ದೇಶದಲ್ಲಿ 50 ವರ್ಷ ಹಿಂದೆ ಏನೂ ಕೆಲಸಗಳು ಆಗಿರಲಿಲ್ಲ: ಕೇಂದ್ರ ಸಚಿವ ಸೋಮಣ್ಣ

v somanna bjp mp
Published on

ಮೈಸೂರು: ದೇಶದಲ್ಲಿ ಈ ಹಿಂದೆ ಏನೂ ಕೆಲಸಗಳು ಆಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಬಹಳಷ್ಟು ಕೆಲಸಗಳಾಗಿವೆ. ಇದು 50 ವರ್ಷ ಹಿಂದೆಯೇ ಆಗಿದ್ದರೆ ದೇಶ ರಾಮರಾಜ್ಯವಾಗುತ್ತಿತ್ತು ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ರೈಲ್ವೆ ಯೋಜನೆಗಳಿಗೆ ರಾಜ್ಯಕ್ಕೆ 10 ವರ್ಷದಲ್ಲಿ ಕೊಟ್ಟ ಅನುದಾನವನ್ನು ನಮ್ಮ ಸರ್ಕಾರ ಒಂದೇ ವರ್ಷದಲ್ಲಿ ನೀಡಿದೆ. 2013-14ರಲ್ಲಿ 830 ಕೋಟಿ ರೂ. ಕರ್ನಾಟಕಕ್ಕೆ ನೀಡಲಾಗಿತ್ತು. ಈ ಸಲ 7,564 ಕೋಟಿ ರೂ. ನೀಡಲಾಗಿದೆ. ಹಿಂದಿನ ವರ್ಷ 7,561 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಗಿಂತ ಹೆಚ್ಚು ಹಣವನ್ನು ನೀಡಲಾಗಿದೆ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ-ಅಂಶ ಇಟ್ಟುಕೊಂಡು ಮಾತನಾಡುವುದು ಒಳ್ಳೆಯದು. ರಾಜ್ಯದ ಅಭಿವೃದ್ಧಿಗೆ ಶೇ.1 ಪರ್ಸೆಂಟ್ ಸಹ ಕುಂಠಿತ ಮಾಡುವ ಉದ್ದೇಶವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net