ಸಾಂದರ್ಭಿಕ ಚಿತ್ರ 
ನ್ಯೂಸ್

ಮಹಿಳೆಯನ್ನು ಅರೆಬೆತ್ತಲೆಗೊಳಿಸಿ, ಹಲ್ಲೆ ಮಾಡಿ ಚಿನ್ನಾಭರಣ ದೋಚಿದ್ರು: ಎದೆಗುಂದದ ಆಕೆ ಮಾಡಿದ್ದಿಷ್ಟು..

ಪಾಟ್ನಾ: ಪಂಚಾಯ್ತಿ ವೇಳೆ ಮಹಿಳೆಯೊಬ್ಬಳನ್ನು ಅರೆಬೆತ್ತಲೆಗೊಳಿಸಿ ಥಳಿಸಿ ಆಕೆಯ ಚಿನ್ನಾಭರಣಗಳನ್ನು ಕಸಿದುಕೊಂಡಿರುವ ಘಟನೆ ಬಿಹಾರದ ಶೆಯೋಹರ್ ಎಂಬ ಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: VIDEO | ಫುಟ್ಬಾಲ್ ಆಡುವಾಗಲೇ ಕಾಲು ಮುರಿದುಕೊಂಡ ಆಟಗಾರ

ಘಟನೆಗೆ ಸಂಬಂಧಿಸಿದಂತೆ ಬಿಹಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಸಂತ್ರಸ್ತೆಯ ದೂರಿನ ಮೇರೆಗೆ ಕುಟುಂಬ ಸದಸ್ಯರು ಮತ್ತು ಇತರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಎಫ್‌ಐಆರ್‌ನಲ್ಲಿ ಮಹಿಳೆ ತನ್ನ ಪತಿ ಮದ್ಯವ್ಯಸನಿ ಮತ್ತು ಜೂಜುಕೋರ ಎಂದು ಹೇಳಿದ್ದಾರೆ. ಈ ಕಾರಣದಿಂದಾಗಿ, ಅವಳು ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾಳೆ.

ಮಹಿಳೆಯು ಜುಲೈ 27ರಂದು ಅತ್ತೆಯ ಮನೆಗೆ ಬಂದಿದ್ದು, ಈ ನಡುವೆ ಆಕೆ ಹಳ್ಳಿಯ ಯುವಕನೊಂದಿಗೆ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ್ದ ಮಾವ, ಇಬ್ಬರು ಭಾಮೈದ ಸಿಟ್ಟಾಗಿದ್ದರು. ಮೂವರೂ ಸೇರಿ ಆಕೆಯ ವಿರುದ್ಧ ಸುಳ್ಳು ಆರೋಪ ಮಾಡಿ ಇಲ್ಲಸಲ್ಲದ್ದನ್ನು ಹೇಳಿ ನಿರ್ದಾಕ್ಷಿಣ್ಯವಾಗಿ ಥಳಿಸಿ ರಾತ್ರಿಯಿಡೀ ಹಲಸಿನ ಮರಕ್ಕೆ ಕಟ್ಟಿ ಹಾಕಿದ್ದಾರೆ.  ಈ ವಿಚಾರವಾಗಿ ಜುಲೈ 28ರಂದು ಗ್ರಾಮದಲ್ಲಿ ಪಂಚಾಯಿತಿ ಸಭೆ ನಡೆಸಲಾಗಿದ್ದು, ಈ ವೇಳೆ ಮಹಿಳೆಗೆ ಅರೆಬೆತ್ತಲೆಯಾಗಿ ಥಳಿಸಿ ಆಕೆಯ ಮಂಗಳಸೂತ್ರ, ಕಿವಿಯೋಲೆ, ಮೂಗುತಿ ಮತ್ತಿತರ ಆಭರಣಗಳನ್ನು ಕಿತ್ತು ಅವಮಾನ ಮಾಡಿದ್ದಾರೆ.

ಘಟನೆ ಬಳಿಕ ಗಾಯಗೊಂಡ ಸ್ಥಿತಿಯಲ್ಲಿ ಮಹಿಳೆಯು ಸದರ್ ಆಸ್ಪತ್ರೆಗೆ ತಲುಪಿದ್ದು, ಚಿಕಿತ್ಸೆಯ ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾಳೆ. ಘಟನೆಯನ್ನು ಖಚಿತಪಡಿಸಿರುವ ಮಹಿಳಾ ಪೊಲೀಸ್ ಠಾಣೆಯ ಮುಖ್ಯಸ್ಥ ಕೋಮಲ್ ರಾಣಿ, ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ತನಿಖೆಯ ಜತೆಗೆ ಆರೋಪಿಗಳ ಪತ್ತೆಗೆ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)