ನ್ಯೂಸ್

ಡಾರ್ಲಿಂಗ್​ ಪ್ರಭಾಸ್​ ಮುಂದಿನ ಚಿತ್ರಕ್ಕೆ 'ಕಿಸ್'​ ಬೆಡಗಿ ನಾಯಕಿ?

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ಟಾಲಿವುಡ್​ನ ರೆಬೆಲ್​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಅಭಿನಯಿಸಲಿರುವ ಮುಂದಿನ ಚಿತ್ರಕ್ಕೆ ಸ್ಯಾಂಡಲ್​ವುಡ್​ನ 'ಕಿಸ್'​ ಬೆಡಗಿ, ನಟಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಇದೀಗ ತೆಲುಗು ಚಿತ್ರರಂಗದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಸದ್ಯ ಈ ಬಗ್ಗೆ ಲಭ್ಯವಾದ ಮಾಹಿತಿ ಹೀಗಿದೆ.

ಪ್ರಸ್ತುತ ಟಾಲಿವುಡ್​ ಅಂಗಳದಲ್ಲಿ ಟಾಪ್ ನಟಿಯರನ್ನು ಹಿಂದಿಕ್ಕಿ ಇದೀಗ ಹಲವು ಸ್ಟಾರ್​ ನಟರ ಸಿನಿಮಾಗಳಲ್ಲಿ ನಾಯಕಿ ಹಾಗೂ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮುಖೇನ ಭಾರೀ ಸದ್ದು ಮಾಡುತ್ತಿರುವ ಶ್ರೀಲೀಲಾ, ಭಾರತೀಯ ಚಿತ್ರರಂಗದಲ್ಲಿ ಸದ್ಯ ಬಹಳ ಬ್ಯುಸಿಯಿರುವ ನಟಿಯರ ಪೈಕಿ ಇದೀಗ ಮುಂಚೂಣಿಯಲ್ಲಿದ್ದಾರೆ.

ರಾಮ್​ ಪೋತಿನೇನಿ ಮತ್ತು ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ಅಭಿನಯದ 'ಸ್ಕಂದ' ಚಿತ್ರವು ಇದೇ ಸೆ. 28 ರಂದು ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ಸದ್ಯ ಈ ಬೆನ್ನಲ್ಲೇ ನಟಿ, ಪ್ರಭಾಸ್​ ಅವರ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗಷ್ಟೇ 'ಸೀತಾ ರಾಮಂ' ಖ್ಯಾತಿಯ ನಿರ್ದೇಶಕ ಹನು ರಾಘವಪುಡಿ ಪ್ರಭಾಸ್‌ ಅವರಿಗೆ ಕಥೆಯನ್ನು ಹೇಳಿದ್ದು, ಸ್ಟೋರಿಯನ್ನು ನಟ ಇಷ್ಟಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ಶ್ರೀಲೀಲಾ ಅವರೇ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾದು ನೋಡಬೇಕಿದೆ,(ಏಜೆನ್ಸೀಸ್).