ನ್ಯೂಸ್

ಪ್ರಿಯಕರನಿಗಾಗಿ ಹೆತ್ತ ಮಗನನ್ನೇ ಕೊಂದ ಪಾಪಿ; ಸಾಕ್ಷ್ಯ ಮರೆಮಾಚಲು ಸಿನಿಮಾ ಸ್ಪೂರ್ತಿ ಎಂದ ಆರೋಪಿ

ಸೂರತ್​: ಆಘಾತಕಾರಿ ಘಟನೆ ಒಂದರಲ್ಲಿ ಮಹಿಳೆ ಒಬ್ಬಳು ಪ್ರಿಯಕರನನ್ನು ಮೆಚ್ಚಿಸಲು ತನ್ನ ಎರಡೂವರೆ ವರ್ಷದ ಮಗುನನ್ನ ಕೊಂದು ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿ ಸಿನಿಮೀಯಾ ಶೈಲಿಯಲ್ಲಿ ಎಸ್ಕೇಪ್​ ಆಗಲು ಯತ್ನಿಸಿರುವ ಘಟನೆ ಗುಜರಾತಿನ ಸೂರತ್​ನಲ್ಲಿ ನಡೆದಿದೆ.

ಮೃತ ಬಾಲಕನನ್ನು ವೀರ್​ ಮಾಂಡವಿ(2) ಎಂದು ಗುರುತಿಸಲಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ನಯನ ಮಾಂಡವಿ ಎಂಬಾಕೆಯನ್ನು ಬಂಧಿಸಿದ್ದಾರೆ. ಈಕೆ ಸೂರತ್​ನ ದಿಂಡೋಲಿ ಪ್ರದೇಶದಲ್ಲಿರುವ ನಿರ್ಮಾಣ ಹಂತದ ಕಟ್ಟಡ ಒಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಸಂಬಂಧ

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಬಂಧಿತ ಮಹಿಳೆ ನಯನ ಜಾರ್ಖಂಡ್​ ಮೂಲದವಳಾಗಿದ್ದು, ಕೆಲಸ ಅರಸಿ ಗುಜರಾತಿಗೆ ಬಂದಿದ್ದರು. ಈಕೆಗೆ ಮದುವೆಯಾಗಿ ಎರಡೂವರೆ ವರ್ಷದ ಗಂಡು ಮಗು ಇದ್ದರೂ ಸಹ ಅಕ್ರಮ ಸಂಬಂಧ ಹೊಂದಿದ್ದಳು. ಪ್ರಿಯಕರನೊಂದಿಗೆ ಮದುವೆಯಾಗಲು ಮುಂದಾಗಿದ್ದ ಆರೋಪಿಯೂ ಆತನಿಗೆ ಇನ್ನಷ್ಟು ಹತ್ತರಿವಾಗಲು ತನ್ನ ಮಗನನ್ನೇ ಕೊಂದಿದ್ದಾಳೆ.

ಮಗನನ್ನು ಕೊಂದ ಬಳಿಕ ಅವನ ಶವವನ್ನು ನಿರ್ಮಾಣ ಹಂತದ ಕಟ್ಟಡದ ಡ್ರೈನೇಜ್ ಪಿಟ್​​ ಒಳಗೆ ಎಸೆದು ಬಳಿಕ ಪೊಲೀಸ್​ ಠಾಣೆಗೆ ತೆರಳಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಮೂರು ದಿನಗಳ ಕಾಲ ತೀವ್ರ ಹುಡುಕಾಟ ನಡೆಸಿದ್ದರು ಸಹ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ.

ಘಟನೆ ನಡೆದ ಪ್ರದೇಶದ ಸುತ್ತ ಇರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಬಾಲಕ ಕಟ್ಟಡ ಬಿಟ್ಟು ಬೇರೆಡೆ ಎಲ್ಲಿಗೂ ಹೋಗಿಲ್ಲದಿರುವುದು ಕಂಡು ಬಂದಿದೆ. ಬಳಿಕ ಮಹಿಳೆಯನ್ನು ಪ್ರಶ್ನಿಸಿದಾಗ ಆಕೆ ತನ್ನ ಪ್ರಿಯಕರ ಅಪಹರಿಸಿರಬಹುದು ಎಂದು ದೂರಿದ್ದಳು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಆತ ಅಸ್ಸಾಂ ಬಿಟ್ಟು ಬೇರೆಡೆ ಸಂಚರಿಸದಿರುವುದು ಕಂಡು ಬಂದಿದೆ.

ದೃಶ್ಯಂ ಸಿನಿಮಾ ಸ್ಪೂರ್ತಿ

ಬಳಿಕ ನಿರ್ಮಾಣ ಹಂತದ ಕಟ್ಟಡದಲ್ಲಿ ಶ್ವಾನ ದಳದ ಮೂಲಕ ಪರಿಶೀಲನೆ ನಡೆಸಿದಾಗಲೂ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ. ಪ್ರಕರಣ ಜಟಿಲವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಮಹಿಳೆಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಿಯಕರನನ್ನು ಹತ್ತರಿವಾಗುವ ಸಲುವಾಗಿ ತನ್ನ ಮಗನನ್ನು ತಾನೇ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾಳೆ.

ಬಳಿಕ ಮೃತದೇಹವನ್ನು ಹೂತ್ತಿಟ್ಟಿರುವ ಬಗ್ಗೆ ಪ್ರಶ್ನಿಸಿದಾಗ ಆಕೆ ಮೊದಲಿಗೆ ತಾನು ಕೆಲಸ ಮಾಡುತ್ತಿದ್ದ, ಕಟ್ಟಡದ ಬಳಿ ಇದ್ದ ರಾಜಕಾಲುವೆ ಎಂದು ಹೇಳಿದ್ದಳು, ಪರಿಶೀಲನೆ ನಡೆಸಿದ ಬಳಿಕ ಕೆರೆ ಒಂದರಲ್ಲಿ ಎಸೆದಿರುವುದಾಗಿ ತಿಳಿಸಿದ್ದಳು, ಇದಾದ ಕೆಲ ಕ್ಷಣದ ಬಳಿಕ ತಾನು ಕೆಲಸ ಮಾಡುತ್ತಿದ್ದ ಡ್ರೈನೇಜ್ ಪಿಟ್​​ ಪರಿಶೀಲಿಸಿದಾಗ ಬಾಲಕನ ಮೃತದೇಹ ಪತ್ತೆಯಾಗಿದೆ.

ಮಗನನ್ನು ಕೊಲೆ ಮಾಡಿದ ಬಳಿಕ ಆರೋಪಿಯೂ ದೃಶ್ಯಂ ಚಿತ್ರ ವೀಕ್ಷಿಸಿದ್ದು, ಅದರಲ್ಲಿ ಮೃತದೇಹವನ್ನು ವಿಲೇವಾರಿ ಮಾಡುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸುವ ಮಾಡಲಾಗುತ್ತದೆ. ಹಾಗೆಯೇ ಈಕೆಯೂ ಅದೇ ರೀತಿ ಮಾಡಿದ್ದರೆ ಪೊಲೀಸರು ತನ್ನನ್ನು ಹಿಡಿಯುವುದಿಲ್ಲ ಎಂದು ಭಾವಿಸಿ ಈ ರೀತಿ ಮಾಡಿ ಅಪರಾಧಿಯಾಗಿದ್ದಾಳೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಪ್ರಕರಣದ ಕುರಿತು ಮಾಹಿತಿ ನೀಡಿದ್ಧಾರೆ.