Amit Shah: ನಕ್ಸಲರ ವಿರುದ್ಧದ ಆಪರೇಷನ್ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ. ಕದನ ವಿರಾಮಕ್ಕೆ ಸಿದ್ದರಿದ್ದೇವೆ ಎಂಬ ನಕ್ಸಲರ ಪ್ರಾಸ್ತಾಪವನ್ನು ನಾವು ಸ್ವೀಕರಿಸುವುದಿಲ್ಲ. ಶಸ್ತ್ರಾಸ್ತ್ರಗಳನ್ನ ಒಪ್ಪಿಸಿ ಶರಣಾದ್ರೆ ಸ್ವಾಗತಿಸುತ್ತೇವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ಸೋಮವಾರ(ಸೆ. 29) ವರದಿಯಾಗಿದೆ.
ನಕ್ಸಲ್ ಮುಕ್ತ ಭಾರತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಕಳೆದ 15 ದಿನಗಳ ಹಿಂದೆ ನಕ್ಸಲರು ಕದನ ವಿರಾಮಕ್ಕೆ ಸಿದ್ದರಿದ್ದೇವೆ ಎಂದು ಹೇಳಿದ್ದು, ಜನರಲ್ಲಿ ಗೊಂದಲ ಮೂಡಿಸಲು. ನಕ್ಸಲರು ಬರೆದ ಪತ್ರದಲ್ಲಿ ಇಲ್ಲಿಯವರೆಗೆ ನಡೆದದ್ದೆಲ್ಲವೂ ತಪ್ಪು ಎಂದು ಹೇಳಿದ್ದಾರೆ. ಮತ್ತು ಅವರು ಕದನ ವಿರಾಮ ಘೋಷಿಸಬೇಕು. ಎಲ್ಲರೂ ಶರಣಾಗುತ್ತಾರೆ ಎಂದು ಹೇಳಿದ್ದಾರೆ.
ನಾನು ಹೇಳುವುದು ಇಷ್ಟೇ ಯಾವುದೇ ಕದನ ವಿರಾಮ ಮಾಡಲ್ಲ. ಅವರು ಶರಣಾದರೆ, ಗುಂಡು ಹಾರಿಸುವ ಅಗತ್ಯವಿಲ್ಲ. ಶರಣಾದರೆ ನಾವು ಒಂದೇ ಒಂದು ಗುಂಡನ್ನು ಹಾರಿಸುವುದಿಲ್ಲ. ತಮ್ಮ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದರೆ ಅವರನ್ನು ಸ್ವಾಗತಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ನಕ್ಸಲರು ಶರಣಾದರೆ ಅವರಿಗೆ ರೆಡ್ಕಾರ್ಪೆಟ್ನ ಸ್ವಾಗತ ನೀಡಲಾಗುವುದು. ಆಕರ್ಷಕ ಪುನರ್ವಸತಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಇದೇ ವೇಳೆ ಘೋಷಣೆ ಮಾಡಿದರು. 2026 ಮಾರ್ಚ್ 31ರ ವೇಳೆಗೆ ದೇಶವು ನಕ್ಸಲಿಸಂನಿಂದ ಮುಕ್ತವಾಗಲಿದೆ ಎಂದು ಇದೇ ವೇಳೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು. (ಏಜೆನ್ಸೀಸ್)