ನ್ಯೂಸ್

ಸಾಕು ಬೆಕ್ಕಿನ ಸಾವಿಗೆ ಮನನೊಂದ ಮಹಿಳೆ ನೇಣಿಗೆ ಶರಣು; ಅಷ್ಟಕ್ಕೂ ನಡೆದಿದ್ದಾರೂ ಏನು? | Pet Cat

Pet Cat: ತನ್ನ ಸಾಕು ಬೆಕ್ಕಿನ ಸಾವಿಗೆ ಮನನೊಂದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಅಮ್ರೋಹರದಲ್ಲಿ ಇತ್ತೀಚಿಗೆ ನಡೆದಿದೆ.

ಪೂಜಾ(32) ಮೃತೆ ಎಂದು ಗುರುತಿಸಲಾಗಿದೆ. ಸತ್ತ ಬೆಕ್ಕು ಮತ್ತೆ ಬದುಕುತ್ತೆ ಎಂಬ ಆಸೆಯೊಂದಿಗೆ ಮೃತ ದೇಹವನ್ನು ಎರಡು ದಿನಗಳ ಕಾಲ ತನ್ನ ಬಳಿಯೇ ಇಟ್ಟುಕೊಂಡಿದ್ದಾಳೆ. ಇದು ಬದುಕಿ ಬಾರದು ಎಂಬ ವಾಸ್ತವ ಸಂಗತಿ ತಿಳಿದ ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬ ಸದಸ್ಯರ ಪ್ರಕಾರ, ಅಮ್ರೋಹರದ ಹಸನ್​​ಪುರಿ ನಿವಾಸಿ ಪೂಜಾ 8 ವರ್ಷಗಳಿಂದೆ ಮದುವೆಯಾಗಿದ್ದಳು. ಕಳೆದ 2 ವರ್ಷಗಳ ಹಿಂದೆ ಗಂಡನಿಂದ ವಿಚ್ಛೇದನ ಪಡೆದಿದ್ದಳು. ಅಂದಿನಿಂದ ತಮ್ಮ ತಾಯಿಯೊಂದಿಗೆ ವಾಸವಾಗಿದ್ದಾಳೆ. ಹೀಗಾಗಿ, ಒಂಟಿತನವನ್ನು ಕಳೆದುಕೊಳ್ಳಲು ಕೆಲ ವರ್ಷದಿಂದ ಬೆಕ್ಕೊಂದನ್ನು ಸಾಕಿದ್ದರು. ಪೂಜಾ ತನ್ನ ಬೆಕ್ಕನ್ನು ಎಷ್ಟು ಆಳವಾಗಿ ಪ್ರೀತಿಸುತ್ತಿದ್ದರು ಎಂದರೆ, ಅದು ಇಲ್ಲದೆ ಜೀವನವನ್ನು ಊಹಿಸಿಕೊಳ್ಳುವುದು ಅಸಾಧ್ಯವೆಂದು ಹೇಳುತ್ತಿದ್ದಳು ಎಂದು ಹೇಳಿದ್ದಾರೆ.

ಕಳೆದ ಫೆ.27(ಶನಿವಾರ)ರಂದು ಬೆಕ್ಕು ಮೃತಪಟ್ಟಿದೆ. ಅದನ್ನು ಹೂಳಲು ಜನ ಕೇಳಿದಾಗ, ನನ್ನ ಬೆಕ್ಕು ಮತ್ತೆ ಬದುಕಿ ಬರುತ್ತದೆ ಎಂದು ಹೇಳಿ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಆದರೆ, ಶನಿವಾರ ಬಾಗಿಲು ತೆರೆದು ನೋಡಿದರೆ ನೇಣಿ ಬೀಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್)