More

    ಲಂಚ ತೆಗೆದುಕೊಂಡಿದ್ದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ತಾವು ಲಂಚ ತೆಗೆದುಕೊಂಡಿದ್ದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

    ಇದನ್ನೂ ಓದಿ: ಪ್ರತಿಭಟನೆ ವೇಳೆ ಲಾಠಿಚಾರ್ಜ್: ಬಿಜೆಪಿ ಮುಖಂಡನ ಸಾವು, ಹಲವರಿಗೆ ಗಾಯ

    ಮಾಜಿ ಸಿಎಂಗಳಾದ ಬೊಮ್ಮಾಯಿ‌, ಕುಮಾರಸ್ವಾಮಿ ಲಂಚದ ಆರೋಪ ಮಾಡಿದ ಬೆನ್ನಲ್ಲೇ ಈ ಬಗ್ಗೆ ಮಾತನಾಡಿದ ಸಿಎಂ, ತಾವು ಈ ಆರೋಪವನ್ನು ಖಂಡ ತುಂಡಾಗಿ ಅಲ್ಲಗೆಳೆಯುತ್ತೇನೆ ಎಂದರು. ಒಂದು ವೇಳೆ ಲಂಚ ತೆಗೆದುಕೊಂಡಿರುವುದು ಸಾಭೀತಾದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ, ತಮ್ಮ ಇಲಾಖೆಯಲ್ಲಿ ಬಜೆಟ್​​ ಕಾರಣದಿಂದಾಗಿ ಯಾವುದೇ ವರ್ಗಾವಣೆಯನ್ನು ಮಾಡಿಲ್ಲ. ಗೊತ್ತಿಲ್ಲದ ರೀತಿಯಲ್ಲಿ ಭ್ರಷ್ಟಾಚಾರ ಮಾಡಿದರೆ ತಮಗೆ ಈ ಬಗ್ಗೆ ಗೊತ್ತಿಲ್ಲ. ಅಧಿಕಾರಕ್ಕೆ ಬಂದು ಈಗ ಎರಡು ತಿಂಗಳು ಆಗಿದೆ. ಭ್ರಷ್ಟಾಚಾರ ಆರೋಪವು ಕೇವಲ ಕಪೋಲಕಲ್ಪಿತವಾಗಿದೆ. ತಮ್ಮ ಸರ್ಕಾರದ ಮೇಲೆ ಹೇಳಲು ಆರೋಪಗಳಿಲ್ಲ ಎಂದು ತಿಳಿಸಿದ್ದಾರೆ.

    ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತಿರುವುದರಿಂದ ಪ್ರತಿಪಕ್ಷಗಳಿಗೆ ರಾಜಕೀಯ ಭಯ ಶುರುವಾಗಿದ್ದು, ಅವರಿಗೆ ಅಭದ್ರತೆ ಕಾಡುತ್ತಿದೆ. ಹಾಗಾಗಿ ಅವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರದ ಅಕ್ರಮಗಳ ಬಗ್ಗೆ ತನಿಖೆ ಮಾಡಿಸುತ್ತಿದ್ದೇವೆ. ಮಾಜಿ ಸಿಎಂ ಬೊಮ್ಮಾಯಿ‌ 2013ರಿಂದ ತನಿಖೆ ಮಾಡಿಸಿ ಎಂದಿದ್ದಾರೆ. ಆದರೆ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಏಕೆ ತನಿಖೆ ಮಾಡಿಸಲಿಲ್ಲ. ನಮ್ಮ ಮೇಲಿನ ಮೇಲಿನ ಆರೋಪಗಳಿಗೆ ದಾಖಲಾತಿಗಳು ಇರಲಿಲ್ಲ ಎಂದು ಸಿಎಂ ಹೇಳಿದ್ದಾರೆ.

    ಬೊಮ್ಮಾಯಿ‌ ಪ್ರತಿಕ್ರಿಯೆ:
    ಮಾಜಿ ಸಿಎಂ ಬೊಮ್ಮಾಯಿ ಈ ಬಗ್ಗೆ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯನವರು ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದಾರೆ. ವರ್ಗಾವಣೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ನಾವು ಭ್ರಷ್ಟಾಚಾರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದೆವು. ಆದರೆ ಸಿಎಂ ತಮ್ಮ ಇಲಾಖೆಯದು ಮಾತ್ರ ಹೇಳಿದ್ದಾರೆ. ಬೇರೆ ಇಲಾಖೆ ಭ್ರಷ್ಟಾಚಾರ ಬಗ್ಗೆ ಮಾತನಾಡಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಅಲ್ಲದೇ, ತಮಗೆ ಯಾವುದೇ ತನಿಖೆಯ ಬಗ್ಗೆ ಭಯವಿಲ್ಲ. ತಮ್ಮ ವಿರುದ್ಧ ದಾಖಲೆ ಇದ್ದರೆ ತನಿಖೆ ಮಾಡಿಸಿ. ಈ ಹಿಂದಿನ ಕಾಂಗ್ರೆಸ್​​ ಸರ್ಕಾರದ ಕಾಲದ ಹಗರಣಗಳು ಎಸಿಬಿಯಿಂದ ಲೋಕಾಯುಕ್ತ ಮುಂದೆ ಹೋಗಿವೆ. ಅವುಗಳನ್ನು ಸೇರಿಸಿ ವಿಶೇಷ ತನಿಖೆ ಮಾಡಿಸಿ ಎಂದು ಮಾಜಿ ಸಿಎಂ ಒತ್ತಾಯಿಸಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts