More

    ಪ್ರತಿಭಟನೆ ವೇಳೆ ಲಾಠಿಚಾರ್ಜ್: ಬಿಜೆಪಿ ಮುಖಂಡನ ಸಾವು, ಹಲವರಿಗೆ ಗಾಯ

    ಪಾಟ್ನಾ: ಪೊಲೀಸರು ನಡೆಸಿದ ಲಾಠಿಚಾರ್ಜ್ ವೇಳೆ ಬಿಜೆಪಿ ಮುಖಂಡನೊಬ್ಬ ಮೃತಪಟ್ಟಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ಇದನ್ನೂ ಓದಿ: ಭಾರತದಲ್ಲಿ ಟೆಸ್ಲಾ ಕಂಪನಿಯ ಕಾರು ಕಾರ್ಖಾನೆ ಸ್ಥಾಪನೆ? ಸರ್ಕಾರದ ಜತೆಗೆ ಚರ್ಚೆ

    ವಿಜಯ್ ಸಿಂಗ್ ಎಂಬುವರೇ ಮೃತಪಟ್ಟಿದ್ದು. ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡರು ಮತ್ತು ಕಾರ್ಯಕರ್ತರು ನಾಲ್ಕು ದಿನಗಳಿಂದ ಶಿಕ್ಷಕರ ಹುದ್ದೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಸರಿ ಪಕ್ಷದ ಮುಖಂಡರು ವಿಧಾನಸೌಧದ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅಲ್ಲದೇ, ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ.

    ಬಿಜೆಪಿ ಮುಖಂಡ ಮೃತಪಟ್ಟಿರುವ ಮಾಹಿತಿಯನ್ನು ರಾಜ್ಯಸಭಾ ಸಂಸದ ಸುಶೀಲ್ ಮೋದಿ ದೃಢಪಡಿಸಿದ್ದು, ಪೊಲೀಸರ ಲಾಠಿ ಚಾರ್ಜ್‌ನಿಂದ ನಮ್ಮ ಪಕ್ಷದ ಕಾರ್ಯಕರ್ತರೊಬ್ಬರು ಸಾವನ್ನಪ್ಪಿರುವುದು ದುರದೃಷ್ಟಕರ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಇದಕ್ಕೆ ಪೊಲೀಸರು ಮತ್ತು ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಪರಿಷತ್ತಿನಲ್ಲಿ ಹನಿಮೂನ್ ಸಮಯದ ಬಗ್ಗೆ ಹಾಸ್ಯಮಯ ಚರ್ಚೆ: ನಗೆಗಡಲಲ್ಲಿ ತೇಲಾಡಿದ ಸದಸ್ಯರು

    ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಾರ್ಯಕರ್ತರ ಮೇಲಿನ ಲಾಠಿಚಾರ್ಜ್​ನ್ನು ಖಂಡಿಸಿದ್ದು, ಇದು ರಾಜ್ಯ ಸರ್ಕಾರದ ವೈಫಲ್ಯ ಮತ್ತು ಆಕ್ರೋಶದ ಪರಿಣಾಮವಾಗಿದೆ. ಮಹಾಮೈತ್ರಿಕೂಟ ಸರ್ಕಾರವು ಭ್ರಷ್ಟಾಚಾರದ ಕೋಟೆಯನ್ನು ಉಳಿಸಲು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದೆ. ಆರೋಪ ಪಟ್ಟಿಗೆ ಒಳಗಾದ ವ್ಯಕ್ತಿಯನ್ನು ರಕ್ಷಿಸಲು ಬಿಹಾರದ ಮುಖ್ಯಮಂತ್ರಿ ನೈತಿಕತೆಯನ್ನೂ ಮರೆತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.(ಏಜೆನ್ಸೀಸ್​​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts