ನ್ಯೂಸ್

ವ್ಯಕ್ತಿಯ ವೃಷಣಗಳನ್ನು ಕಚ್ಚಿ ತುಂಡರಿಸಿದ ಮಹಿಳೆ: ಪೊಲೀಸರಿಗೆ ಗೊಂದಲ ತಂದಿಟ್ಟ ಇಬ್ಬರ ಹೇಳಿಕೆ!

ಬ್ರಾಸಿಲಿಯಾ: ವ್ಯಕ್ತಿಯೊಬ್ಬನ ವೃಷಣಗಳನ್ನು ಮಹಿಳೆಯೊಬ್ಬಳು ಕಚ್ಚಿ ತುಂಡು ಮಾಡಿರುವ ಘಟನೆ ಬ್ರೆಜಿಲ್​ನಲ್ಲಿ ನಡೆದಿದ್ದು, ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಮಹಿಳೆ ಇದೀಗ ವಿಚಾರಣೆ ಎದುರಿಸುತ್ತಿದ್ದಾಳೆ.

ಆರೋಪಿ ಮಹಿಳೆಯನ್ನು ಬ್ರೌನಾ ಎಂದು ಗುರುತಿಸಲಾಗಿದ್ದು, ಸೆಪ್ಟೆಂಬರ್​ 5ರಂದು ಸಂತ್ರಸ್ತ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆದರೆ, ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಆತ್ಮರಕ್ಷಣೆಗೆ ಹೀಗೆ ಮಾಡಲಾಯಿತು ಎಂದು ಪೊಲೀಸರ ಎದುರು ಹೇಳಿಕೆ ನೀಡಿದ್ದಾಳೆ.

ಬ್ರೌನಾ ಉತ್ತರ ಬ್ರೆಜಿಲ್​ನ ಮಿಗ್ವೆಲ್​ ಅಲ್ವೇಸ್​ ನಗರದಲ್ಲಿರ ನಿವಾಸಿ. ತನ್ನ ಮನೆಯಲ್ಲಿ ಬೇರೋಬ್ಬನ ಜತೆ ಇದ್ದಾಗ ಮಲಗುವ ಕೋಣೆಗೆ ದಿಢೀರ್​ ಭೇಟಿ ನೀಡಿದ ನೆರೆ ಮನೆಯ ಪೆಡ್ರೋ ಎಂಬ ವ್ಯಕ್ತಿ ಏಕಾಏಕಿ ಹಲ್ಲೆ ಮಾಡಿದ. ಬಳಿಕ ಬೆಡ್​ ಮೇಲೆ ನೂಕಿ ಅತ್ಯಾಚಾರಕ್ಕೆ ಯತ್ನಿಸಿದ. ಆತ್ಮ ರಕ್ಷಣೆಗಾಗಿ ಎರಡು ಬಾರಿ ವೃಷಣಗಳನ್ನು ಕಚ್ಚಿ ತುಂಡರಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ. ಸಂತ್ರಸ್ತ ವ್ಯಕ್ತಿ ತನ್ನ ಪಿಂಪ್​ ಎಂದು ಆರೋಪಿ ಮಹಿಳೆ ಹೇಳಿಕೊಂಡಿದ್ದಾಳೆ.

ಆದರೆ, ಸ್ಥಳೀಯ ಮಾಧ್ಯಮಗಳ ಪ್ರಕಾರ ಸಂತ್ರಸ್ತ ವ್ಯಕ್ತಿ ಮಹಿಳೆಯ ಮಾಜಿ ಪ್ರಿಯಕರ ಎನ್ನಲಾಗಿದೆ. ಡೇಟಿಂಗ್​ ಮಾಡಲು ನಿರಾಕರಿಸಿದ್ದಕ್ಕೆ ಹೊಟ್ಟೆ ಕಿಚ್ಚನಿಂದ ಆಕೆಯ ಮೇಲೆ ಆತ ದಾಳಿ ಮಾಡಿದ್ದಾನೆಂದು ತಿಳಿದುಬಂದಿದೆ.

ವೃಷಣಗಳನ್ನು ಕಚ್ಚಿ ತುಂಡರಿಸಿದ ಬಳಿಕ ನೋವಿನಿಂದ ವ್ಯಕ್ತಿ ಆಸ್ಪತ್ರೆಗೆ ಹೋಗಿದ್ದಾನೆ. ಆದರೆ, ಮರಳಿ ವೃಷಣಗಳನ್ನು ಜೋಡಿಸಲು ಸಾಧ್ಯವಿಲ್ಲ ಎಂದು ಹೇಳಿದ ವೈದ್ಯರು ಗಾಯಕ್ಕೆ ಹೊಲಿಗೆ ಹಾಕಿ ಚಿಕಿತ್ಸೆ ನೀಡದ ಬಳಿಕ ಮನೆಗೆ ಮರಳಿದ್ದಾನೆ.

ಮಾಧ್ಯಮಗಳ ಬಳಿ ತನ್ನ ನೋವನ್ನು ಹೇಳಿಕೊಂಡಿರುವ ಪೆಡ್ರೋ, ನನಗೆ ಏನಾಗಿದೆ ಅದಕ್ಕೆ ನಾನು ಅರ್ಹನಾಗಿರಲಿಲ್ಲ. ನನ್ನ ಮೇಲಿನ ದಾಳಿ ಅಪ್ರಚೋದಿತ ಎಂದು ತಿಳಿಸಿದ್ದಾನೆ. ಆದರೆ, ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಮಹಿಳೆ ದೂರಿದ್ದಾಳೆ. ಇದೀಗ ಪೊಲೀಸರಿಗೆ ಪ್ರಕರಣ ಗೊಂದಲವಾಗಿದ್ದು, ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)