ಬಿಹಾರ: ಮಹಿಳೆಯೊಬ್ಬರು ತನ್ನ ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬುದನ್ನು ಅರಿತ ಬೆನ್ನಲ್ಲೇ ಆತ ಕೆಲಸ ಮಾಡುವ ಕಛೇರಿಗೆ ನುಗ್ಗಿ, ಚಪ್ಪಲಿಯಿಂದ ಮನಬಂದಂತೆ ಥಳಿಸಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಬಿಹಾರದ ಔರಂಗಾಬಾದ್ನಲ್ಲಿ ವರದಿಯಾಗಿದೆ.
ಮಹಿಳೆ ತನ್ನ ಗಂಡ, ಆತ ಕೆಲಸ ಮಾಡುವ ಕಛೇರಿಯಲ್ಲೇ ಕಾರ್ಯನಿರ್ವಹಿಸುವ ಮಹಿಳಾ ಅಧಿಕಾರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ದೂರಿದ್ದಾರೆ. ಈ ಹಿನ್ನೆಲೆ ಕಛೇರಿಗೆ ನುಗ್ಗಿದ ಪತ್ನಿ, ಪತಿಯನ್ನು ಎಳೆದಾಡಿ, ಚಪ್ಪಲಿಯಿಂದ ಥಳಿಸಿದ್ದಾರೆ. ಪತ್ನಿಯಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸಿದ ಪತಿಗೆ, ಬೆಂಬಿಡದೆ ಹೊಡೆದ ಮಹಿಳೆ, ತನಗೆ ಮತ್ತು ಮಕ್ಕಳಿಗೆ ಹಣ ಕೊಡದೆ ಪರದಾಡಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Minister B. Nagendra Hits Back At Gali Janardhan Reddy|ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿದ ಬಿ. ನಾಗೇಂದ್ರ
ಘಟನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳೆ, "ನನ್ನ ಪತಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷದಿಂದ ನಾನು ಹೆತ್ತವರ ಮನೆಯಲ್ಲಿಯೇ ಇದ್ದೇನೆ. ನನಗೆ ಮತ್ತು ಮಕ್ಕಳಿಗೆ ಹಣ ನೀಡದ ಕಾರಣ ನಾನು ತುಂಬ ನೊಂದಿದ್ದೇನೆ. ಪತಿ ತನ್ನ ಅಕ್ರಮ ಸಂಬಂಧಕ್ಕಾಗಿ ಎಲ್ಲಾ ಹಣವನ್ನು ಪೋಲು ಮಾಡುತ್ತಿದ್ದಾನೆ. ಇದರಿಂದ ನಮಗೆ ಆರ್ಥಿಕ ಬೆಂಬಲವಿಲ್ಲ" ಎಂದು ಆರೋಪಿಸಿರುವುದಾಗಿ ವರದಿ ತಿಳಿಸಿದೆ,(ಏಜೆನ್ಸೀಸ್).