ನ್ಯೂಸ್

ಅರ್ಜಿ ಸಲ್ಲಿಸಿದ 48 ವರ್ಷಗಳ ಬಳಿಕ ಸಿಕ್ಕಿದ ಉದ್ಯೋಗ ಪತ್ರ; ಆಶ್ಚರ್ಯಗೊಂಡ ಮಹಿಳೆ ಹೇಳಿದ್ದೇನು ಗೊತ್ತಾ? | Application

ಲಂಡನ್​​​: ಕೆಲಸಕ್ಕೆ ಅರ್ಜಿ(Application) ಸಲ್ಲಿಸಿ ಅದರ ಪ್ರತಿಕ್ರಿಯೆಗಾಗಿ ಕಾಯುವುದು ಇದೆಯಲ್ಲ ಆ ನಿರಾಸೆಯನ್ನು ಹೇಳುವುದು ಕಷ್ಟ. ಹೀಗಿ ಬ್ರಿಟನ್​ನಲ್ಲಿ ಮಹಿಳೆಯೊಬ್ಬರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ 48 ವರ್ಷಗಳ ಬಳಿಕ ಉದ್ಯೋಗಕ್ಕೆ ಸಲ್ಲಿಸಿದ ಅರ್ಜಿಯ ಬಗ್ಗೆ ಮಾಹಿತಿ ಸಿಕ್ಕಿದೆ. ಅದನ್ನು ಆ ಮಹಿಳೆ ಆಶ್ಚರ್ಯಗೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು.

70 ವರ್ಷ ವಯಸ್ಸಿನ ಟಿಝಿ ಹಾಡ್ಸನ್ ತನ್ನ ಕನಸಿನ ಉದ್ಯೋಗಕ್ಕಾಗಿ ಸಲ್ಲಿಸಿದ ಅರ್ಜಿಗೆ ಏಕೆ ಉತ್ತರ ಸಿಗಲಿಲ್ಲ ಎಂದು ಯೋಚಿಸುತ್ತಾ ಸುಮಾರು ಐದು ದಶಕಗಳನ್ನು ಕಳೆದಿದ್ದಾರೆ. 1976ರ ಜನವರಿಯಲ್ಲಿ ಮೋಟಾರ್‌ ಸೈಕಲ್ ಸ್ಟಂಟ್ ರೈಡರ್ ಹುದ್ದೆಗೆ ಅರ್ಜಿಯನ್ನು ಕಳುಹಿಸಿದ್ದರು. ಆದರೆ ಆ ಅರ್ಜಿಯು ಇಷ್ಟು ವರ್ಷ ಪೋಸ್ಟ್ ಆಫೀಸ್ ಡ್ರಾಯರ್‌ನ ಹಿಂದೆ ಸಿಲುಕಿತ್ತು ಎಂಬ ವಿಚಾರ ಇತ್ತೀಚೆಗೆ ತಿಳಿಯಿತು ಎಂದು ಟಿಝಿ ಹಾಡ್ಸನ್​​ ಅವರು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಆ ಪತ್ರವನ್ನು ಅವರಿಗೆ ಹಿಂತಿರುಗಿಸಿರುವುದು ಅದ್ಭುತ ಎಂದು ಹೇಳಿದ್ದಾರೆ. ನಾನು ಉದ್ಯೋಗಕ್ಕಾಗಿ ಅರ್ಜಿ ಕಳುಹಿಸಿದ ಬಳಿಕ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಇದುವರೆಗೂ ನಾನು ಪ್ರಯತ್ನಿಸಲಿಲ್ಲ. ಅದು ಏಕೆ ಎಂದು ಈಗಲೂ ನನಗೆ ಆಶ್ಚರ್ಯವಾಗುತ್ತದೆ. ಇತ್ತೀಚೆಗೆ ಪತ್ರ ನನಗೆ ದೊರೆತಾಗ ಅದರ ಮೇಲ್ಭಾಗದಲ್ಲಿ ಕೆಲವು ಬರಹಗಳಿತ್ತು.

