಆನಂದ್ ಕುಮಾರ್ ಶಾಹಿ ತಿಳಿಸಿದ್ದಾರೆ.(ಏಜೆನ್ಸೀಸ್)