ಸ್ಟೈನ್ಸ್ ಪೋಸ್ಟ್ ಆಫೀಸ್‌ನಿಂದ ತಡವಾಗಿ ವಿತರಣೆಯಾಗಿದೆ. ಡ್ರಾ [sic] ಹಿಂದೆ ಕಂಡುಬಂದಿದೆ. ಕೇವಲ 50 ವರ್ಷಗಳು ತಡವಾಗಿ ಎಂದು ಬರೆಯಲಾಗಿದೆ.

ನಾನು ಆಶ್ಚರ್ಯ ಪದಲು ಇದೇ ಕಾರಣ. ತನ್ನ ಪತ್ರವನ್ನು ಯಾರು ಹಿಂದಿರುಗಿಸಿದರು ಅಥವಾ ಅದು ಅವರಿಗೆ ಹೇಗೆ ದಾರಿ ಮಾಡಿಕೊಟ್ಟಿತು ಎಂಬುದು ತನಗೆ ತಿಳಿದಿಲ್ಲ. ಇಷ್ಟು ಸಮಯದ ನಂತರ ಪತ್ರವನ್ನು ಮರಳಿ ಪಡೆಯುವುದು ನಂಬಲಾಗದಂತಿದೆ. ನಾನು 50 ಬಾರಿ ಮನೆ ಬದಲಾಯಿಸಿದ್ದೇನೆ. ನಾಲ್ಕೈದು ಬಾರಿ ದೇಶಗಳನ್ನು ಬದಲಾಯಿಸಿದ್ದೇನೆ. ಅವರು ನನ್ನನ್ನು ಹೇಗೆ ಕಂಡುಕೊಂಡರು ಎಂಬುದು ನಿಗೂಢವಾಗಿದೆ ಎಂದು ಹೇಳಿದರು.

ಇಷ್ಟು ಸಮಯದ ನಂತರ ನಾನು ಅದನ್ನು ಮರಳಿ ಪಡೆದಿದ್ದೇನೆ. ಲಂಡನ್‌ನಲ್ಲಿರುವ ನನ್ನ ಫ್ಲಾಟ್‌ನಲ್ಲಿ ಪತ್ರವನ್ನು ಟೈಪ್ ಮಾಡಿದ್ದನ್ನೂ ನಾನು ಇಂದಿಗೂ ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ಪ್ರತಿದಿನ ನಾನು ನನ್ನ ಪೋಸ್ಟ್‌ಗಾಗಿ ಹುಡುಕುತ್ತಿದ್ದೆ ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ನಾನು ತುಂಬಾ ನಿರಾಶೆಗೊಂಡಿದ್ದೇನೆ ಏಕೆಂದರೆ ನಾನು ನಿಜವಾಗಿಯೂ ಮೋಟಾರ್‌ ಸೈಕಲ್‌ನಲ್ಲಿ ಸ್ಟಂಟ್ ರೈಡರ್ ಆಗಲು ಬಯಸಿದ್ದೆ ಎಂದು ನೆನೆಪಿಸಿಕೊಂಡಿದ್ದಾರೆ.

ತನ್ನ ಉದ್ಯೋಗದ ಅರ್ಜಿಗೆ ಪ್ರತಿಕ್ರಿಯೆ ಬಾರದನ್ನು ತಿಳಿದು ಟಿಝಿ ಹಾಡ್ಸನ್ ನಿರಾಶೆಗೊಂಡು ಅಲ್ಲಿಗೆ ನಿಲ್ಲಿಸಿಲ್ಲ. ಅವರು ಆಫ್ರಿಕಾಕ್ಕೆ ತೆರಳಿದರು. ಸ್ನೇಕ್​​​ ಹ್ಯಾಂಡ್ಲರ್, ಏರೋಬ್ಯಾಟಿಕ್ ಪೈಲಟ್, ಫ್ಲೈಯಿಂಗ್​ ಇನ್​​ಸ್ಟ್ರಕ್ಟರ್​​, ಟ್ರಾವೆಲರ್​ ಆಗಿ ಪ್ರಪಂಚವನ್ನು ನೋಡಿದ್ದಾರೆ.(ಏಜೆನ್ಸೀಸ್​​)